More

    ವರ್ಗಾವಣೆ ಪತ್ರ ಕೊಡಲು ಲಂಚಕ್ಕೆ ಬೇಡಿಕೆ; ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ

    ಬೆಂಗಳೂರು: ವಿದ್ಯಾರ್ಥಿ ಓರ್ವನ ಪರೀಕ್ಷೆಯ ಫಲಿತಾಂಶವನ್ನು ತಡೆ ಹಿಡಿದು, ವರ್ಗಾವಣೆ ಪತ್ರ ನೀಡಲು ಆತನ ಪಾಲಕರಿಗೆ 5,000 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ರಾಜಾಜಿನಗರದ ಬಸವೇಶ್ವರ ಪ್ರೌಢ ಶಾಲೆಯ ಪ್ರಾಂಶುಪಾಲ ವಿ. ನಾರಾಯಣ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಆರೋಪಿ.

    ವಿದ್ಯಾರ್ಥಿಯೂ ಬಸವೇಶ್ವರ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಆತನ ಪರೀಕ್ಷೆಯ ಫಲಿತಾಂಶವನ್ನು ಪ್ರಾಂಶುಪಾಲ ಮೊದಲಿಗೆ ತಡೆ ಹಿಡಿದಿದ್ದಾನೆ.

    School Principal

    ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದ ಕಾರು; ನವವಿವಾಹಿತರು ಸೇರಿದಂತೆ ನಾಲ್ವರು ಸಜೀವ ದಹನ

    ಬಳಿಕ ಆತನ ಪೋಷಕರು ಬೇರೊಂದು ಶಾಲೆಗೆ ಸೇರಿಸ ಬೇಕಿರುವ ಕಾರಣ ವರ್ಗಾವಣೆ ಪತ್ರ(TC) ನೀಡುವಂತೆ ವಿನಂತಿಸಿದಾಗ ಆರೋಪಿಯೂ ವಿದ್ಯಾರ್ಥಿಯ ಸಮ್ಮುಖದಲ್ಲಿಯೇ 5,000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ.

    ಪ್ರಾಂಶುಪಾಲನ ವರ್ತನೆಯಿಂದ ಬೇಸತ್ತಿದ್ದ ವಿದ್ಯಾರ್ಥಿಯ ಪಾಲಕರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ಧಾರೆ. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಹಿರಿಯ ಅಧಿಕಾರಿ ಬಸವರಾಜ ಮಗದುಮ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಲಂಚದ ಹಣ ಸ್ವೀಕರಿಸುವ ವೇಳೆ ಸಾಕ್ಷಿ ಸಮೇತ ಹಿಡಿದು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts