More

    9 ಹಾಗೂ ಪ್ರಥಮ ಪಿಯುಗೆ ಫೆ. 1ರಂದೇ ಪೂರ್ಣಾವಧಿ ತರಗತಿ ಆರಂಭ; ಸಚಿವ ಎಸ್​. ಸುರೇಶ್​ ಕುಮಾರ್ ಮಾಹಿತಿ

    ಬೆಂಗಳೂರು: ಆನ್​ಲೈನ್​, ಆಫ್​ಲೈನ್​, ವಿದ್ಯಾಗಮ.. ಹೀಗೆ ನಾನಾ ಹಂತಗಳಲ್ಲಿ ಕೆಲವು ತರಗತಿಗಳು ನಡೆಯುತ್ತಿರುವ ಮಧ್ಯೆಯೇ ಇದೀಗ 9 ಹಾಗೂ ಪ್ರಥಮ ಪಿಯುಗಳಿಗೆ ಫೆ. 1ರಂದೇ ಪೂರ್ಣಾವಧಿ ತರಗತಿಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಎಸ್​.ಸುರೇಶ್​ಕುಮಾರ್ ತಿಳಿಸಿದ್ದಾರೆ. ಎಸ್​ಎಸ್​ಎಲ್​ಸಿ ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಪಡಿಸಿದ ಅವರು ಇತರ ಕೆಲವು ತರಗತಿಗಳ ಆರಂಭದ ಬಗ್ಗೆಯೂ ಮಾಹಿತಿ ನೀಡಿದರು.

    ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಯತ್ತ ಕರೆತರುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ಸಂಬಂಧ ಆರೋಗ್ಯ ಸಚಿವರ ಮುಂದೆ ಮೂರು ವಿಚಾರ ಚರ್ಚೆ ಮಾಡಿದೆವು. ಫೆ.1ರಂದು 6ರಿಂದ 9 ಮತ್ತು ಪ್ರಥಮ ಪಿಯುಸಿ ತರಗತಿ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದೆವು. ಆ ಬಗ್ಗೆ ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಪೋಷಕರ ಬೇಡಿಕೆ ಕುರಿತು ಕೂಡ ಚರ್ಚೆ ಮಾಡಲಾಯ್ತು. ಕೊನೆಗೆ ಆರೋಗ್ಯ ತಾಂತ್ರಿಕ ಸಲಹಾ ಸಮಿತಿ ನಿರ್ಧಾರದಂತೆ ಫೆ.1ರಂದು 9 ಹಾಗೂ ಪ್ರಥಮ ಪಿಯುಸಿಗೆ ಪೂರ್ಣಾವಧಿ ತರಗತಿ ಆರಂಭವಾಗಲಿದೆ. ಫೆಬ್ರವರಿ ಎರಡನೇ ವಾರದವರೆಗೂ ಇದನ್ನು ಗಮನಿಸಿ, ಹಾಜರಾತಿ- ವಾತಾವರಣ ನೋಡಿ ಮತ್ತೆ ಸಭೆ ಸೇರುತ್ತೇವೆ. ಬಳಿಕ ಉಳಿದ ತರಗತಿಗಳನ್ನು ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

    ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಜೂನ್​ 14ರಿಂದ 25ರವರೆಗೆ ಪರೀಕ್ಷೆ

    ಈ ಹಿಂದೆಯೇ ಶಾಲಾರಂಭದ ಬಗ್ಗೆ ಸಭೆ ನಡೆದಿದ್ದು, ಅದರಲ್ಲಿ ಡಿಸೆಂಬರ್​ನಲ್ಲಿ ಚಳಿ ಹೆಚ್ಚಾಗಿರುವುದರಿಂದ ಆಗ ಶಾಲೆ ಆರಂಭ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ನಂತರ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆದಿದ್ದು, ಅದರಲ್ಲಿ ಜನವರಿ 1ರಂದು ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಯ್ತು. ಆ ಪ್ರಕಾರ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ತರಗತಿ‌ ಆರಂಭಿಸಿದೆವು. ದ್ವಿತೀಯ ಪಿಯುಸಿ ಶೇ.75 ಹಾಗೂ ಎಸ್​ಎಸ್​ಎಲ್​ಸಿಯಲ್ಲಿ ಶೇ. 70 ಮತ್ತು ವಿದ್ಯಾಗಮದಲ್ಲಿ ಶೇ. 45 ಹಾಜರಾತಿ ಕಂಡುಬಂದಿದೆ ಎಂದರು.

    ಈವರೆಗೂ ಶಾಲೆಗಳಲ್ಲಿ ದೊಡ್ಡಮಟ್ಟದಲ್ಲಿ ಸೋಂಕು ಹರಡಿಲ್ಲ. ವಿದ್ಯಾಗಮ ತರಗತಿ ಆರಂಭವಾಗಿರುವುದರಿಂದ ಮಕ್ಕಳು ಕಲಿಕೆಯತ್ತ ವಾಲುತ್ತಿದ್ದಾರೆ. ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಆನ್​ಲೈನ್‌ಗಿಂತ, ಆಫ್​ಲೈನ್ ತರಗತಿ ಉತ್ತಮವಾಗಿದೆ ಎಂದೂ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಹೇಳಿದರು.

    ಇದನ್ನೂ ಓದಿ: ಯೂಟ್ಯೂಬ್​ನಿಂದ ಹ್ಯಾಕಿಂಗ್​ ಕಲಿತು ಅಪ್ಪನಿಗೇ 10 ಕೋಟಿ ರೂಪಾಯಿ ಬೇಡಿಕೆಯಿಟ್ಟ 11ರ ಪೋರ!

    ಜ. 22ರಂದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ಸದಸ್ಯರ ಸಭೆ ಕರೆದು ತರಗತಿ ಆರಂಭಿಸುವ ಕುರಿತು ಚರ್ಚಿಸಲಾಗಿತ್ತು. 8ನೇ ತರಗತಿವರೆಗೂ ವಿದ್ಯಾಗಮ ಮುಂದುವರಿಸಿ, 9ರಿಂದ ದ್ವಿತೀಯ ಪಿಯುಸಿವರೆಗೂ ತರಗತಿ ಆರಂಭಿಸುವಂತೆ ಅಭಿಪ್ರಾಯ ಸಲ್ಲಿಸಿದ್ದಾರೆ. 6ರಿಂದ 8ನೇ ತರಗತಿವರೆಗೂ ವಿದ್ಯಾಗಮ ತರಗತಿ ನಡೆಯಲಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.

    ಅತ್ತೆಯ ತಲೆ ಒಡೆದು, ಕಣ್ಣು ಕಿತ್ತ ಸೊಸೆ! ಭೀಕರ ಕೊಲೆಯ ಹಿಂದಿದೆ ನೋವಿನ ಕಥೆ

    ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಬಹುದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts