More

    ಬೆಳಗಾವಿ ಗಡಿ ವಿವಾದವಲ್ಲ, ಬಾಷಾ ವಿವಾದವಾಗಿದೆ- ಉಭಯ ಸಿಎಂಗಳು ಮಾತುಕತೆ ನಡೆಸಿ ತುರ್ತು ಪರಿಹಾರ ಕಾಣಬೇಕು ಎಂದ ಸಂಜಯ್ ರಾವತ್

    ಮುಂಬೈ: ಬೆಳಗಾವಿ ವಿಚಾರದಲ್ಲಿ ಮರಾಠಿಗರು ಪದೇಪದೆ ಕಿರಿಕ್ ಮಾಡುತ್ತಿದ್ದು, ಇದೀಗ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯ ಆದ ನಂತರದಲ್ಲಿ ಅದಕ್ಕೆ ಹೆಚ್ಚಿನ ಕಿಚ್ಚು ಹಚ್ಚುವ ಲಕ್ಷಣಗಳು ಗೋಚರಿಸಿವೆ.

    ಬೆಳಗಾವಿಗೆ ಬಂದು ಶಾಂತಿ ಸುವ್ಯವಸ್ಥೆ ಕದಡಲು ಮಹಾರಾಷ್ಟ್ರದ ಸಚಿವರೊಬ್ಬರು ಪ್ರಯತ್ನಿಸಿದ ಬೆನ್ನಲ್ಲೇ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ಭಾನುವಾರವೂ ಅದನ್ನು ಮುಂದುವರಿಸಿದ್ದಾರೆ.

    ಬೆಳಗಾವಿ ಮತ್ತು ಇತರ ಪ್ರದೇಶಗಳಲ್ಲಿರುವ ಮರಾಠಿ ಜನ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕಳೆದ 70 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈಗ ಈ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದ್ದು, ಇದರ ಬಗ್ಗೆ ಮಾತನಾಡುವುದು ನ್ಯಾಯಾಂಗ ನಿಂದನೆಯಾಗಬಹುದು. ಹೀಗಾಗಿ ನಾವು ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆಬಾಗುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

    ಹೀಗಾಯ್ತು ನೋಡಿ: ಮಹಾ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ವಾಪಸ್ ಅಟ್ಟಿದ ಖಾಕಿ

    ಅಲ್ಲದೆ, ಆ ಪ್ರದೇಶದಲ್ಲಿ ಲಕ್ಷಾಂತರ ಮರಾಠಿಗರಿದ್ದು ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಗಡಿ ಸಮಸ್ಯೆಯನ್ನು ಬದಿಗಿಡಿ. ಆದರೆ, ಭಾಷಾ ಸಮಸ್ಯೆಯನ್ನು ಮುಂದೆ ತರಬೇಡಿ ಎಂದು ಕರ್ನಾಟಕ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ವಿಷಯವಾಗಿ ನಾನು ಮುಖ್ಯಮಂತ್ರಿ ಠಾಕ್ರೆಯವರ ಜತೆಗೂ ಮಾತನಾಡುತ್ತೇನೆ. ಅವರಿಬ್ಬರೂ ಈ ವಿಚಾರವಾಗಿ ತುರ್ತು ಮಾತುಕತೆ ನಡೆಸಬೇಕು. ಇದಕ್ಕೊಂದು ಪರಿಹಾರ ಕಾಣಬೇಕು ಎಂದು ಆಗ್ರಹಿಸುತ್ತೇನೆ ಎಂದು ರಾವತ್ ಹೇಳಿದ್ದಾರೆ (ಏಜೆನ್ಸೀಸ್)

    ನಿನ್ನೆ ಹೀಗೆ ಹೇಳಿದ್ರು: ಪಾಕಿಸ್ತಾನಿಗಳು ಭಾರತ ಪ್ರವೇಶಿಸಬಹುದಾದ್ರೆ ಮಹಾರಾಷ್ಟ್ರದವರು ಬೆಳಗಾವಿಗೆ ಭೇಟಿ ನೀಡಬಾರದಾ?: ಸಂಜಯ್​ ರಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts