More

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    ನವದೆಹಲಿ: ಎಂಥವರಿಗೇ ಆದರೂ ತಮ್ಮ ಹೃದಯವನ್ನು ಕಣ್ಣೆದುರಿಗೇ ನೋಡಲು ಆಗುವುದಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆಗೆ ಅತ್ಯಪರೂಪ ಎಂಬ ಅಂಥ ಅವಕಾಶವೊಂದು ಸಿಕ್ಕಿದೆ. 22 ವರ್ಷ ತನ್ನೊಳಗೇ ಇದ್ದ ಹೃದಯವನ್ನು ಈಕೆ 16 ವರ್ಷಗಳ ಬಳಿಕ ಅದನ್ನು ಮ್ಯೂಸಿಯಮ್​ನಲ್ಲೇ ಕಣ್ಣೆದುರೇ ಕಂಡಿದ್ದಾಳೆ.

    ಜೆನ್ನಿಫರ್ ಸಟಾನ್ ಎಂಬ 38 ವರ್ಷದ ಮಹಿಳೆ ಲಂಡನ್​ನ ಹಂಟೇರಿಯನ್ ಮ್ಯೂಸಿಯಮ್​ನಲ್ಲಿ ತನ್ನದೇ ಹೃದಯವನ್ನು ಕಣ್ಣಾರೆ ವೀಕ್ಷಿಸಿದ್ದಾಳೆ. 2007ರಲ್ಲಿ ಹೃದಯದ ಕಸಿಗೆ ಒಳಗಾಗಿದ್ದ ಈಕೆ 16 ವರ್ಷಗಳ ಬಳಿಕ ತನ್ನ ಆ ಹೃದಯನ್ನು ನೋಡಿದ್ದಾಳೆ. ತನ್ನದೇ ಹೃದಯವನ್ನು ನೋಡಿ, ‘ಇದು ನಂಬಲಾಗದ ಅತಿವಾಸ್ತವ’ ಎಂದೂ ಉದ್ಗರಿಸಿದ್ದಾಳೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇದು ನನ್ನ ದೇಹದೊಳಗೇ ಇತ್ತು ಎಂಬುದು ಒಳಗೆ ಬರುತ್ತಿದ್ದಂತೆ ತಿಳಿಯುತ್ತಿದ್ದ ಹಾಗೇ ಅಚ್ಚರಿ ಅನಿಸಿತು. ಇದು ನನ್ನ ಸಂಗಾತಿಯಂತೆ, ಇದು ನನ್ನನ್ನು 22 ವರ್ಷಗಳ ಕಾಲ ಜೀವಂತವಾಗಿರಿಸಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇದರ ಬಗ್ಗೆ ಸಾಕಷ್ಟು ಹೆಮ್ಮೆಪಡುತ್ತೇನೆ. ಅನೇಕ ಸಂರಕ್ಷಿತ ವಸ್ತುಗಳನ್ನು ನಾನು ಜಾಡಿಗಳಲ್ಲಿ ನೋಡಿದ್ದೇನೆ, ಆದರೆ ಇದು ನಿಜವಾಗಿಯೂ ನನ್ನದು ಎನ್ನುವುದು ತುಂಬಾ ವಿಚಿತ್ರವಾಗಿದೆ ಎಂದು ಆಕೆ ತನ್ನ ಅನಿಸಿಕೆ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!

    22ನೇ ವಯಸ್ಸಿನಲ್ಲಿ ಯುನಿವರ್ಸಿಟಿ ವಿದ್ಯಾರ್ಥಿನಿಯಾಗಿದ್ದಾಗ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದುದನ್ನು ನೆನಪಿಸಿಕೊಂಡ ಈಕೆ, ತಾನು ಕಾರ್ಡಿಯೋಮಯೋಪಥಿಗೆ ಒಳಗಾಗಿದ್ದನ್ನು ಸ್ಮರಿಸಿಕೊಂಡಿದ್ದಾಳೆ. ನಂತರ ಹೊಂದಿಕೆಯಾಗುವ ಹೃದಯ ದಾನ ಪಡೆದು ಈಕೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಕಸಿ ಮಾಡಲಾಗಿತ್ತು. ಅದಾದ ಹದಿನಾರು ವರ್ಷಗಳ ಬಳಿಕ ತನ್ನ ಜೀವನದ ಬಗ್ಗೆ ಹೇಳಿಕೊಂಡಿರುವ ಜೆನಿಫರ್, ತನ್ನ ಹೃದಯವನ್ನು ಪ್ರದರ್ಶನಕ್ಕೆ ಇಡುವ ಕುರಿತು ರಾಯಲ್ ಕಾಲೇಜ್​ ಆಫ್ ಸರ್ಜನ್ಸ್​ಗೆ ಅನುಮತಿ ನೀಡಿದ್ದನ್ನೂ ಹಂಚಿಕೊಂಡಿದ್ದಾಳೆ. ಪ್ರದರ್ಶನದಲ್ಲಿರುವ ತನ್ನ ಹೃದಯ ಅಂಗಾಂಗದಾನದ ಕುರಿತು ಅರಿವು/ಜಾಗೃತಿ ಮೂಡಿಸುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿರುವ ಜೆನಿಫರ್, ‘ಇದು ನಾನು ಈ ಸಮಾಜಕ್ಕೆ ನೀಡಬಹುದಾದ ಅತಿ ದೊಡ್ಡ ಕೊಡುಗೆ’ ಎಂದಿದ್ದಾಳೆ ಎಂದು ಬಿಬಿಸಿ ವರದಿ ಮಾಡಿದೆ. –ಏಜೆನ್ಸೀಸ್

    2000 ರೂ. ನೋಟು ಹಿಂಪಡೆದ ಆರ್​ಬಿಐ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಬಿಜೆಪಿ ಮುಖಂಡ: ಆಕ್ಷೇಪವೇನು?

    ಮುಖ್ಯಮಂತ್ರಿ ಮೊಮ್ಮಗ ಕೆನಡಿಯನ್ ಇಂಟರ್​​ನ್ಯಾಷನಲ್ ಸ್ಕೂಲ್​ನಲ್ಲಿ 12ನೇ ತರಗತಿ ಪಾಸ್; ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts