More

    ದೇಶದಲ್ಲಿ ಕೊವಿಡ್​-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಧಿಕೃತ ಸಂಖ್ಯೆಯನ್ನು ಬಹಿರಂಗ ಪಡಿಸಿದ ಐಎಂಎ

    ನವದೆಹಲಿ: ಕರೊನಾ ವೈರಸ್​ ದೇಶದಲ್ಲಿ 26 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದೆ. ಕರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ಪೊಲೀಸರ ಪ್ರಾಣವನ್ನೂ ಬಲಿಪಡೆದಿದೆ.

    ಅದರಲ್ಲೂ ಕಳೆದ ಮೂರು ತಿಂಗಳಲ್ಲಿ ದೇಶದಲ್ಲಿ ಒಟ್ಟು 99 ವೈದ್ಯರು ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವಿವಿಧ ಆಸ್ಪತ್ರೆಗಳಲ್ಲಿ ಕೊವಿಡ್​-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ 1200 ಡಾಕ್ಟರ್ಸ್​ಗೆ ಕರೊನಾ ಸೋಂಕು ತಗುಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ದೃಢಪಡಿಸಿದೆ.

    ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಐಎಂಎ ಅಧ್ಯಕ್ಷ ಡಾ. ರಂಜನ್​ ಶರ್ಮಾ ಈ ಮಾಹಿತಿ ಹೊರಹಾಕಿದ್ದಾರೆ.
    ಇತ್ತೀಚೆಗಿನ ಸಮೀಕ್ಷೆ ಪ್ರಕಾರ ದೇಶದಲ್ಲಿ ಒಟ್ಟು 1279 ವೈದ್ಯರು ಕೊವಿಡ್​ಗೆ ಒಳಗಾಗಿದ್ದಾರೆ. 99 ಮಂದಿ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂದು ರಂಜನ್​ ಶರ್ಮಾ ಹೇಳಿದ್ದಾರೆ.

    ಭಾರತದಲ್ಲಿ ಆಧುನಿಕ ವೈದ್ಯಶಾಸ್ತ್ರ ಅಭ್ಯಾಸ ಮಾಡುತ್ತಿರುವವರೂ ಕೆಲವರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗೆ ಕರೊನಾಕ್ಕೆ ಒಳಗಾದವರಲ್ಲಿ 771 ಮಂದಿ 35 ವರ್ಷ ಒಳಗಿನವರು, 247 ವೈದ್ಯರು 35-50 ವರ್ಷದವರು ಹಾಗೂ 261 ವೈದ್ಯರು 50 ವರ್ಷ ಮೇಲ್ಪಟ್ಟವರು ಎಂದು ರಂಜನ್​ ಶರ್ಮಾ ವಿವರಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಡಿದಾಡಿಕೊಂಡ ಬಿಜೆಪಿ, ಟಿಎಂಸಿ ಕಾರ್ಯಕರ್ತರು; ವಾಹನಗಳೆಲ್ಲ ಧ್ವಂಸ

    ಈ ಡಾಟಾವನ್ನು ನಾವು ಯಾವಾಗ ಬೇಕಾದರೂ ಬಿಡುಗಡೆ ಮಾಡಲು ಸಿದ್ಧರಿದ್ದೇವೆ. ಕೊವಿಡ್​-19ನಿಂದ ಮೊಲದ ವೈದ್ಯ ಮೃತಪಟ್ಟಾಗಲೇ ನಾವು ರಾಷ್ಟ್ರೀಯ ಕೊವಿಡ್​ ನೋಂದಣಿಯನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ. ಕೊವಿಡ್​-19 ಸೋಂಕಿಗೆ ಒಳಗಾಗಿರುವ ವೈದ್ಯರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಡಾಟಾ ಸಂಪೂರ್ಣ ಅಧಿಕೃತವಾಗಿದೆ ಎಂದು ತಿಳಿಸಿದ್ದಾರೆ.

    ಜನರಲ್​ ಪ್ರ್ಯಾಕ್ಟೀಸ್​ ಮಾಡುತ್ತಿದ್ದ ವೈದ್ಯರು ಎಷ್ಟು ಜನ ಮೃತಪಟ್ಟಿದ್ದಾರೆ? ಸೋಂಕಿನಿಂದ ಸತ್ತವರಲ್ಲಿ ರೆಸಿಡೆಂಟ್​ ಡಾಕ್ಟರ್ಸ್​ ಎಷ್ಟು ಎಂಬಿತ್ಯಾದಿ ಸರ್ವೇ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಎಲ್ಲ ಸ್ಪಷ್ಟ ಮಾಹಿತಿಯನ್ನೂ ನಾವು ಬಿಡುಗಡೆ ಮಾಡಲಿದ್ದೇವೆ. ಇದರಲ್ಲಿ ಅಡಗಿಸುವುದು ಏನೂ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಭಾರತದಲ್ಲಿ ಕರೊನಾ ಸಮುದಾಯ ಪ್ರಸರಣ ಪ್ರಾರಂಭವಾಗಿದೆ, ಪರಿಸ್ಥಿತಿ ಗಂಭೀರವಾಗಿದೆ: ಐಎಂಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts