More

    ಆರೋಹಣ ಹಾದಿಯಲ್ಲಿ ಕ್ರೀಡಾ ಭಾರತ..

    ಆರೋಹಣ ಹಾದಿಯಲ್ಲಿ ಕ್ರೀಡಾ ಭಾರತ..ಅಭಿವೃದ್ಧಿ ಬಯಸುವವರಿಗೆ ಉತ್ತಮ ದೂರದೃಷ್ಟಿ ಇರಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ. ಉತ್ತಮ ಯೋಜನೆ ಹಾಕಿಕೊಂಡರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ಭಾರತ ಕಳೆದ 8 ವರ್ಷಗಳಲ್ಲಿ ಕ್ರೀಡೆಯಲ್ಲಿ ಅಪಾರವಾದ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಿದೆ. ಆ ಯಶಸ್ಸಿನ ಫಲವೇ ಕಳೆದ ಬಾರಿಯ ಒಲಿಂಪಿಕ್ಸ್ ಹಾಗೂ ಈ ಬಾರಿಯ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳಿಗೆ ಮುತ್ತಿಡಲು ಸಾಧ್ಯವಾಯಿತು. ಈ ಎಲ್ಲ ಯಶಸ್ಸಿನ ಹಿಂದಿರುವ ಶಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ.

    ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಖೇಲ್ ಮಹಾಕುಂಭ ಉತ್ಸವವನ್ನು ಜಾರಿಗೆ ತಂದರು. ಇದು ಆ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಕ್ರೀಡಾಪಟುಗಳಿಗೆ ವೇದಿಕೆ ನೀಡಿತು. ಅದೇ ರೀತಿಯ ಯೋಜನೆಯನ್ನು ಪ್ರಧಾನಿಯಾದ ಬಳಿಕ ಜಾರಿಗೆ ತಂದರು. ಅದೇ ಖೇಲೋ ಇಂಡಿಯಾ ಯೋಜನೆ. ಬರೀ ಆಟವಾಡಿದರೆ ಸಾಲದು ಕ್ರೀಡಾಪಟುಗಳು ಫಿಟ್ ಅಂದರೆ ದೈಹಿಕವಾಗಿ ಸಮರ್ಥರಾಗಿರಬೇಕು, ಅದಕ್ಕಾಗಿಯೇ ಜಾರಿಗೆ ತಂದಿದ್ದು ಫಿಟ್ ಇಂಡಿಯಾ. ಜತೆಯಲ್ಲಿ ಖೇಲೋ ಇಂಡಿಯಾ ಯೂಥ್ ಗೇಮ್್ಸ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್್ಸ. ಈ ಯೋಜನೆಗಳು ನೀಡಿದ ಫಲವೇ ಇಂದು ಭಾರತ ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಲು ಕಾರಣವಾಗಿದೆ.

    ಭಾರತ ಈ ಬಾರಿಯ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದೆ. ಇದು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ತಂದುಕೊಟ್ಟಿದೆ. ಇದು ನಿಜವಾಗಿಯೂ ಅಗ್ರ ಸ್ಥಾನ ಎಂದರೆ ತಪ್ಪಾಗಲಾರದು. 2010ರಲ್ಲಿ ಭಾರತ 39 ಚಿನ್ನ ಸೇರಿದಂತೆ 101 ಪದಕಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿತ್ತು. ಆಗ ಆರ್ಚರಿ ಮತ್ತು ಶೂಟಿಂಗ್ ಇತ್ತು. ಅಲ್ಲದೆ ಅದು ಭಾರತದ ನೆಲದಲ್ಲಿಯೇ ನಡೆದ ಕ್ರೀಡಾಕೂಟ. ಮನೆಯಂಗಣದಲ್ಲಿ ಗೆಲ್ಲುವುದಕ್ಕೂ, ಮನೆಯಿಂದ ಹೊರಗಡೆ ಸಾಧನೆ ಮಾಡುವುದಕ್ಕೂ ವ್ಯತ್ಯಾಸವಿದೆ. 2018ರಲ್ಲಿ ಭಾರತ ಗೋಲ್ಡ್​ಕೋಸ್ಟ್ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತ್ತು. ಗ್ಲಾಸ್ಗೋದಲ್ಲಿ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕ ಗೆದ್ದು, ಐದನೇ ಸ್ಥಾನ ಗಳಿಸಿತ್ತು. ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿನ ಭಾರತದ ಸಾಧನೆಯನ್ನು ಸಿಂಹಾವಲೋಕನ ಮಾಡಿದಾಗ ದೇಶ ಸಾಧನೆಯ ಹಾದಿಯಲ್ಲಿ ಆರೋಹಣದಲ್ಲಿದೆ ಎಂಬುದು ಸ್ಪಷ್ಟ.

