More

    ಭಾರತದಲ್ಲಿ ಕರೊನಾ ಸಮುದಾಯ ಪ್ರಸರಣ ಪ್ರಾರಂಭವಾಗಿದೆ, ಪರಿಸ್ಥಿತಿ ಗಂಭೀರವಾಗಿದೆ: ಐಎಂಎ

    ನವದೆಹಲಿ: ಭಾರತದಲ್ಲಿ ಕರೊನಾ ಪ್ರಸರಣ ಆತಂಕವೊಡ್ಡುತ್ತಿದೆ. ದಿನೇದಿನೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರುತ್ತಿದೆ.

    ಕಳೆದ 24 ಗಂಟೆಯಲ್ಲಿ 34, 000 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10 ಲಕ್ಷದ ಗಡಿದಾಟಿದೆ. ಈ ಮಧ್ಯೆ ಇನ್ನೊಂದು ಆಘಾತಕಾರಿ ವಿಚಾರವನ್ನು ಇಂದು ಭಾರತೀಯ ವೈದ್ಯಕೀಯ ಸಂಘ(ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​) ತಿಳಿಸಿದೆ. ಭಾರತದಲ್ಲಿ ಈಗಾಗಲೇ ಕರೊನಾ ಸಮುದಾಯ ಪ್ರಸರಣ ಪ್ರಾರಂಭವಾಗಿದೆ. ಇನ್ನೂ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದು ಐಎಂಎ ಹೇಳಿದೆ.

    ಇದೀಗ ಕರೊನಾ ಸೋಂಕಿನ ಬೆಳವಣಿಗೆ ಆಘಾತಕಾರಿ ರೀತಿಯಲ್ಲಿ ಆಗುತ್ತಿದೆ. ಪ್ರತಿದಿನವೂ 30,000ಕ್ಕೂ ಅಧಿಕ ಸೋಂಕಿನ ಪ್ರಕರಣ ಪತ್ತೆಯಾಗುತ್ತಿದೆ. ದೇಶದ ಪಾಲಿಗೆ ಇದು ಕೆಟ್ಟ ಪರಿಸ್ಥಿತಿ. ಕರೊನಾ ಸೋಂಕು ಹೆಚ್ಚುತ್ತಿರಲು ಕಾರಣಗಳು ನೂರಾರು ಇವೆ. ಈ ಮಧ್ಯೆ ಕರೊನಾ ಹಳ್ಳಿಗೂ ಕಾಲಿಟ್ಟಿದ್ದು ಭಯ ಹುಟ್ಟಿಸಿದೆ. ಕಮ್ಯೂನಿಟಿ ಸ್ಪ್ರೆಡ್​ ಶುರುವಾಗಿದೆ ಎಂಬುದರ ಸಂಕೇತ ಇದು ಎಂದು ಐಎಂಎ ಮುಖ್ಯಸ್ಥ ಡಾ. ವಿ.ಕೆ. ಮೊಂಗಾ ತಿಳಿಸಿದ್ದಾರೆ. ಇದನ್ನೂ ಓದಿ:ರಾಜ್ಯದಲ್ಲಿ 24ಗಂಟೆಯಲ್ಲಿ ಬರೋಬ್ಬರಿ 4537 ಹೊಸ ಕರೊನಾ ಪ್ರಕರಣಗಳು; 93 ಮಂದಿ ಸಾವು

    ಕೇಂದ್ರ ಆರೋಗ್ಯ ಇಲಾಖೆ ಇದುವರೆಗೂ ಕರೊನಾ ಭಾರತದಲ್ಲಿ ಸಮುದಾಯ ಪ್ರಸರಣದ ಹಂತಕ್ಕೆ ತಲುಪಿಲ್ಲ ಎಂದೇ ಹೇಳಿಕೊಂಡು ಬರುತ್ತಿದೆ. ಹೀಗಿರುವಾಗ ಡಾ. ಮೊಂಗಾ ಅವರು ಸಮುದಾಯ ಪ್ರಸರಣ ಆಗುತ್ತಿದೆ ಎಂದು ಹೇಳಿದ್ದು ಗೊಂದಲ ಮೂಡಿಸಿದೆ.
    ಪಟ್ಟಣಗಳ ಪ್ರತಿ ಮೂಲೆಗೂ ಕರೊನಾ ತಲುಪಿದೆ. ಹಳ್ಳಿಗಳಿಗೂ ನುಗ್ಗುತ್ತಿದೆ. ಇದು ನಿಭಾಯಿಸಲು ಕಷ್ಟವಾದ ಪರಿಸ್ಥಿತಿ. ತುಂಬ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಪಶ್ಚಿಮ ಬಂಗಾಳದಲ್ಲಿ ಬಡಿದಾಡಿಕೊಂಡ ಬಿಜೆಪಿ, ಟಿಎಂಸಿ ಕಾರ್ಯಕರ್ತರು; ವಾಹನಗಳೆಲ್ಲ ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts