ಬೆಂಗಳೂರು: ಯುಗಾದ ಹಬ್ಬದ ದಿನ ಅಭಿಷೇಕ್ ಅಂಬರೀಷ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗುತ್ತದೆ ಎಂದು ಒಂದು ವಾರದ ಮುಂಚೆಯೇ ಸುದ್ದಿಯಾಗಿತ್ತು. ಹಾಡು ಇದೀಗ ಕೊನೆಗೂ ಯೂಟ್ಯೂಬ್ನ ಆನಂದ್ ಆಡಿಯೋ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಮತ್ತೆ ಕನ್ನಡಕ್ಕೆ ಶಿಲ್ಪಾ ಶೆಟ್ಟಿ; ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದಲ್ಲಿ ನಟನೆ
‘ಲೈಫ್ ಅಂದ್ರೆ ಗೇಮು ಹಿಡಿಯೋ ಲಗಾಮು’ … ಎಂದು ಸಾಗುವ ಈ ಹಾಡನ್ನು ಹಿರಿಯ ಗಾಯಕಿ ಉಷಾ ಉತ್ತುಪ್ ಮತ್ತು ಆಕಾಶ್ ಜಾಕೋಬ್ ಹಾಡಿದ್ದಾರೆ. ಇದುವರೆಗೂ ಹಲವು ಕನ್ನಡ ಹಾಡುಗಳನ್ನು ಹಾಡಿರುವ ಉಷಾ ಉತ್ತುಪ್ ಬಹಳ ವರ್ಷಗಳ ನಂತರ ಈ ಹಾಡಿಗೆ ಧ್ವನಿಯಾಗಿದ್ದಾರೆ. ಚರಣ್ ರಾಜ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ. ಇನ್ನು, ಧನಂಜಯ್ ಈ ಹಾಡಿನ ನೃತ್ಯ ನಿರ್ದೇಶಕರು. ಇಡೀ ಹಾಡು ಮೈಕಲ್ ಜಾಕ್ಸನ್ ಅವರ ಪಾಪ್ ಹಾಡುಗಳನ್ನು ನೆನಪಿಸುವಂತಿದೆ.
‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ಹಾಡಿನ ಚಿತ್ರೀಕರಣದೊಂದಿಗೆ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮೇ ತಿಂಗಳಲ್ಲಿ ಅಂಬರೀಷ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ‘ಕಾಟೇರ’ ಚಿತ್ರದಲ್ಲಿ ಮಾಲಾಶ್ರೀ ಮಗಳು ಹೀಗೆ ಕಾಣ್ತಾರೆ ನೋಡಿ …
‘ಬ್ಯಾಡ್ ಮ್ಯಾನರ್ಸ್’ ಚಿತ್ರವನ್ನು ಸ್ಟುಡಿಯೋಸ್ 18ನಡಿ ಕೆ.ಎಂ. ಸುಧೀರ್ ನಿರ್ಮಿಸಿದ್ದು, ಸೂರಿ ನಿರ್ದೇಶನ ಮಾಡಿದ್ದಾರೆ. ಸುರೇಂದ್ರನಾಥ್ ಮತ್ತು ಆಮ್ರಿ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್, ರಚಿತಾ ರಾಮ್, ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರಾ ಮುಂತಾದವರು ನಟಿಸಿದ್ದಾರೆ. ಚರಣ್ರಾಜ್ ಸಂಗೀತ ಮತ್ತು ಶೇಖರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಬೆನ್ನು ನೋವಿನ ಭಯ; ಇನ್ಮುಂದೆ ಸಾಮಿ..ಸಾಮಿ ಎಂದು ಕುಣಿಯಲ್ಲ ಎಂದ ರಶ್ಮಿಕಾ!