ಉಡುಪಿ: ಮಣಿಪಾಲ್ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಸಹಪಾಠಿಯೇ ಅತ್ಯಾಚಾರವೆಸಗಿದ್ದು, ಆರೋಪಿ ಆರ್ಯನ್ ಚಂದಾವನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರ್ಯನ್ ಚಂದಾವನಿ ದೆಹಲಿ ಮೂಲದವ. ಸಂತ್ರಸ್ತೆ ಉತ್ತರಪ್ರದೇಶ ಮೂಲದವರು. ಇವರಿಬ್ಬರೂ ಮಣಿಪಾಲ್ನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಅ.16ರ ರಾತ್ರಿ ನಗರದ ಇಂದ್ರಾಳಿಯ ಫ್ಲ್ಯಾಟ್ವೊಂದರಲ್ಲಿ ಕುಡಿದ ನಶೆಯಲ್ಲಿ ಗೆಳತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಕುರಿತು ಸಂತ್ರಸ್ತೆ ಅ.17ರ ಬೆಳಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಣಿಪಾಲ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕುಡಿವ ನೀರಿನ ಪೈಪ್ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ…