More

    ವಸತಿ ಶಾಲೆಗೆ ಶೇ 96.91 ಫಲಿತಾಂಶ

    ಚಿತ್ರದುರ್ಗ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆ ಸೇರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 96.91 ಫಲಿತಾಂಶ ಲಭಿಸಿದೆ.

    ಒಟ್ಟು 1,588 ವಿದ್ಯಾರ್ಥಿಗಳು ಹಾಜರಾಗಿದ್ದು, 1,539 ಮಂದಿ ಉತ್ತೀರ್ಣರಾಗಿದ್ದಾರೆ. 284-ಅತ್ಯುನ್ನತ ಶ್ರೇಣಿ, 1,044-ಪ್ರಥಮ ದರ್ಜೆ, 196-ದ್ವಿತೀಯ ದರ್ಜೆ, 62 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

    35 ವಸತಿ ಶಾಲೆಗಳ ಪೈಕಿ 13 ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಅಲ್ಲದೆ, ಶಿಕ್ಷಣ ಇಲಾಖೆಯ ಫಲಿತಾಂಶ ವಿಶ್ಲೇಷಣೆಯ ಕ್ವಾಲಿಟಿ ವೈಟೇಜ್ ಪರ್ಸಂಟೇಜ್‌ನಲ್ಲಿ 34 ವಸತಿ ಶಾಲೆಗಳು ‘ಎ’ ಗ್ರೇಡ್ ಪಡೆದಿವೆ. ವಿದ್ಯಾರ್ಥಿನಿ ಆರ್.ನವ್ಯಾ, ಎಸ್.ಸಂಜಯ್ 625ಕ್ಕೆ ತಲಾ 616ರೊಂದಿಗೆ ಶೇ 98.56 ಅಂಕ ಪಡೆದು ವಸತಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

    ವಸತಿ ಶಾಲೆಗಳಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿ, ಉಚಿತ ಊಟ-ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಮತ್ತು ಸಂಗೀತ ಶಿಕ್ಷಣ ಇನ್ನಿತರೆ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅರ್ಹರು ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts