More

    ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್​ ಭಿಕ್ಷಾಟನೆ ತಡೆಗೆ ನಕಾರ

    ನವದೆಹಲಿ: ಕೋವಿಡ್​ನ ಈ ದಿನಗಳಲ್ಲಿ ಭಿಕ್ಷಾಟನೆಯನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡದ ಸುಪ್ರೀಂಕೋರ್ಟ್​, ಭಿಕ್ಷಾಟನೆಯು ಬಡತನಕ್ಕೆ ಸಂಬಂಧಿಸಿದ್ದು ಮತ್ತು ಸಾಮಾಜಿಕ-ಆರ್ಥಿಕ ವಿಷಯವಾಗಿದೆ. ಕೋವಿಡ್​ನ ಈ ದಿನಗಳಲ್ಲಿ ಭಿಕ್ಷೆ ಬೇಡದೇ ಹಲವರಿಗೆ ಬೇರೆ ಆಯ್ಕೆಗಳಿಲ್ಲ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಲು ಆಗದು ಎಂದು ಹೇಳಿದೆ.

    ಯಾರೂ ಭಿಕ್ಷೆ ಬೇಡಲು ಬಯಸುವುದಿಲ್ಲ. ಆದರೆ ಅವರಿಗೆ ಈಗ ಬೇರೆ ದಾರಿ ಇಲ್ಲದಾಗಿದೆ. ಆದ್ದರಿಂದ ರಸ್ತೆಗಳಲ್ಲಿ ಜನರು ಭಿಕ್ಷೆ ಬೇಡುವುದನ್ನು ತಡೆಯುವಂತೆ ಆದೇಶ ಹೊರಡಿಸಲಾಗದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

    ಜನರು ಭಿಕ್ಷೆ ಬೇಡದಂತೆ ಹಾಗೂ ಅವರಿಗೆ ಕರೊನಾ ಸೋಂಕು ಹರಡುವುದನ್ನು ತಪ್ಪಿಸಲುಮ ಟ್ರಾಫಿಕ್ ಜಂಕ್ಷನ್‌ಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸಿ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಕುಶ್ ಕಾಲ್ರಾ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

    ಅರ್ಜಿದಾರರ ಈ ಮನವಿಗಳಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧಿಸುವಂತೆ ಕೋರಿದ್ದನ್ನು ಒಪ್ಪದ ಸುಪ್ರೀಂಕೋರ್ಟ್​, ಅವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸುವಂತೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ. ಇವರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ಒಳಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್​ ಸೂಚಿಸಿದೆ.

    ಮಗಳ ಲವರ್​ ಜತೆ ತಾಯಿಯ ಅಕ್ರಮ ಸಂಬಂಧ! ಈ ರಹಸ್ಯ ಭೇದಿಸಲು ಹೋದವನ ಬರ್ಬರ ಹತ್ಯೆ

    ಕುಂದ್ರಾರ ವಾಟ್ಸ್​ಆ್ಯಪ್​ನಲ್ಲಿ ಕಾಣಿಸಿಕೊಂಡ ನಟಿಯೀಗ ಸಂಕಷ್ಟದಲ್ಲಿ- ಅಯ್ಯೋ ಬಿಟ್​ಬಿಡಿ ಅಂತೀರೋ ಸೈನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts