More

    ರೈಲ್ವೆ ನಿಲ್ದಾಣದ ಗೋದಾಮಿನಲ್ಲಿದ್ದ 900 ಮೂಟೆ ರಸಗೊಬ್ಬರ ನಾಪತ್ತೆ; ಏನಾಯ್ತು ಎಂಬುದೇ ಗೊತ್ತಿಲ್ಲ!

    ಬೆಳಗಾವಿ: ತಾಲೂಕಿನ ದೇಸೂರು ರೈಲ್ವೆ ನಿಲ್ದಾಣ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ 50 ಕೆ.ಜಿ. ತೂಕದ ಡಿಎಪಿ 900 ಚೀಲ ರಸಗೊಬ್ಬರ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮುಂಗಾರು ಹಂಗಾಮಿನ ಬಿತ್ತನೆ ಹಾಗೂ ಕಬ್ಬು ಬೆಳೆಗಳಿಗಾಗಿ ಡಿಎಪಿ ರಸಗೊಬ್ಬರ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದರಿಂದ ದೇಶದ ವಿವಿಧ ಭಾಗಗಳಿಂದ ರೈಲ್ವೆ ಮೂಲಕ ಮೇ 17ರಂದು 900 ಚೀಲ ಡಿಎಪಿ ಸೇರಿ ವಿವಿಧ ರಸಗೊಬ್ಬರ ದೇಸೂರು ರೈಲ್ವೆ ನಿಲ್ದಾಣಕ್ಕೆ ಬಂದಿತ್ತು. ಆದರೆ, ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಗೊಬ್ಬರವನ್ನು ಮಾರಾಟ ಮಳಿಗೆಗಳಿಗೆ ಸಾಗಿಸಲು ಸಾಧ್ಯವಾಗದ ಕಾರಣ ರೈಲ್ವೆ ನಿಲ್ದಾಣ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ, ಮೇ 17 ಮತ್ತು 21ರ ನಡುವಿನ ಅವಧಿಯಲ್ಲಿ ಡಿಎಪಿ 900 ಚೀಲ ಡಿಎಪಿ ರಸಗೊಬ್ಬರ ಕಳ್ಳತನವಾಗಿದೆ.

    ಈ ಕುರಿತು ಗೋದಾಮು ಮತ್ತು ರಸಗೊಬ್ಬರ ಸಾರಿಗೆ ಅಧಿಕಾರಿಗಳು ಮೂರು ದಿನಗಳ ನಿರಂತರ ಹುಡುಕಿದರೂ ರಸಗೊಬ್ಬರ ಪತ್ತೆಯಾಗಿಲ್ಲ. ಅಲ್ಲದೆ, ಯಾರು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮೇ 23ರಂದು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಗೋದಾಮು ಮತ್ತು ರಸಗೊಬ್ಬರ ಸಾರಿಗೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
    ಗೋದಾಮಿನಲ್ಲಿ ಸಂಗ್ರಹಿಟ್ಟಿರುವ 900 ಚೀಲ ರಸಗೊಬ್ಬರವನ್ನು ಏಕಾಏಕಿ ಕಳ್ಳತನ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಗೊತ್ತಿರುವವರೇ ವ್ಯವಸ್ಥಿತವಾಗಿ ಈ ಕೃತ್ಯ ಎಸಗಿದ್ದಾರೆ. ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಗೊಬ್ಬರ ಕಳ್ಳತನವಾಗಿರುವುದು ಮೇಲ್ನೋಟಕ್ಕೆ ಬಂದಿದೆ. ಅಲ್ಲದೆ, ಲಾರಿಗಳ ಮೂಲಕವೇ ಗೊಬ್ಬರ ಸಾಗಿಸಲಾಗಿದೆ. ಇದರಲ್ಲಿ ಗೋದಾಮಿನ ಸಿಬ್ಬಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಮಳೆಯಿಂದಾಗಿ ದೇಸೂರು ರೈಲ್ವೆ ನಿಲ್ದಾಣ ಗೋದಾಮಿನಲ್ಲಿಯೇ ಡಿಎಪಿ ರಸಗೊಬ್ಬರ ಸಂಗ್ರಹಿಸಿಡಲಾಗಿತ್ತು. ಆದರೆ, ಮೂರು ದಿನಗಳ ಅವಧಿಯಲ್ಲಿ 12 ಲಕ್ಷ ರೂ. ಮೌಲ್ಯದ 900 ಚೀಲ ರಸಗೊಬ್ಬರ ಕಳ್ಳತವಾಗಿದೆ. ಸಿಸಿಟಿವಿ ಇಲ್ಲದಿರುವುದರಿಂದ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ.

    | ಶಿವಾಜಿ ಡಿ. ಆನಂದಾಚೆ ರಸಗೊಬ್ಬರ ಸಾರಿಗೆ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts