ಚೆನ್ನೈ: ಐಷಾರಾಮಿ ಕಾರು ಆಮದು ಮಾಡಿಕೊಂಡು ಪೇಚಿಗೆ ಸಿಲುಕಿದ್ದ, ಚೆನ್ನೈ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಖ್ಯಾತ ನಟ ವಿಜಯ್ ಈಗ ಸ್ವಲ್ಪ ನಿರಾಳರಾಗಿದ್ದಾರೆ. ಐಷಾರಾಮಿ ಕಾರನ್ನು ಆಮದು ಮಾಡಿಕೊಂಡು ಅದಕ್ಕೆ ತೆರಿಗೆ ಕಟ್ಟದ ಕಾರಣ ಚೆನ್ನೈನ ಹೈಕೋರ್ಟ್ ಏಕಸದಸ್ಯ ಪೀಠದಿಂದ ಛೀಮಾರಿ ಹಾಕಿಸಿಕೊಂಡು, ಒಂದು ಲಕ್ಷ ರೂಪಾಯಿ ದಂಡವನ್ನೂ ಕಟ್ಟುವ ಸ್ಥಿತಿ ಬಂದಿದ್ದ ವಿಜಯ್ಗೆ ಇದರಿಂದ ಮದ್ರಾಸ್ ವಿಭಾಗೀಯ ಪೀಠ ಮುಕ್ತಿ ನೀಡಿದೆ.
2012ರಲ್ಲಿ ಇಂಗ್ಲೆಂಡ್ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ವಿಜಯ್ ಆಮದು ಮಾಡಿಕೊಂಡಿದ್ದರು. ಆದರೆ ಶೇ. 80ರಷ್ಟು ಪ್ರವೇಶ ತೆರಿಗೆಯನ್ನು ಕಟ್ಟದೇ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಕಂಪೆನಿಯು ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು.
ಐಷಾರಾಮಿ ಕಾರು ಕೊಂಡದ್ದೂ ಅಲ್ಲದೇ, ಅದರ ತೆರಿಗೆ ಕಟ್ಟದ ಕಾರಣ, ಏಕಸದಸ್ಯಪೀಠವು ಅವರಿಗೆ ಛೀಮಾರಿ ಹಾಕಿತ್ತು ಜತೆಗೆ ಇದನ್ನು ಪ್ರಶ್ನಿಸಿದ್ದ ಕಾರಣಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ತೆರಿಗೆ ಕಟ್ಟಲು ವಿಜಯ್ ಹಿಂದೇಟು ಹಾಕಿದ್ದಾರೆ. ತೆರಿಗೆ ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ. ಇದು ದೇಶವಿರೋಧಿ ಮನಸ್ಥಿತಿ. ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ಗೆ ಉತ್ತರಿಸಿ ಕೂಡಲೇ ಒಂದು ವಾರದೊಳಗೆ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಈ ಆದೇಶವನ್ನು ವಿಜಯ್ ಅವರು ಮೇಲ್ಮನವಿಯ ಮೂಲಕ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು. ಇದೀಗ ದಂಡದ ಮೊತ್ತವನ್ನು ರದ್ದು ಮಾಡಿರುವ ವಿಭಾಗೀಯ ಪೀಠವು, ಏಕಸದಸ್ಯಪೀಠ ಅವರಿಗೆ ಹಾಕಿದ್ದ ಛೀಮಾರಿ ಆದೇಶದಿಂದ ಮುಕ್ತಿ ನೀಡಿದೆ. ಇಲ್ಲದಿದ್ದರೆ ತೀರ್ಪಿನಲ್ಲಿ ಇದು ಉಲ್ಲೇಖವಾಗಿರುವ ಕಾರಣ, ವಿಜಯ್ ಅವರ ಭವಿಷ್ಯಕ್ಕೆ ಇದೊಂದು ಕಪ್ಪುಚುಕ್ಕೆಯಾಗುತ್ತಿತ್ತು. ಆದರೆ ಅವರು ಕೂಡಲೇ ತೆರಿಗೆಯನ್ನು ಪಾವತಿಸಬೇಕು ಎಂದು ವಿಭಾಗೀಯ ಪೀಠ ಹೇಳಿದೆ.
ಕಾರುಗಳ ಕುರಿತು ಕ್ರೇಜ್ ಹೊಂದಿರುವ ವಿಜಯ್ ಅವರು 410 ಕೋಟಿ ರೂ. ಆಸ್ತಿಯ ಒಡೆಯ. ಅವರ ವಾರ್ಷಿಕ ಆದಾಯ 100ರಿಂದ 120 ಕೋಟಿ ಎನ್ನಲಾಗಿದೆ.
ಮಗಳ ಲವರ್ ಜತೆ ತಾಯಿಯ ಅಕ್ರಮ ಸಂಬಂಧ! ಈ ರಹಸ್ಯ ಭೇದಿಸಲು ಹೋದವನ ಬರ್ಬರ ಹತ್ಯೆ
ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ ಭಿಕ್ಷಾಟನೆ ತಡೆಗೆ ನಕಾರ