ನವದೆಹಲಿ : ಒಲಂಪಿಕ್ಸ್ಗೆ ಒಂದು ವಾರ ಉಳಿದಿರುವಂತೆ, ಇಂದು ಮೊದಲ ಕಂತಿನ ಭಾರತೀಯ ಒಲಂಪಿಕ್ ಸ್ಪರ್ಧಿಗಳು ಜಪಾನಿನ ಟೋಕಿಯೋಗಾಗಿ ತೆರಳಲಿದ್ದಾರೆ. ಇವರಿಗೆ ಔಪಚಾರಿಕವಾದ ಬೀಳ್ಕೊಡುಗೆ ಸಮಾರಂಭವೊಂದು ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್ ಹಾಗೂ ಕ್ರೀಡಾ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಅವರು, 54 ಅಥ್ಲೀಟ್ಗಳೊಂದಿಗೆ ಇಂಡಿಯನ್ ಒಲಂಪಿಕ್ ಅಸೋಸಿಯೇಷನ್(ಐಒಎ)ನ ಪ್ರತಿನಿಧಿಗಳು ಮತ್ತು ಸಹಾಯಕ ಸಿಬ್ಬಂದಿಯನ್ನೊಳಗೊಂಡ 88 ಜನರ ತಂಡಕ್ಕೆ, ಶುಭ ಕೋರಿ ಬೀಳ್ಕೊಡಲಿದ್ದಾರೆ. ಐಒಎ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಪದಾಧಿಕಾರಿಗಳು ಉಪಸ್ಥಿತರಿರುವರು.
ಇದನ್ನೂ ಓದಿ: ಟೋಕಿಯೋ ಒಲಂಪಿಕ್ಸ್ ಸಮಾರಂಭಗಳಿಗೆ ಫ್ಲ್ಯಾಗ್ಬೇರರ್ಸ್ ಆಯ್ಕೆ
ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಜಿಮ್ನಾಸ್ಟಿಕ್ಸ್, ವೈಟ್ ಲಿಫ್ಟಿಂಗ್ ಸೇರಿದಂತೆ ಎಂಟು ಕ್ರೀಡಾ ಕ್ಷೇತ್ರಗಳ ಆಟಗಾರರು ಟೋಕಿಯೋಗೆ ಹೊರಟಿರುವ ತಂಡದಲ್ಲಿದ್ದಾರೆ. ಈ ಬಾರಿ 127 ಭಾರತೀಯ ಅಥ್ಲೀಟ್ಗಳು ಒಲಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)
ಒಲಂಪಿಕ್ಸ್ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್ ಆಗಿ ರಾಣಿ ರಾಂಪಾಲ್
ಮತ್ತೆ ಏರಿದ ಪೆಟ್ರೋಲ್ ಬೆಲೆ! ಡೀಸೆಲ್ ಬೆಲೆ ತಟಸ್ಥ