More

    90 ಜನರಿಗೆ ಪೌತಿ ಖಾತೆ ಸೌಲಭ್ಯ

    ಚಿಕ್ಕಮಗಳೂರು: ಪೌತಿ ಖಾತೆ ಆಂದೋಲನದಡಿ ಏಳೆಂಟು ತಿಂಗಳಿಂದ ಮನೆ ಬಾಗಿಲಿಗೆ ಕಂದಾಯ ದಾಖಲೆ ನೀಡುತ್ತಿದ್ದೇವೆ. ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ರಾಜ್ಯದ 60 ಲಕ್ಷ ಕುಟುಂಬಗಳಿಗೆ ಸರ್ವೆ ಸ್ಕೆಚ್ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ಕಡೂರು ತಾಲೂಕು ಹುಲಿಕೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವಿಶೇಷ ಪೌತಿ ಖಾತೆ ಆಂದೋಲನ ಹಾಗೂ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯದ ಅಂಗವಾಗಿ 90 ಜನರಿಗೆ ಪೌತಿ ಖಾತೆ ನೀಡಲಾಗುತ್ತಿದೆ. ಕಡೂರು ತಾಲೂಕಿನಲ್ಲಿ 12 ಸಾವಿರ ಪೌತಿ ಖಾತೆ ಮಾಡಿಕೊಡಲಾಗಿದೆ. ಜಮೀನು ವಿಭಾಗ ಮಾಡಿಸಿಕೊಂಡವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಸಿಗಲಿದೆ ಎಂದರು.

    5 ಎಕರೆಗಿಂತ ಕಡಿಮೆ ಜಮೀನು ಇರುವಂಥ ರೈತರಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ರೂ. ಕೊಡುತ್ತಿದೆ. ಪೌತಿ ಖಾತೆ ಮಾಡಿಸಿಕೊಳ್ಳದ ರೈತರು ಈ ನೆರವಿನಿಂದ ವಂಚಿತರಾಗುತ್ತಿವೆ. ಇದನ್ನು ಮನಗಂಡು ಪೌತಿ ಖಾತೆ ಆಂದೋಲನ ಮಾಡಲಾಗುತ್ತಿದೆ. ಜಮೀನು ಇರುವ ಎಲ್ಲರೂ ಪೌತಿ ಖಾತೆ ಮಾಡಿಸಿಕೊಂಡರೆ ಪ್ರತಿ ವರ್ಷ ರಾಜ್ಯಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ. ಬರುತ್ತದೆ. ಇದರ ಪ್ರಯೋಜನ ಎಲ್ಲ ರೈತರಿಗೆ ಸಿಗಬೇಕು ಎಂಬುದು ಆಂದೋಲನದ ಮೂಲ ಉದ್ದೇಶ ಎಂದು ಮಾಹಿತಿ ನೀಡಿದರು.

    ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಹುಲಿಕೆರೆ ಗ್ರಾಮದಲ್ಲಿ 49 ನಿವೇಶನಗಳನ್ನು ರಚನೆ ಮಾಡಲು 10 ಲಕ್ಷ ರೂ. ಮಂಜೂರು ಮಾಡಲಾಗಿದೆ. ಇನ್ನಷ್ಟು ನಿವೇಶನದ ಬೇಡಿಕೆ ಬಂದರೂ ಕೊಡಲು ಅವಕಾಶವಿದೆ ಎಂದು ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts