ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ನಲ್ಲಿ ನೆಪೋಟಿಸಂ ಬಿರುಗಾಳಿ ಅಲೆ ಜೋರಾಗಿತ್ತು. ಸ್ಟಾರ್ ಮಕ್ಕಳಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗುತ್ತಿತ್ತು. ಅದೇ ರೀತಿ ಆ ಟ್ರೋಲ್ಗಳಿಗೆ ನಟಿ ಸೋನಾಕ್ಷಿ ಸಿನ್ಹಾ ಸಹ ಗುರಿಯಾಗಿದ್ದರು. ಇದೀಗ ಅದೆಲ್ಲವನ್ನು ಎದುರಿಸಿ ಮತ್ತೆ ಸಹಜ ಸಿನಿಮಾ ಜೀವನಕ್ಕೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಐಎಎಸ್ ಅಧಿಕಾರಿ ಶ್ರದ್ಧಾ; ಮೋಹನ್ ಲಾಲ್ ಚಿತ್ರಕ್ಕೆ ನಾಯಕಿ…
ಹೌದು, ಸುದೀರ್ಘ ಎಂಟು ತಿಂಗಳು ಸಿನಿಮಾದಿಂದ ದೂರವೇ ಉಳಿದಿದ್ದ ನಟಿ ಸೋನಾಕ್ಷಿ, ಇದೀಗ ವೆಬ್ಸಿರೀಸ್ವೊಂದರ ಚಿತ್ರೀಕರಣಕ್ಕೆ ಹಾಜರಿ ಹಾಕಲಿದ್ದಾರೆ. ರೀಮಾ ಕಾಗ್ತಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಫಾಲನ್ ವೆಬ್ಸಿರೀಸ್ನಲ್ಲಿ ಸೋನಾಕ್ಷಿ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತಾದರೂ, ಶೂಟಿಂಗ್ ಯಾವಾಗಿಂದ ಎಂಬ ಮಾಹಿತಿ ಲಭ್ಯವಿರಲಿಲ್ಲ. ಇದೀಗ ಡಿಸೆಂಬರ್ನಲ್ಲಿ ಸರಣಿಯ ಚಿತ್ರೀಕರಣ ಆಗಲಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ಅಪ್ ಶುರು ಮಾಡಿದ ನಟ ವಿಜಯ್ ದೇವರಕೊಂಡ
ಗಲ್ಲಿ ಬಾಯ್ ಖ್ಯಾತಿಯ ವಿಜಯ ವರ್ಮಾ, ಗುಲ್ಶನ್ ದೇವಯ್ಯ, ಸೋಹಮ್ ಶಾ ಸೇರಿ ಹಲವು ಕಲಾವಿದರು ಈ ವೆಬ್ಸಿರೀಸ್ನಲ್ಲಿ ಇರಲಿದ್ದಾರೆ. 35 ಕಲಾವಿದರನ್ನು ರಾಜಸ್ತಾನಕ್ಕೆ ಕರೆದೊಯ್ದು ಒಂದೇ ಶೆಡ್ಯೂಲ್ನಲ್ಲಿ ಚಿತ್ರೀಕರಣ ಮುಗಿಸಿಕೊಳ್ಳುವುದು ನಿರ್ದೇಶಕಿ ರೀಮಾ ಪ್ಲಾನ್. ಇನ್ನು ದಬಾಂಗ್ 3 ಸಿನಿಮಾದ ಬಳಿಕ ಸೋನಾಕ್ಷಿ ಬೇರಾವ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನೇನು ಅಜಯ್ ದೇವಗನ್ ಜತೆಗ್ ಭುಜ್ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್)
ಶಾರುಖ್ ಜನ್ಮದಿನಕ್ಕೆ ವಿಶ್ವದಾದ್ಯಂತ ಪಾರ್ಟಿ ಆಯೋಜನೆ ಮಾಡಿದ ಫ್ಯಾನ್ ಕ್ಲಬ್