More

    ಮಗನೇ ನಂಗೇನೂ ಆಗಿಲ್ಲ, ಮನೆಗೆ ಕರೆದುಕೊಂಡು ಹೋಗಪ್ಪಾ… ಕರೊನಾ ಗೆದ್ದ 105 ವರ್ಷದ ಅಜ್ಜಿ

    ಬೆಂಗಳೂರು: ಕರೊನಾ ಹೇಸರು ಕೇಳಿಯೇ ಕೆಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸ್ಫೂರ್ತಿದಾಯಕ ಈ ಶತಾಯುಷಿ ಅಜ್ಜಿಯ ಮನೋಸ್ಥೈರ್ಯ.

    ಮನಸ್ಸಿದ್ದರೇ ಮಾರ್ಗ ಅನ್ನೋದಕ್ಕೆ ಈ ಅಜ್ಜಿಯೇ ಸೂಕ್ತ ಉದಾಹರಣೆ. 105 ವರ್ಷದ ಕಾಳಮ್ಮ ಮಹಾಮಾರಿ ಕರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಇವರಿಗೆ 20 ದಿನಗಳ ಹಿಂದೆ ಕರೊನಾ ಸೋಂಕು ತಗುಲಿತ್ತು. ಇವರ ಪುತ್ರ ಡಾ. ಶಂಕರ್ ಅವರೇ ಕಾಳಮ್ಮನನ್ನು ಕೂಡಲೇ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ವೆಂಟಿಲೇಟರ್​ ಅಳವಡಿಸಲಾಗಿತ್ತು.

    ಡಾ. ಶಂಕರ್​ ಅವರು ಬೆಂಗಳೂರಿನ ಅಪೋಲೋ ಮತ್ತು ಮಣಿಪಾಲ್​ ಆಸ್ಪತ್ರೆಗಳಲ್ಲಿ ಸೀನಿಯರ್ ಫಿಸೀಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಾಳಮ್ಮ ಒಂದೇ ಒಂದು ಡೋಸ್ ರೆಮ್‌ಡೆಸಿವಿರ್‌ ಪಡೆಯದೆ, ಸಾಮಾನ್ಯ ಆ್ಯಂಟಿಬಯಾಟಿಕ್ ಔಷಧ ಪಡೆದು ಕರೊನಾದಿಂದ ಗುಣಮುಖರಾಗಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಂತೆ, ‘ಮಗನೇ ನಂಗೇನೂ ಆಗಿಲ್ಲ, ನನ್ನನ್ನು ಮನೆಗೆ ಕರೆದುಕೊಂಡು ಹೋಗಪ್ಪಾ’ ಎಂದು ಹಠ ಮಾಡಿದ್ದಾರೆ. ಇಂದು(ಸೋಮವಾರ) ಕಾಳಮ್ಮ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

    ಏಕಕಾಲಕ್ಕೆ ಅಕ್ಕ-ತಂಗಿ ಇಬ್ಬರಿಗೂ ತಾಳಿಕಟ್ಟಿದ ಯುವಕ! ಈತ ಕೋಲಾರದ ಉಮಾಪತಿಯಲ್ಲ…

    ರಾಜ್ಯದ ಈ ಐದು ಜಿಲ್ಲೆಯಲ್ಲಿ 54 ವಕೀಲರು ಕರೊನಾಗೆ ಬಲಿ! ಕುಟುಂಬದ 50 ಸದಸ್ಯರೂ ಸಾವು

    ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts