More

    117 ಟನ್ ಒಣದ್ರಾಕ್ಷಿ ಖರೀದಿಸಿ ಹಣ ಕೊಡದೆ ಪರಾರಿಯಾಗಿದ್ದ ಖದೀಮನ ಬಂಧನ: ಇನ್ನುಳಿದ ಆರೋಪಿಗಳಿಗಾಗಿ ಶೋಧ

    ವಿಜಯಪುರ: ಒಂದಲ್ಲ ಎರಡಲ್ಲ ಬರೋಬ್ಬರಿ 117 ಟನ್ ಒಣದ್ರಾಕ್ಷಿ ಖರೀದಿಸಿ ಹಣ ಸಂದಾಯ ಮಾಡದೆ ಪರಾರಿಯಾಗಿದ್ದ ಖದೀಮನ ಹೆಡೆಮುರಿ ಕಟ್ಟಿ ಕರ್ನಾಟಕ ಪೊಲೀಸರು ಗುಜರಾತ್‌ನಿಂದ ಕರೆ ತಂದಿದ್ದಾರೆ. ಗುಜರಾತ್ ಮೂಲದ ಕೃನಾಲಕುಮಾರ ಬಂಧಿತ. ಈತನಿಂದ 2.2 ಕೋಟಿ ರೂ. ಮೌಲ್ಯದ ದಾಸ್ತಾನು ವಶಕ್ಕೆ ಪಡೆಯಲಾಗಿದೆ.

    ಏನಿದು ಪ್ರಕರಣ: ಕಳೆದ ತಿಂಗಳಲ್ಲಿ ವಿಜಯಪುರ ಕೈಗಾರಿಕೆ ಪ್ರದೇಶದಲ್ಲಿರುವ ನಾಲ್ಕು ವಿವಿಧ ಕೋಲ್ಡ್ ಸ್ಟೋರೇಜ್‌ನಿಂದ ಒಣದ್ರಾಕ್ಷಿ ಖರೀದಿಸಿದ್ದ ಗುಜರಾತ್ ಮತ್ತು ರಾಜಸ್ಥಾನ ಮೂಲದ ವ್ಯಾಪಾರಿಗಳು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಮಾಲೀಕರಿಗೆ ನಂಬಿಸಿದ್ದರು. ಈ ಮುಂಚೆ ಇದೇ ರೀತಿ ಖರೀದಿಸಿ ಸಕಾಲಕ್ಕೆ ಹಣ ಸಂದಾಯ ಮಾಡಿದ್ದರು. ಅದನ್ನೇ ನಂಬಿ ಸಿದ್ಧಶ್ರೀ ಸಂಸ್ಥೆಯ ಕೋಲ್ಡ್ ಸ್ಟೋರೇಜ್‌ನ ಸಂತೋಷ್​ಕುಮಾರ ಸಿದ್ರಾಮ ಗುಂಜಟಗಿ, ತೌಫೀಕ್ ಸಲೀಂ ಅಂಗಡಿ, ಜಾಕೀರ್ ಹಾಜಿಲಾಲ ಬಾಗವಾನ ಹಾಗೂ ಅಬ್ದುಲ್‌ಖಾದರ ಮೊಹಮ್ಮದ್‌ಖಾಸೀಮ್ ತಹಸೀಲ್ದಾರ್ ಅವರು ಒಣದ್ರಾಕ್ಷಿ ನೀಡಿದ್ದರು.

    ಹೀಗೆ ಒಣದ್ರಾಕ್ಷಿ ಪಡೆದ ಗುಜರಾತ್ ಮೂಲದ ಕಮಲಕುಮಾರ, ಕೃನಾಲಕುಮಾರ, ಸುನೀಲ್, ಜಯೇಶ ಮತ್ತಿತರರು ಬ್ಯಾಂಕ್ ಖಾತೆಗೆ ಹಣ ನೀಡುವುದಾಗಿ ನಂಬಿಸಿ ಪರಾರಿಯಾಗಿದ್ದರು. ಅಂಗಡಿಗಳ ಮಾಲೀಕರ ಸಂಪರ್ಕಕ್ಕೆ ಇವರು ಸಿಕ್ಕಿರಲಿಲ್ಲ. ಆತಂಕಗೊಂಡು ಗೋಳಗುಮ್ಮಟ ಠಾಣೆಗೆ ದೂರು ನೀಡಿದ್ದರು.

    117 ಟನ್ ಒಣದ್ರಾಕ್ಷಿ ಖರೀದಿಸಿ ಹಣ ಕೊಡದೆ ಪರಾರಿಯಾಗಿದ್ದ ಖದೀಮನ ಬಂಧನ: ಇನ್ನುಳಿದ ಆರೋಪಿಗಳಿಗಾಗಿ ಶೋಧ

    ಚುರುಕಿನ ಕಾರ್ಯಾಚರಣೆ: ಎಸ್‌ಪಿ ಎಚ್.ಡಿ.ಆನಂದಕುಮಾರ ಹಾಗೂ ಎಎಸ್‌ಪಿ ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ ಹಾಗೂ ಸಿಪಿಐ ರಮೇಶ, ಪಿಎಸ್‌ಐ ಉಮೇಶ ಗೆಜ್ಜಿ ನೇತೃತ್ವದ ತಂಡ ಗುಜರಾತ್​ನಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಕೃನಾಲಕುಮಾರನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಪರ ಸ್ತ್ರೀಯರ ಜತೆ ಶಿಕ್ಷಕನ ಕಾಮದಾಟ: ವಿಡಿಯೋ ವೈರಲ್​ ಆಗ್ತಿದ್ದಂತೆ ಮನದನೋವು ಬಿಚ್ಚಿಟ್ಟ ಸಂತ್ರಸ್ತೆ…

    ಬೆಂಗ್ಳೂರಲ್ಲಿ ಒಂಟಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಂದ ವಿದ್ಯಾರ್ಥಿನಿಯನ್ನ ರಕ್ಷಿಸಿದ ತೃತೀಯಲಿಂಗಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts