More

    ರಾಜ್ಯದಲ್ಲಿ 24ಗಂಟೆಯಲ್ಲಿ ಬರೋಬ್ಬರಿ 4537 ಹೊಸ ಕರೊನಾ ಪ್ರಕರಣಗಳು; 93 ಮಂದಿ ಸಾವು

    ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 4537 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದು ಇಲ್ಲಿಯವರೆಗಿನ ದಾಖಲೆಯ ಸಂಖ್ಯೆ.

    ಹಾಗೇ, ಇಂದು 93 ಮಂದಿ ಸಾವನ್ನಪ್ಪಿದ್ದು, 1018 ಜನ ಸೋಂಕಿನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ. ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ 59,652ಕ್ಕೆ ಏರಿಕೆಯಾಗಿದ್ದು, ಸತ್ತವರು ಒಟ್ಟು 1240 ಮಂದಿ. ಡಿಸ್​ಚಾರ್ಜ್​ ಆದವರ ಸಂಖ್ಯೆ 21,775 ಆಗಿದ್ದು, ಕರೊನಾ ಸಕ್ರಿಯ ಪ್ರಕರಣಗಳು 36,631 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಇಂದೂ ಕೂಡ ಬೆಂಗಳೂರಿನಲ್ಲೇ ಭರ್ಜರಿ ಸಂಖ್ಯೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು 2125 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 29, 621ಕ್ಕೆ ಏರಿದೆ. ಇದನ್ನೂ ಓದಿ: ಅಂತಿಮ ಸೆಮಿಸ್ಟರ್​ ಪರೀಕ್ಷೆ ನಡೆಸಲೇಬೇಕು; ಪಟ್ಟು ಹಿಡಿದಿರೋದೇಕೆ ಕೇಂದ್ರ ಸರ್ಕಾರ

    ಇನ್ನುಳಿದಂತೆ ದಕ್ಷಿಣ ಕನ್ನಡದಲ್ಲಿ 509, ಧಾರವಾಡದಲ್ಲಿ 186, ವಿಜಯಪುರ 176, ಬಳ್ಳಾರಿ 155, ಬೆಳಗಾವಿ 137, ಉತ್ತರ ಕನ್ನಡ 116, ಶಿವಮೊಗ್ಗ 114, ಉಡುಪಿ 109, ಚಿಕ್ಕಬಳ್ಳಾಪುರ 107, ಮೈಸೂರು 101, ಬೆಂಗಳೂರು ಗ್ರಾಮಾಂತರ 94, ಕಲಬುರಗಿ ಹಾಗೂ ಗದಗ ತಲಾ 82, ಬೀದರ್​ 72, ದಾವಣಗೆರೆ 56, ಹಾಸನ 51, ಮಂಡ್ಯ 42, ಕೋಲಾರ 35, ಚಾಮರಾಜನಗರ 34, ತುಮಕೂರು ಮತ್ತು ಚಿಕ್ಕಮಗಳೂರು ತಲಾ 24, ಚಿತ್ರದುರ್ಗ 22, ರಾಯಚೂರು 16, ಹಾವೇರಿ 15, ಬಾಗಲಕೋಟೆ, ಕೊಪ್ಪಳ, ರಾಮನಗರ ತಲಾ 13, ಕೊಡಗು 10 ಮತ್ತು ಯಾದಗಿರಿಯಲ್ಲಿ ನಾಲ್ವರಲ್ಲಿ ಇಂದು ಕರೊನಾ ಸೋಂಕು ದೃಢಪಟ್ಟಿದೆ.

    ಇನ್ನು ಬೆಂಗಳೂರಿನಲ್ಲಿ ಒಟ್ಟು 49 ಸೋಂಕಿತರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ 7, ಧಾರವಾಡ 6, ಬಳ್ಳಾರಿಯಲ್ಲಿ 3, ಬೆಳಗಾವಿಯಲ್ಲಿ ಮೂವರು, ಶಿವಮೊಗ್ಗದಲ್ಲಿ ಓರ್ವ, ಚಿಕ್ಕಬಳ್ಳಾಪುರದಲ್ಲಿ 1, ಕಲಬುರಗಿಯಲ್ಲಿ 5, ಬೀದರ್ 1, ದಾವಣಗೆರೆ 1, ತುಮಕೂರು 3, ಹಾವೇರಿ 2, ಬಾಗಲಕೋಟೆ 3 ಮತ್ತು ಕೊಡಗುದಲ್ಲಿ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ.

    ಶವದ ಫೋಟೋ ತೆಗೆಯಲು ಹೋದ ಫೋಟೋಗ್ರಾಫರ್​ ಮೊದಲು ಹೌಹಾರಿದರು..ನಂತರ ಹೀರೋ ಆಗಿಬಿಟ್ಟರು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts