More

    ಅಪಾರ್ಟ್‌ಮೆಂಟ್‌ನಲ್ಲಿ 90 ಕೆ.ಜಿ. ಗಾಂಜಾ ಪತ್ತೆ: ದಂಧೆ ಹಣದಲ್ಲಿ ಆರೋಪಿಗಳ ವಿಲಾಸಿ ಜೀವನ!

    ಬೆಂಗಳೂರು: ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಕಾಡುಗೋಡಿ ನಿವಾಸಿ ಅಜಾಮ್ ಪಾಷಾ, ಮಸ್ತಾನ್ ವಾಲಿ ಮತ್ತು ಮೊಹಮ್ಮದ್ ಅಬ್ಬಾಸ್ ಬಂಧಿತರು. ಆರೋಪಿಗಳು ದೊಡ್ಡ ಬನಹಳ್ಳಿಯ ಸಫಲ್ ಮಾರ್ಕೆಟ್ ಸಮೀಪದ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ 50 ಲಕ್ಷ ರೂ. ಮೌಲ್ಯದ 90 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ತಲೆಮರೆಸಿಕೊಂಡಿರುವ ಆರೋಪಿ ಎಚ್.ಎ.ಎಲ್ ಹಪ್ಪು ಜತೆ ಸೇರಿ ಆರೋಪಿಗಳು ಕ್ಯಾಂಟರ್‌ನಲ್ಲಿ ಆಂಧ್ರಪ್ರದೇಶದ ವಿಶಾಕಪಟ್ಟಣಕ್ಕೆ ಹೋಗಿ ಪ್ರವೀಣ್ ಎಂಬಾತನಿಂದ ಗಾಂಜಾ ಖರೀದಿಸುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಸಬ್ ಪೆಡ್ಲರ್‌ಗಳ ಮುಖಾಂತರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯ ವ್ಯಾಪಿ ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ದಂಧೆಯಿಂದ ಬಂದ ಹಣದಲ್ಲಿ ಆರೋಪಿಗಳು ವಿಲಾಸಿ ಜೀವನ ನಡೆಸುತ್ತಿದ್ದರು. ಕಾಡುಗೋಡಿ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts