More

    ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್​ಗಳ ನೇಮಕ: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ (ಎಸ್​ಎಐ) 100 ಕೋಚ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ಎಸ್​ಎಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಕೋಚ್ ಹುದ್ದೆಯು ಆರಂಭದಲ್ಲಿ 4 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಪ್ರತಿ ವರ್ಷ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. 100 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 41 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 27, ಎಸ್ಟಿಗೆ 15, ಎಸ್ಸಿಗೆ 7, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 10 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಯಾವ ವಿಭಾಗಗಳಲ್ಲಿ ಹುದ್ದೆ?
    *ಅರ್ಚರಿ- 7, ಅಥ್ಲೆಟಿಕ್ಸ್- 10, ಬಾಸ್ಕೆಟ್ ಬಾಲ್- 2, ಬಾಕ್ಸಿಂಗ್- 7, ಸೈಕ್ಲಿಂಗ್- 7, ಫೆನ್ಸಿಂಗ್- 7, ಫುಟ್ಬಾಲ್- 2, ಜಿಮ್ನಾಸ್ಟಿಕ್ಸ್- 2, ಹಾಕಿ- 7, ಜೂಡೋ- 7, ಕಬಡ್ಡಿ- 2, ಕಯಾಕಿಂಗ್ ಆ್ಯಂಡ್ ಕನೋಯಿಂಗ್- 2, ರೋಯಿಂಗ್- 7, ಶೂಟಿಂಗ್- 7, ಸ್ವಿಮ್ಮಿಂಗ್- 2, ಟೇಬಲ್ ಟೆನಿಸ್- 2, ಟೆಕ್ವಾಂಡೋ- 2, ವಾಲಿಬಾಲ್- 2, ವೇಟ್​ಲಿಫ್ಟಿಂಗ್- 7, ಕುಸ್ತಿ- 7, ವುಶು ವಿಭಾಗದಲ್ಲಿ 2 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ವಿದ್ಯಾರ್ಹತೆ: ಎಸ್​ಎಐ, ಎನ್​ಎನ್​ಐಎಸ್ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೋಚಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು. ಒಲಿಂಪಿಕ್/ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ಒಲಿಂಪಿಕ್/ ಅಂತಾರಾಷ್ಟ್ರೀಯ ಚಾಂಪಿಯನ್​ಸಿಪ್​ನಲ್ಲಿ ಪ್ರಶಸ್ತಿ ಪಡೆದಿರುವ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅಭ್ಯರ್ಥಿಗಳು ಅರ್ಹರು.
    ವಯೋಮಿತಿ: ಅರ್ಜಿ ಸಲ್ಲಿಕೆಗೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 45 ವರ್ಷ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆಗೆ ಅವಕಾಶ ಇದೆ.
    ವೇತನ: ಮಾಸಿಕ 1,05,000 ರೂ. ನಿಂದ 1,50,000 ರೂ. ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಎಸ್​ಎಐ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 15.10.2021
    ಅಧಿಸೂಚನೆಗೆ: https://bit.ly/2YqBzUh
    ಮಾಹಿತಿಗೆ: sportsauthorityofindia.nic.in

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ನರೇಗಾ ಯೋಜನೆಯಡಿ ಆಡಳಿತ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts