ಬೆಂಗಳೂರು: ಯುವತಿಗೆ ನೌಕರಿ ಕೊಡಿಸುವ ಆಮಿಷವೊಡ್ಡಿದ ಸೈಬರ್ ಕಳ್ಳರು 2 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಮತ್ತಿಕೆರೆಯ ಸ್ನೇಹಾ ಮೋಸಕ್ಕೆ ಒಳಗಾದ ಯುವತಿ. ಆನ್ಲೈನ್ನಲ್ಲಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಶೈನಿ ಡಾಟ್ ಕಾಮ್ ತಂಡದ ಸದಸ್ಯ ರೋಹಿತ್ ಎಂದು ಪರಿಚಯಿಸಿಕೊಂಡಿದ್ದ. ಹೆಲ್ತ್ ಕೇರ್ ಕಂಪನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಿ. ನಿಮ್ಮ ಸ್ವವಿವರವನ್ನು ನಮ್ಮ ಶೈನಿ ಡಾಟ್ ಕಾಂ ನಲ್ಲಿ ಅಪ್ಲೋಡ್ ಮಾಡಿ. ನಿಮಗೆ ಆನ್ಲೈನ್ನಲ್ಲಿ ಸಂದರ್ಶನ ನಡೆಸಲಾಗುತ್ತದೆ ಎಂದು ಹೇಳಿದ್ದಾನೆ. ನಂತರ ಅದಕ್ಕೆ ಠೇವಣಿ ಎಂದು 11 ಸಾವಿರ ರೂ. ಪಾವತಿಸಬೇಕು ಎಂದು ತಿಳಿಸಿದ್ದ. ಆತನ ಮಾತಿನಂತೆ ಹಣ ಸಂದಾಯ ಮಾಡಿದೆ. ತರುವಾಯ ವಿವಿಧ ರೀತಿಯ ಶುಲ್ಕವೆಂದು ನೆಪದಲ್ಲಿ ಒಟ್ಟು 1.94 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಸ್ನೇಹಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್ನಲ್ಲಿ ಅಂಥದ್ದೇನಿದೆ?
ಎಫ್ಐಆರ್ ದಾಖಲಿಸಿಕೊಂಡು ಉತ್ತರ ವಿಭಾಗದ ಸಿಇಎನ್ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.