ಕೋಲಾರ: ಮಳೆಗೆ ಮರ-ಮನೆ ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮುಂದುವರಿದಿದ್ದು, ಇಲ್ಲೊಂದು ಕಡೆ ಮನೆಯ ಗೋಡೆ ಕುಸಿದು ಗಂಡ-ಹೆಂಡತಿ ಇಬ್ಬರೂ ಮಲಗಿದ್ದಲ್ಲೇ ಹೆಣವಾಗಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ಇನ್ನೊಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ನಟ ಶ್ರೀಮುರಳಿ ಕೊರಳಿಗೆ 450 ಕೆ.ಜಿ. ಸೇಬು ಹಾರ: ಇದರ ಬೆಲೆಯೇ ರೂಪಾಯಿ 80 ಸಾವಿರ..
ಕೋಲಾರ ಜಿಲ್ಲೆಯ ಕೆ.ಮಲ್ಲಂಡಹಳ್ಳಿ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ನಾಗರಾಜಪ್ಪ (65) ಮತ್ತು ಲಕ್ಷ್ಮಮ್ಮ (60) ಸಾವಿಗೀಡಾದ ಗಂಡ-ಹೆಂಡತಿ. ಮನೆಯಲ್ಲಿದ್ದ ಸೀನಪ್ಪ ಎಂಬ ಇನ್ನೊಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಹೋಟೆಲ್ಗೆ ಬಂದು ಅಮಾಯಕನಂತೆ ನಿಂತೇ ಇದ್ದ, ನೋಡ್ತನೋಡ್ತ ಮೊಬೈಲ್ಫೋನ್ ಕದ್ದ, ಏನೂ ಆಗಿಲ್ಲ ಎಂಬಂತೆ ಹೋದ…
ಗ್ರಾಮಸ್ಥರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಸೀನಪ್ಪ ಅವರನ್ನು ದುರಂತ ಸ್ಥಳದಿಂದ ಪಾರು ಮಾಡಿದ್ದಾರೆ. ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.
ಡಾ.ರಾಜ್ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್