ನವದೆಹಲಿ: ಕೋವಿಡ್ 19 ಪಿಡುಗಿನ ಜಾಗತಿಕ ಕೇಂದ್ರ ಬಿಂದು ಎಂಬ ಕುಖ್ಯಾತಿಯ ಚೀನಾದ ವುಹಾನ್ನಲ್ಲಿ ಈಗ ಕರೊನಾ ವೈರಸ್ ಬಳಿಕ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ಸೋಂಕಿನಿಂದಾಗಿ ಹಲವು ತಿಂಗಳು ಲಾಕ್ಡೌನ್ನಿಂದಾಗಿ ವಹಿವಾಟು ಸ್ತಬ್ಧವಾಗಿದ್ದು, ಅಂಗಡಿ ಮಳಿಗೆಗಳ ಬಾಡಿಗೆಯನ್ನು ಒಂದು ವರ್ಷ ಮಾಫಿ ಮಾಡಬೇಕು ಇಲ್ಲವೇ ಮುಂಗಡ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮಳಿಗೆಗಳ ಮಾಲೀಕರು ಪ್ರತಿಭಟನೆ ಆರಂಭಿಸಿದ್ದಾರೆ.
ಪ್ರತಿಭಟನೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದ ಮಳಿಗೆಗಳ ಮಾಲೀಕರು ಒಂದೊಂದು ಮೀಟರ್ ಅಂತರದಲ್ಲಿ ಕುಳಿತು ಗ್ರ್ಯಾಂಡ್ ಓಷನ್ ಡಿಪಾರ್ಟ್ಮೆಂಟ್ ಸ್ಟೋರ್ ಎದುರು ಪ್ರತಿಭಟನೆ ನಡೆಸಿದರು. ಮಾಸ್ಕ್ ಧರಿಸಿದ್ದ ಪ್ರತಿಭಟನಾಕಾರರು, ಬಾಡಿಗೆಯನ್ನು ಒಂದು ವರ್ಷ ಮಾಫಿ ಮಾಡಬೇಕು ಎಂಬ ಹಕ್ಕೊತ್ತಾಯದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಬಾಡಿಗೆಯನ್ನು ಮಾಫಿ ಮಾಡಲು ಸಾಧ್ಯವಿಲ್ಲ ಎಂದಾದರೆ, ಲೀಸ್ ಮೊತ್ತವನ್ನು ಹಿಂದಿರುಗಿಸುವಂತೆಯೂ ಆಗ್ರಹಿಸಿದರು.
ಲಾಕ್ಡೌನ್ನಿಂದಾಗಿ ಭಾರಿ ನಷ್ಟವಾಗಿದೆ. ಇದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಕೊಟ್ಟಿರುವ ಮುಂಗಡ ಹಣವನ್ನು ಮರಳಿಸುವ ಜತೆಗೆ 3 ತಿಂಗಳು ಲಾಕ್ಡೌನ್ ಅವಧಿಯ ಬಾಡಿಗೆಯನ್ನು ಮಾಫಿ ಮಾಡುವಂತೆ ಮಹಿಳೆಯೊಬ್ಬರು ಭಿತ್ತಿಪತ್ರ ಪ್ರದರ್ಶಿಸಿದ್ದು ವಿಶೇಷವಾಗಿ ಗಮನಸೆಳೆಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕವಾಗಿ ಬ್ಯಾಟರಾಯನಪುರ, ಪಾದರಾಯನಪುರ ಸೀಲ್ ಡೌನ್: ಭಾಸ್ಕರ್ ರಾವ್