    ಏಕೆ ಎರಡನೇ ಸ್ಥಾನ ತಪ್ಪಿತು?: ಕಾಮನ್​ವೆಲ್ತ್ ಸಂಘಟಕರು ಕೆಲವು ಕ್ರೀಡೆಗಳನ್ನು ಕೈಬಿಟ್ಟಿದ್ದಾರೆ. ಅದರಲ್ಲಿ ಶೂಟಿಂಗ್ ಮತ್ತು ಆರ್ಚರಿ ಮುಖ್ಯವಾದುದು. ಭಾರತ ಈ ಎರಡು ಕ್ರೀಡೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಭುತ್ವ ಸಾಧಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಶೂಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಭಾರತ ಅಗ್ರ ಸ್ಥಾನ ಗಳಿಸಿತ್ತು. ಆರ್ಚರಿಯಲ್ಲಿಯೂ ಭಾರತ ಉತ್ತಮ ಪ್ರದರ್ಶನ ತೋರಿದೆ. ಆದ್ದರಿಂದ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಭಾರತದ ಶೂಟರ್ಸ್ ಮತ್ತು ಆರ್ಚರ್​ಗಳಿಗೆ ಕಷ್ಟವಾದುದಲ್ಲ. ಈ ಎರಡು ಕ್ರೀಡೆಗಳು ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಇಲ್ಲದಿರುವುದು ಪದಕಗಳ ಪಟ್ಟಿಯಲ್ಲಿ ಹಿನ್ನಡೆಗೆ ಕಾರಣವಾಯಿತು.

    ಕ್ರೀಡಾ ಯಶಸ್ಸಿಗೆ ಪೂರಕವಾದ ಯೋಜನೆಗಳು

    ಇಂದು ಚೈನಾ, ಜಪಾನ್ ಮತ್ತು ಕೊರಿಯಾ ದೇಶಗಳನ್ನು ಭಾರತವು ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ವೇಯ್್ಟ ಲಿಫ್ಟಿಂಗ್ ಕ್ರೀಡೆಗಳಲ್ಲಿ ಹಿಂದಿಕ್ಕಲು ಪ್ರಾಥಮಿಕ ಹಂತದ ಕ್ರೀಡಾ ಯೋಜನೆಗಳೇ ಕಾರಣ. 2016ರವರೆಗೂ ರಾಜೀವ್ ಗಾಂಧಿ ಖೇಲ್ ಅಭಿಯಾನ, ನಗರ ಕ್ರೀಡಾ ಮೂಲಸೌಕರ್ಯ ಯೋಜನೆ ಮತ್ತು ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಣೆ ಪದ್ಧತಿಯಂಥ ಯೋಜನೆ ಜಾರಿಯಲ್ಲಿದ್ದವು. ಅವು ಜಾರಿಯಲ್ಲಿದ್ದವು ಅನ್ನುವುದನ್ನು ಬಿಟ್ಟರೆ ಯಾವ ರೀತಿಯಲ್ಲಿ ಕಾರ್ಯವೆಸಗುತ್ತಿವೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಬಿಡಿ, ಸ್ವತಃ ಕ್ರೀಡಾಪಟುಗಳಿಗೇ ಗೊತ್ತಿರಲಿಲ್ಲ. ಈ ತುಂಡು ತುಂಡಾದ ಯೋಜನೆಗಳನ್ನು ಒಂದುಗೂಡಿಸಿ ಖೇಲೋ ಇಂಡಿಯಾ ಎಂಬ ಅದ್ಭುತ ಯೋಜನೆಯನ್ನು ಜಾರಿಗೆ ತರಲಾಯಿತು. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕ್ರೀಡಾ ಸೌಲಭ್ಯವನ್ನು ಒದಗಿಸುವುದು ಮತ್ತು ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ವಾರ್ಷಿಕ ಕ್ರೀಡಾಕೂಟವನ್ನು ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

    ಖೇಲೋ ಇಂಡಿಯಾ ಸ್ಕೂಲ್ ಗೇಮ್್ಸ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್್ಸ ಮತ್ತು ಖೇಲೋ ಇಂಡಿಯಾ ಯೂಥ್ ಗೇಮ್್ಸ ಇಂದು ದೇಶದ ಕೋಟ್ಯಂತರ ಕ್ರೀಡಾಪಟುಗಳಿಗೆ ವೇದಿಕೆಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ತಂಡಗಳನ್ನು ದೇಶದ ಪ್ರತಿಷ್ಠಿತ ಲೀಗ್ ಪ್ರೊ ಕಬಡ್ಡಿಯಲ್ಲಿ ಆಟಗಾರರ ಹರಾಜಿನಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಬಹುದು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅತ್ಯಂತ ಕಿರಿಯ ಈಜುಪಟು ಶ್ರೀಹರಿ ನಟರಾಜ್ ಖೇಲೋ ಇಂಡಿಯಾ ಸ್ಕೂಲ್ ಗೇಮ್್ಸ ಮತ್ತು ಯೂನಿವರ್ಸಿಟಿ ಗೇಮ್ಸ್​ಗಳಲ್ಲಿ ಚಾಂಪಿಯನ್ ಪಟ್ಟ ಗೆದ್ದ ಈಜುಪಟು. ಇದು ಕರ್ನಾಟಕದ ಒಂದು ಉದಾಹರಣೆಯಾದರೆ ದೇಶದ ವಿವಿಧ ರಾಜ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಪಟುಗಳು ಖೇಲೋ ಇಂಡಿಯಾ ವೇದಿಕೆಯಿಂದ ಬಂದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇನ್ನೊಂದು ಗಮನಿಸುವ ಸಂಗತಿ ಎಂದರೆ ಯೋಜನೆಗಳ ಕಾರ್ಯವೈಖರಿಯನ್ನೂ ಪ್ರಧಾನಿ ಖುದ್ದು ಗಮನಿಸಿದ್ದಾರೆ. ಯುವ ಸಾಧಕರನ್ನು ಪೋ›ತ್ಸಾಹಿಸಲು ಶಾಲಾ ಹಂತದಲ್ಲೇ ಕ್ರೀಡಾ ವಿದ್ಯಾರ್ಥಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಖೇಲೋ ಇಂಡಿಯಾದಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಖಾತೆಗೆ ನಗದು ಬಹುಮಾನ ಜಮೆ ಆಗುವಂತೆ ಮಾಡಲಾಗಿದೆ. ಇಲ್ಲೊಂದು ಚಿಕ್ಕ ಉದಾಹರಣೆಯನ್ನು ದಾಖಲಿಸಲೇಬೇಕು. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಸಂಪತ್ ಖೇಲೋ ಇಂಡಿಯಾ ಯೂಥ್ ಗೇಮ್ಸ್​ನಲ್ಲಿ ಸೈಕ್ಲಿಂಗ್​ನಲ್ಲಿ ಚಿನ್ನದ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದ. ಆದರೆ ಅವರದ್ದು ಬಡ ಕುಟುಂಬ. ತಾಯಿ ಮನೆಯಲ್ಲೇ ಟೇಲರಿಂಗ್ ಮಾಡಿಕೊಂಡು ಮಗನ ಕ್ರೀಡಾ ಬದುಕಿಗೆ ನೆರವು ನೀಡುತ್ತಿದ್ದಾರೆ. ಅವರಿರುವುದು ಬಾಡಿಗೆ ಮನೆಯಲ್ಲಿ. ನೀನು ಬಾಡಿಗೆ ಹೇಗೆ ಕಟ್ಟುತ್ತಿ ಎಂದು ಕೇಳಿದಾಗ, ಕಳೆದ ಬಾರಿ ಖೇಲೋ ಇಂಡಿಯಾದಲ್ಲಿ ಪದಕ ಗೆದ್ದಿದ್ದೆ, ಅದಕ್ಕಾಗಿ ಹತ್ತು ಸಾವಿರ ರೂ. ವಿದ್ಯಾರ್ಥಿ ವೇತನ ಬರುತ್ತಿದೆ, ಆ ಹಣದಲ್ಲಿ ಬಾಡಿಗೆ ಕಟ್ಟುತ್ತೇವೆ ಎಂದು ವಿವರಿಸಿದ್ದಾರೆ. ವಿವಿಧ ರೂಪದಲ್ಲಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, 2015ರಲ್ಲಿ ಹಣಕಾಸಿನ ನೆರವಿನಲ್ಲಿ 8-12 ವರ್ಷ ವಯೋಮಿತಿಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ತರತಬೇತಿ ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು.

    ಇನ್ನು ನ್ಯಾಷನಲ್ ಟ್ಯಾಲೆಂಟ್ ಸರ್ಚ್ ವೆಬ್​ಸೈಟನ್ನು ಕೇಂದ್ರ ಸರ್ಕಾರ ಅನಾವರಣಗೊಳಿಸಿತು. ಇಲ್ಲಿ ಯುವ ಕ್ರೀಡಾಪಟುಗಳು ಕೇಂದ್ರ ಸರ್ಕಾರದ ಕ್ರೀಡಾ ಯೋಜನೆಗಳ ಅನುಕೂಲ ಪಡೆಯಲು ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಸಬಹುದು. ಖೇಲೇಗಾ ಇಂಡಿಯಾ ತೊ ಖಿಲೇಗ ಇಂಡಿಯಾ ಭಾರತ ಆಡಿದರೆ ಭಾರತ ಉರ್ತRಸುತ್ತದೆ ಎಂಬ ಮಾತು ಈಗ ಎಲ್ಲೆಡೆ ಮೊಳಗುತ್ತಿದೆ. ಈ ಅರಿವು ಮೂಡಿಸುವ ಕೆಲಸ ಮಾಡಿದ್ದು ಖೇಲೋ ಇಂಡಿಯಾ ಯೋಜನೆ. ಇದರಡಿ ಆಯ್ಕೆಯಾದ ಸಾವಿರ ಕ್ರೀಡಾಪಟುಗಳಿಗೆ ವರ್ಷಕ್ಕೆ 5ಲಕ್ಷ ರೂ.ನಂತೆ ಎಂಟು ವರ್ಷ ನೀಡಲಾಗುತ್ತದೆ. ಹಾಗೆಯೇ ದೇಶಾದ್ಯಂತ 20 ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಯಿತು. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಕಾರ್ಯರೂಪದಲ್ಲಿದೆ. ಒಲಿಂಪಿಕ್ಸ್​ನಲ್ಲಿ ಪದಕ ಸ್ವೀಕರಿಸುವ ಪೋಡಿಯಂ ಏರುವುದನ್ನು ಗುರಿಯಾಗಿಸಿಕೊಂಡು ಯುವ ಕ್ರೀಡಾಪಟುಗಳಿಗಾಗಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್ಸ್) ಎಂಬ ಯೋಜನೆ ಜಾರಿಗೆ ತರಲಾಗಿದೆ. ಇದರಡಿ ರಾಷ್ಟ್ರ ಮಟ್ಟದಲ್ಲಿ ಮಿಂಚುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ಉನ್ನತ ಮಟ್ಟದ ತರಬೇತಿ ಪಡೆಯಲು ಮಾಸಿಕ 50 ಸಾವಿರ ರೂ. ನೀಡಲಾಗುತ್ತಿದೆ. ಕಾಮನ್​ವೆಲ್ತ್​ನಲ್ಲಿ ಪಾಲ್ಗೊಂಡ 70 ಕ್ರೀಡಾಪಟುಗಳಲ್ಲಿ 47 ಕ್ರೀಡಾಪಟುಗಳು ಟಾಪ್ಸ್ ಯೋಜನೆಯ ಫಲಾನುಭವಿಗಳು ಎಂಬುದು ಗಮನಾರ್ಹ ಸಾಧನೆ. ಖಾಸಗಿ ಅಥವಾ ಕಾರ್ಪೆರೇಟ್ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (ಎನ್​ಎಸ್​ಡಿಎಫ್) ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಶೇ.100 ತೆರಿಗೆ ಮುಕ್ತವಾಗಿರುತ್ತದೆ. ಇನ್ನು ಪ್ರತ್ಯೇಕವಾದ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ (ಎನ್​ಎಸ್​ಇಬಿ)ಯನ್ನು ಸ್ಥಾಪಿಸಿತು. ಇದು ಕ್ರೀಡೆ ಮತ್ತು ಶಿಕ್ಷಣ ಒಂದಾಗಿ ಸಾಗಲು ಅನುವು ಮಾಡಿಕೊಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಅಪಾರವಾದ ಯಶಸ್ಸು ಕಾಣಬೇಕಾದರೆ ಕೇಂದ್ರ ಬಜೆಟ್​ನಲ್ಲಿ ಕ್ರೀಡೆಗೆ ಮೀಸಲಿಟ್ಟ ಹಣ ಪ್ರಮುಖ ಪಾತ್ರವಹಿಸಿದೆ. 2013-14ರಲ್ಲಿ ಕ್ರೀಡಾ ಬಜೆಟ್ 1219 ಕೋಟಿ ರೂ ಆಗಿತ್ತು. 2017-18ರಲ್ಲಿ 2196.36 ಕೋಟಿ ರೂ.ಗೆ ಏರಿಕೆಯಾಗಿದೆ. 2022-23ರ ಬಜೆಟ್​ನಲ್ಲಿ 3062.60 ಕೋಟಿ ರೂ. ಕಾಯ್ದಿರಿಸಲಾಗಿದೆ. ಅಂದರೆ ಕಳೆದ 10 ವರ್ಷಗಳಲ್ಲಿ ಕ್ರೀಡಾ ಬಜೆಟ್​ನಲ್ಲಿ ಶೇ. 100ರಷ್ಟು ಏರಿಕೆಯಾಗಿದೆ. ಈ ರೀತಿ ಕೇಂದ್ರ ಸರ್ಕಾರವು ನೀಡಿದ ಗಮನದಿಂದ ಕ್ರೀಡಾ ಜಗತ್ತು ಇಂದು ಭಾರತದತ್ತ ಗಮನಹರಿಸುತ್ತಿದೆ. ಕ್ರೀಡಾ ಕೂಟಗಳಲ್ಲಿ ಪದಕ ಗೆಲ್ಲುವುದು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ ಎಂಬ ಕಾಲ ಗತಿಸಿದೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts