ಪರ್ತ್: ಹೆಡ್ಫೋನ್ನಿಂದ ಹಾಡು ಕೇಳುವಾಗ ಕಿವಿಯಲ್ಲಿ ಕಚಗುಳಿಯ ಅನುಭವಾಗಿ ಹೆಡ್ ಫೋನ್ ತೆಗೆದು ನೋಡಿದ ಆಸ್ಟ್ರೇಲಿಯಾ ಮೂಲದ ಪ್ಲಂಬರ್ಗೆ ಶಾಕ್ ಒಂದು ಎದುರಾಗಿತ್ತು. ಏನದು ಆ ಶಾಕ್ ಎಂಬ ಕುತೂಹಲವಿದ್ದರೆ ಮುಂದೆ ಓದಿ.
ಪರ್ತ್ ಮೂಲದ ಪ್ಲಂಬರ್ ಕಿವಿಗೆ ಹೆಡ್ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ತನ್ನ ಕೆಲಸದಲ್ಲಿ ನಿರತನಾಗಿದ್ದ. ಹೀಗಿರುವಾಗ ಕೆಲಸದ ನಡುವೆ ಕಿವಿಯಲ್ಲಿ ಕಚಗುಳಿಯ ಅನುಭವವಾಗುತ್ತಿತ್ತು. ಇದರಿಂದ ಕೆಲಸಕ್ಕೂ ತೊಂದರೆಯಾಗುತ್ತಿತ್ತು. ಸರಿ ಏನಿರಬಹುದು ಎಂಬ ಕುತೂಹಲದಿಂದ ಹೆಡ್ಫೋನ್ ತೆಗೆದು ನೋಡಿದ ಪ್ಲಂಬರ್ಗೆ ಹೆಡ್ಫೋನ್ನಲ್ಲಿನ ಸಾಫ್ಟ್ ಪ್ಯಾಡಿಂಗ್ನಲ್ಲಿ ಜೇಡವೊಂದು ಆಶ್ರಯ ಪಡೆದುಕೊಂಡಿದ್ದನ್ನು ನೋಡಿ ಗಾಬರಿಯಾಯಿತು.
ಬಳಿಕ ಜೇಡವನ್ನು ಹೆಡ್ಫೋನ್ನಿಂದ ಹೊರಗಾಕಲು ಎಷ್ಟೇ ಪ್ರಯತ್ನಿಸಿದಾದರೂ ಜೇಡ ಮಾತ್ರ ಜಪ್ಪಯ್ಯ ಅಂದ್ರೂ ಜಗ್ಗಲಿಲ್ಲ. ಆ ಸಾಫ್ಟ್ ಪ್ಯಾಡಿಂಗ್ ಅನುಭವ ಜೇಡಕ್ಕೆ ತುಂಬಾ ಹೊಂದಿಕೊಂಡಿತು ಎನ್ನಲಾಗಿದೆ. ಹೀಗಾಗಿ ಅದರಿಂದ ಹೊರಬರಲು ಜೇಡ ಒಪ್ಪಲಿಲ್ಲ ಎನ್ನುತ್ತಾರೆ ಪ್ಲಂಬರ್.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೆಡ್ಫೋನ್ ಅದಕ್ಕೆ ಸೂಕ್ತ ಸ್ಥಳ ಎನಿಸಿರಬಹುದು. ಹೀಗಾಗಿ ಅದನ್ನು ಬಿಟ್ಟು ಹೊರಬರುತ್ತಿಲ್ಲ ಎಂದು ಕಮೆಂಟಿಸಿದ್ದಾರೆ. (ಏಜೆನ್ಸೀಸ್)
"I felt something tickling my ear": Huntsman spider found hiding in earmuffs
NOOOPE! 😱🕷️Perth plumber Olly Hurst got the fright of his life when he took off his earmuffs to find a huntsman spider hiding inside.He said he could feel something tickling his ear 😲Is this what nightmares are made of? What would you do if this happened to you?📹 Olly Hurst
Posted by ABC Perth on Friday, October 9, 2020