More

    ಬಗೆದಷ್ಟೂ‌ ಬಯಲಾಗ್ತಿದೆ ನಂದಿ ಲಾಡ್ಜ್ ರಹಸ್ಯ! ಸುರಂಗದಲ್ಲೇ ವೇಶ್ಯಾವಾಟಿಕೆ, ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಲೈ

    ತುಮಕೂರು: ಕ್ಯಾತಸಂದ್ರ ಪೊಲೀಸ್​ ಠಾಣೆ ಕೂಗಳತೆ ದೂರದ ನಂದಿ ಲಾಡ್ಜ್​ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಬಯಲಿಗೆಳೆದಿದೆ. ಲಾಡ್ಜ್ ಸುರಂಗ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದ್ದು, ತುಮಕೂರು ವೇಶ್ಯಾವಾಟಿಕೆ ಹಬ್ ಆಗ್ತಿದ್ಯಾ? ಎಂಬ ಶಂಕೆಯನ್ನೂ ಹುಟ್ಟು ಹಾಕಿದೆ.

    ಇತ್ತೀಚಿಗೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಾಶಿರಾಶಿ ಕಾಂಡೋಮ್​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಈ ದೃಶ್ಯ ಇಡೀ ತುಮಕೂರಿಗರನ್ನೇ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಒಡನಾಡಿ ಸಂಸ್ಥೆಗಳ ಪದಾಧಿಕಾರಿಗಳು ಪೊಲೀಸರ ಸಹಕಾರ ಪಡೆದು ಸೋಮವಾರ ರಾತ್ರಿ ನಂದಿ ಲಾಡ್ಜ್​ ಮೇಲೆ ದಾಳಿ ಮಾಡಿದ್ದರು. ಅಲ್ಲಿದ್ದವರೆಲ್ಲ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರು. ಅನುಮಾನಗೊಂಡು ಟೇಬಲ್ ಕೆಳಗಿದ್ದ ಕಿಂಡಿ ತೆಗೆದು ನೋಡಿದ್ರೆ ಸುರಂಗ ಪತ್ತೆಯಾಗಿತ್ತು. ಒಳಹೊಕ್ಕಿ ನೋಡಿದ್ರೆ ವೇಶ್ಯಾವಾಟಿಕೆ ದಂಧೆಯಲ್ಲಿದ್ದ ಯುವಕ-ಯುವಕತಿಯರು ಅವಿತುಕೊಂಡಿದ್ದರು. ಗಂಟೆಗಳ ಲೆಕ್ಕದಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಇಂತಿಷ್ಟು ರೇಟ್​ ಎಂದು ಫಿಕ್ಸ್​ ಮಾಡಿದ್ದ ಚೀಟಿಗಳು ನಂದಿ ಲಾಡ್ಜ್‌ನಲ್ಲಿ ಪತ್ತೆಯಾಗಿವೆ. ಯುವತಿ ಹಾಗೂ ಮಹಿಳೆ ಎಂದು ವಿಂಗಡಸಿ, ಒಬ್ಬರಿಗೂ ಒದೊಂದು ರೇಟು ಫಿಕ್ಸ್ ಮಾಡಿಕೊಂಡಿದ್ದರು. 800 ರೂಪಾಯಿಯಿಂದ 1200 ರೂ.ಗೆ ಡೀಲ್ ಮಾಡಿಕೊಂಡಿದ್ದ ದಾಖಲಾತಿ ಸಿಕ್ಕಿದೆ.

    ಪಶ್ಚಿಮ‌ ಬಂಗಾಳ ಮೂಲದ ಯುವತಿಯರೂ ಈ ದಂಧೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿತ್ತು. ಪೊಲೀಸರು ಬಂದ್ರೆ ಭಜನೆಯ ಸದ್ದು ಮೊಳಗಿಸುವ ಅಲಾರಂ ಟೆಕ್ನಿಕ್ ಅನ್ನೂ ಕಿಡಿಗೇಡಿಗಳು ಅಳವಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಡ್ರೈನೇಜನ್ನೂ ಬಳಸಿ ಗುಹೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ವೇಶ್ಯಾವಾಟಿಕೆ ದಂಧೆಯ ಪರಿ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆ ಸ್ಟ್ಯಾನ್ಲಿ ಬಿಚ್ಚಿಟ್ಟಿದ್ದಾರೆ.

    ಬಗೆದಷ್ಟೂ‌ ಬಯಲಾಗ್ತಿದೆ ನಂದಿ ಲಾಡ್ಜ್ ರಹಸ್ಯ! ಸುರಂಗದಲ್ಲೇ ವೇಶ್ಯಾವಾಟಿಕೆ, ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಲೈ
    ಇತ್ತೀಚಿಗೆ ತುಮಕೂರಿನ ರಸ್ತೆ ಬದಿ ಬಿದ್ದಿದ್ದ ರಾಶಿರಾಶಿ ಕಾಂಡೋಮ್​

    ಹೈಟೆಕ್ ವೇಶ್ಯಾವಾಟಿಕೆ ನಗರದೆಲ್ಲೆಡೆ ವ್ಯಾಪಕವಾಗಿದ್ದರೂ ಜಿಲ್ಲಾ ಪೊಲೀಸರು ಜಾಣಕುರುಡರಾಗಿದ್ದಾರೆ, ಇಂತಹ ದಂಧೆ ಬಗ್ಗೆ ಖಚಿತ ಮಾಹಿತಿ ಇದ್ದರೂ ಮಾಮೂಲಿ ಪಡೆದು ಪೊಲೀಸರೇ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಈ ಪ್ರಕರಣ ಕೂಡ ಪುಷ್ಟಿ ನೀಡಿದೆ. ನಗರದ ಬಹುತೇಕ ಲಾಡ್ಜ್, ಮನೆಗಳಲ್ಲಿ ವೇಶ್ಯಾವಾಟಿಕೆ, ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವ ಶಂಕೆಯಿದ್ದು, ಪೊಲೀಸರ ಸಹಕಾರದಲ್ಲಿಯೇ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಗುಮಾನಿಯಿದೆ.

    ಹಿರೇಹಳ್ಳಿ ಸಮೀಪ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗದೆ ಕೈಚೆಲ್ಲಿರುವ ಕ್ಯಾತಸಂದ್ರ ಪೊಲೀಸ್ ಠಾಣೆ ಕೂಗಳತೆಯಲ್ಲಿ ನಡೆಯುತ್ತಿದ್ದ ಹೈಟೆಕ್ ದಂಧೆಯನ್ನು ಬಯಲಿಗೆಳೆದಿದ್ದು ಪೊಲೀಸರಲ್ಲ, ಒಡನಾಡಿ ಸ್ವಯಂ ಸೇವಾ ಸಂಸ್ಥೆ!

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಪತ್ನಿ ಕಣ್ಣೆದುರೇ ನವವಿವಾಹಿತ ದುರಂತ ಸಾವು! ಅಳಿಯನ ಪ್ರಾಣ ಉಳಿಸಲು ಹೋದ ಅತ್ತೆಯೂ ಬದುಕಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts