More

  ಸರ್ಕಾರ ನನ್ನ ಫೋನ್ ಟ್ಯಾಪ್ ಮಾಡಿತ್ತು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ: ಶಿವಸೇನೆ ನಾಯಕ ಸಂಜಯ್ ರಾವತ್

  ಮುಂಬೈ: ಮಹಾರಾಷ್ಟ್ರದಲ್ಲಿ ಈ ಹಿಂದೆ ಇದ್ದ ದೇವೇಂದ್ರ ಫಡ್ನಾವೀಸ್ ಸರ್ಕಾರ ನನ್ನ ಫೋನ್ ಟ್ಯಾಪ್ ಮಾಡಿತ್ತು ಎಂದು ಬಿಜೆಪಿ ನಾಯಕರೊಬ್ಬರು ನನ್ನ ಬಳಿ ಹೇಳಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಶುಕ್ರವಾರ ಆರೋಪಿಸಿದ್ದಾರೆ.

  ನಾನು ಏನೇ ಮಾಡಿದರೂ ಅದನ್ನು ಎಲ್ಲರಿಗೂ ತಿಳಿಯುವಂತೆಯೇ ಮಾಡುತ್ತೇನೆ. ನಾನು ಬಾಳಾ ಸಾಹೇಬರ ಅನುಯಾಯಿ. ನಾನು ಹೇಳುವುದನ್ನು ಯಾರಾದರೂ ಕೇಳಿಸಿಕೊಳ್ಳುತ್ತಾರೆ ಎಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ. ನನ್ನ ಫೋನ್ ಟ್ಯಾಪ್ ಮಾಡಿದ್ದರ ಹೊರತಾಗಿಯೂ ನಾವು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದೇವೆ ಎಂದು ಟಾಂಗ್ ನೀಡಿದರು.

  ನಿನ್ನೆಯಷ್ಟೇ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಹಿಂದಿನ ಸರ್ಕಾರ ಸೈಬರ್ ಸೆಲ್​ ಅನ್ನು ಮತ್ತು ಸರ್ಕಾರಿ ಯಂತ್ರವನ್ನು ವಿಪಕ್ಷ ನಾಯಕರ ಫೋನ್ ಟ್ಯಾಪ್ ಮಾಡಲು ದುರುಪಯೋಗ ಮಾಡಿಕೊಂಡಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸೈಬರ್ ಸೆಲ್​ಗೆ ಸೂಚಿಸಲಾಗಿದೆ ಎಂದು ಹೇಳಿದ್ದರು.  ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕೂಡ ಫಡ್ನಾವೀಸ್ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದರು. (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts