ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್ ಹರಡುವಿಕೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಹಲವು ಸಂಶೋಧನೆಗಳು ನಡೆಯುತ್ತಿವೆ.
16 ವರ್ಷದ ಬಾಲಕನೊಬ್ಬ ಕರೊನಾ ವೈರಸ್ ಪತ್ತೆ ಮಾಡುವ ಡೋರ್ ಬೆಲ್ ಸಂವೇದಕ ಯಂತ್ರವನ್ನು ಸಂಶೋಧನೆ ಮಾಡಿದ್ದಾನೆ.
ನವದೆಹಲಿಯ ಶಾಲಿಮಾರ್ ಬಾಗ್ ಸಾರ್ವಜನಿಕ ಶಾಲೆಯಲ್ಲಿ ಕಲಿಯುತ್ತಿರುವ ಸಾರ್ಥಕ್ ಎಂಬ ವಿದ್ಯಾರ್ಥಿ ಈ ಯಂತ್ರ ಕಂಡು ಹಿಡಿದಿದ್ದಾನೆ.
ಹೊರಗಡೆಯಿಂದ ಮನೆಗೆ ಆಗಮಿಸುವವರು ಮೊದಲು ಡೋರ್ ಬೆಲ್ ಒತ್ತುತ್ತಾರೆ. ಬೆಲ್ನ ಸ್ವಿಚ್ನಲ್ಲಿ ವೈರಸ್ಗಳು ಉಳಿಯುವ ಅಪಾಯ ಇದೆ. ಹೀಗಾಗಿ ನಮ್ಮ ಮನೆಗೆ ಬಂದವರಲ್ಲಿ ವೈರಸ್ ಇದೆಯೇ ಎಂಬುದನ್ನು ಪತ್ತೆ ಮಾಡಲು ಈ ಯಂತ್ರ ಸಹಾಯ ಮಾಡುತ್ತದೆ.
ಸಂಶೋಧನೆ ಮಾಡಿರುವ ಯಂತ್ರದಲ್ಲಿ ಕ್ಯಾಮರ ಸೇರಿದಂತೆ ಹಲವು ಉಪಕರಣಗಳನ್ನು ಅಳವಡಿಸಲಾಗಿದೆ. ವ್ಯಕ್ತಿ ಯಂತ್ರದ ಬಳಿ ಬರುತ್ತಲೇ ಆತನಲ್ಲಿ ವೈರಸ್ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಮಾಹಿತಿ ಕಂಪ್ಯೂಟರ್ ಪರದೆ ಮೇಲೆ ತೆರೆದುಕೊಳ್ಳುತ್ತದೆ ಎಂದು ಸಾರ್ಥಕ್ ತಿಳಿಸಿದ್ದಾನೆ. (ಏಜೆನ್ಸೀಸ್)
ವಿಜಯಪುರದಲ್ಲಿ 11, ಕಲಬುರಗಿಯಲ್ಲಿ 5 ಹೊಸ ಪ್ರಕರಣ: 400ರ ಗಡಿ ದಾಟಿದ ಸೋಂಕಿತರ ಸಂಖ್ಯೆ- ನಿಮ್ಮ ಜಿಲ್ಲೆಯಲ್ಲಿ ಎಷ್ಟು?