More

    ಉಚ್ಚಂಗಿಯಲ್ಲಮ್ಮ ದೇವಿಗೆ ಭವ್ಯ ಸ್ವಾಗತ

    ಚಿತ್ರದುರ್ಗ: ರಾಜಮಾತೆ ಉಚ್ಚಂಗಿಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಅಪಾರ ಭಕ್ತರು ಕೋಟೆ ರಸ್ತೆಯ ಅಮ್ಮನ ಗುಡಿಯಿಂದ ಬುರುಜನಹಟ್ಟಿಗೆ ಶಾಸ್ತ್ರ, ಸಂಪ್ರದಾಯದಂತೆ ಕರೆತಂದರು.

    ಕಂಕಣಧಾರಣೆ, ಮದಲಿಂಗಿತ್ತಿ ಪೂಜಾ ಕೈಂಕರ್ಯದ ಬಳಿಕ ಸತತ ಮೂರು ದಿನ ಈ ಭಾಗದ ಭಕ್ತರಿಂದಲೇ ವಿಶೇಷ ಪುಷ್ಪಾಲಂಕಾರ ಸೇವೆ ಮೊದಲಿನಿಂದಲೂ ನಡೆಯುತ್ತಿದ್ದು, ಈ ಬಾರಿಯೂ ಎರಡು ದಿನ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ ನಂತರ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಕರೆತರಲಾಯಿತು.

    ಮೂರನೇ ದಿನ ಸಾವಿರಾರು ಬಿಸ್ಕತ್‌ಗಳಿಂದ ಅಲಂಕರಿಸಿ, ಮಹಾಮಂಗಳಾರತಿ ನೆರವೇರಿದ ನಂತರ ಭಕ್ತರು ಹೊತ್ತು ಉತ್ಸವ ಮೂರ್ತಿಯನ್ನು ಕರೆತರುವಾಗ ಉಧೋ ಉಧೋ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

    ಸಿಂಹವಾಹನ, ಸರ್ಪೋತ್ಸವದ ಮೇಲೆ ಎರಡು ದಿನ ಉತ್ಸವಾಂಬ ದೇವಿಯ ಮೂರ್ತಿಯನ್ನು ಕರೆತರುವ, ಪುನಾ ಕಳುಹಿಸುವ ಪ್ರಕ್ರಿಯೆ ನಡೆದಿದ್ದು, ನವಿಲು ವಾಹನರೂಢಳಾದ ದೇವಿಯ ಅಲಂಕಾರ ಸೋಮವಾರ ರಾತ್ರಿ ಕೂಡ ಭಕ್ತರ ಕಣ್ಮನ ಸೆಳೆಯಿತು. ಕೋಳಿ ಬುರುಜನಹಟ್ಟಿ, ಉಚ್ಚಂಗಿ ಯಲ್ಲಮ್ಮ ದೇಗುಲ, ಬುರುಜನಹಟ್ಟಿ, ಬರಗೇರಮ್ಮ ದೇವಿ ಪಾದದ ಗುಡಿ, ಸಿಹಿನೀರು ಹೊಂಡದ ಬೀದಿ ಸೇರಿ ವಿವಿಧೆಡೆ ನೂರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ, ಪ್ರಸಾದ ಹಂಚಿದರು.

    ಮೇ. 22ರಂದು ಮೂಲ ಮೂರ್ತಿಗೆ ಅಭಿಷೇಕ, ಮಹಾ ಮಂಗಳಾರತಿ ಸೇರಿ ಇನ್ನಿತರೆ ಪೂಜೆಗಳೂ ನಡೆಯಲಿದೆ. ಸಂಪ್ರದಾಯದಂತೆ ಅಶ್ವವಾಹನರೂಢಳಾದ ಉತ್ಸವ ಮೂರ್ತಿಯನ್ನು ನಗರಕ್ಕೆ ಕರೆತಂದು, ನಾಲ್ಕು ದಿನ ಭಕ್ತರಿಂದ ಪೂಜೆ ಸ್ವೀಕರಿಸಿ, ದೇವಿಯ ಗುಡಿ ಮುಂಭಾಗ 25ರಂದು ಸಿಡಿ ಮಹೋತ್ಸವ ಸಂಪನ್ನಗೊಂಡ ನಂತರವೇ ಅಮ್ಮನ ಮೂರ್ತಿ ಗುಡಿತುಂಬಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts