More

    ವೈದ್ಯರು, ನರ್ಸ್​ಗಳ ಆರೋಗ್ಯ ರಕ್ಷಣೆಯಲ್ಲಿ ತೊಡಗಿದ್ದಾಳೆ ಈ 9 ವರ್ಷದ ಬಾಲಕಿ..

    ಈ ಕರೊನಾ ವೈರಸ್​ ಜಗತ್ತಿನ ಪಾಲಿಗೆ ಅದೆಷ್ಟು ಮಾರಕವಾಗಿದೆ ಎಂಬುದನ್ನು ನಾವೆಲ್ಲ ಕಣ್ಣಾರೆ ನೋಡುತ್ತಿದ್ದೇವೆ. ಐದು ತಿಂಗಳುಗಳಿಂದ ಇದು ಸೃಷ್ಟಿಸುತ್ತಿರುವ ಅವಘಡಗಳು ಒಂದೆರಡಲ್ಲ.

    ಕರೊನಾ ಸೋಂಕು, ಅದರ ಸ್ವರೂಪ, ಲಕ್ಷಣಗಳನ್ನೆಲ್ಲ ಇನ್ನೂ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಅಂಥದ್ದರಲ್ಲಿ ಮಕ್ಕಳಿಗೆಲ್ಲ ಹೇಗೆ ಗೊತ್ತಿರಬೇಕು ಕರೊನಾ ವೈರಸ್​ ಬಗ್ಗೆ? ಆದರೆ ಇಲ್ಲೊಬ್ಬ ಪುಟ್ಟ ಬಾಲಕಿ ಕರೊನಾದಿಂದ ಆಗುತ್ತಿರುವ ಅಪಾಯವನ್ನು ಅರ್ಥ ಮಾಡಿಕೊಂಡಿದ್ದಾಳೆ. ಅವಳ ಕೆಲಸವೀಗ ತುಂಬ ಜನರಿಗೆ ಮಾದರಿಯಾಗಿದೆ.
    ಈಕೆ ಮಲೇಷಿಯಾದ 9 ವರ್ಷದ ಬಾಲಕಿ. ಹೆಸರು ನೂರ್ ಅಫಿಯಾ ಕಿಸ್ಟಿನಾ ಜಮ್ಜುರಿ. ಇವಳೀಗ ಒಂದು ವಿಧದಲ್ಲಿ ಕರೊನಾ ವಾರಿಯರ್​…!

    ಕರೊನಾ ವೈರಸ್​ ವಿರುದ್ಧ ಹೋರಾಡುತ್ತಿರುವ ಅದೆಷ್ಟೋ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು ಸೂಕ್ತ ಪಿಪಿಇ ಕಿಟ್ (ಪರ್ಸನಲ್​ ಪ್ರೊಟೆಕ್ಟಿವ್​ ಇಕ್ವಿಪ್​​ಮೆಂಟ್​)​ಗಳು ಇಲ್ಲದೆ ಕಷ್ಟಪಡುತ್ತಿದ್ದಾರೆ.

    ಇದನ್ನೂ ಓದಿ: ವಿದೇಶದಿಂದ ಬಂದವರಿಗೆ ಫೈವ್ ಸ್ಟಾರ್ ಸೌಲಭ್ಯ, ಶ್ರಮಿಕ್​ ರೈಲುಗಳಲ್ಲಿ ವ್ಯಕ್ತಿಗತ ಅಂತರವೂ ಇಲ್ಲ

    ಮಲೇಷಿಯಾದಲ್ಲಿ ಈ ಬಾಲಕಿ ಇರುವ ಪ್ರದೇಶದ ಆಸ್ಪತ್ರೆಗಳಲ್ಲೂ ಸಹ ಪಿಪಿಇ ಕಿಟ್​ಗಳ ಕೊರತೆ ಇತ್ತು. ಆರೋಗ್ಯ ಸಿಬ್ಬಂದಿ ಸುರಕ್ಷತಾ ಸಾಧನಗಳಿಲ್ಲದೆ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ, ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಇದನ್ನು ಕೇಳಿದ ನೂರ್ ಅಫಿಯಾ ಸ್ವತಃ ಪಿಪಿಇ ಕಿಟ್​​ಗಳನ್ನು ತಯಾರಿಸಿದ್ದಾಳೆ. ಕೇವಲ 9 ವರ್ಷದ ಬಾಲಕಿ ಆರೋಗ್ಯ ಕಾರ್ಯಕರ್ತರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾಳೆ. ಹಲವು ಪಿಪಿಇ ಗೌನ್​​ಗಳನ್ನು ಹೊಲಿದು ಕೊಟ್ಟಿದ್ದಾಳೆ.

    ನೂರ್​ ಅಫಿಯಾ ಮಲೇಷಿಯಾದ ನೈಋತ್ಯ ರಾಜ್ಯವಾದ ನೆಗೆರಿ ಸೆಂಬಿಲಾನ್​ನ ಕೌಲಾ ಪಿಲಾಜ್​ ಪಟ್ಟಣದವಳು. ಅಲ್ಲಿನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸೇರಿ, ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್​ಗಳ ಪೂರೈಕೆ ಆಗುತ್ತಿಲ್ಲ ಎಂಬ ವಿಚಾರ ಇವಳ ಕಿವಿಗೂ ಬಿತ್ತು. ಸುದ್ದಿ ಕೇಳಿದ್ದೇ ತಡ ಸೀದಾ ತಾಯಿಯ ಬಳಿ ಹೋಗಿ..ಅಮ್ಮ, ಕರೊನಾ ವೈರಸ್​ ಅಪಾಯಕಾರಿ ಎಂಬುದು ನನಗೆ ಗೊತ್ತು. ಆದರೆ ಆಸ್ಪತ್ರೆಗಳಲ್ಲಿ ಪಿಪಿಇ ಗೌನ್​​ಗಳಿಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ವಿಚಾರ ಕೇಳಿ ತುಂಬ ಬೇಸರವಾಗುತ್ತಿದೆ. ಅಂಥವರಿಗೆ ನಾನು ಸಹಾಯ ಮಾಡುತ್ತೇನೆ. ಗೌನ್​ ಹೊಲಿದು ಕೊಡುತ್ತೇನೆ ಎಂದು ಹೇಳಿದಳು. ಅದಕ್ಕೆ ನೂರ್​ ಅಮ್ಮ ಕೂಡ ಬೆಂಬಲ ನೀಡಿದರು.
    ಅಗತ್ಯ ವಸ್ತುಗಳನ್ನೆಲ್ಲ ತಂದ ಪುಟಾಣಿ, ದಿನವೊಂದಕ್ಕೆ ನಾಲ್ಕು ಪಿಪಿಇ ಗೌನ್​​ಗಳನ್ನು ಹೊಲಿಯುತ್ತಿದ್ದಾಳೆ. ಸ್ಕೂಲ್​ಗೆ ಹೋಗುತ್ತಿಲ್ಲವಾದರೂ ಆನ್​ಲೈನ್​ನಲ್ಲಿ ಪಾಠ ನಡೆಯುತ್ತಿದೆ. ಅದರಲ್ಲೂ ಪಾಲ್ಗೊಂಡು, ಸ್ವಲ್ಪ ಹೊತ್ತು ಆಟವಾಡುತ್ತಾಳೆ. ನಂತರ ಈ ಗೌನ್​ಗಳನ್ನು ಹೊಲಿಯುತ್ತಿದ್ದಾಳೆ.

    ಇದನ್ನೂ ಓದಿ: ನಿರ್ದೇಶಕ ಪುರಿ ಜಗನ್ನಾಥ್​ ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ​!? ಯಾರವರು ಎಂಬುದಕ್ಕೆ ಇಲ್ಲಿದೆ ಉತ್ತರ!

    ನೂರ್​ ಈವರೆಗೆ ಸುಮಾರು 130 ಪಿಪಿಇ ಗೌನ್​ಗಳನ್ನು ಹೊಲಿದು, ಸ್ಥಳೀಯ ಆಸ್ಪತ್ರೆಗಳಿಗೆ ನೀಡಿದ್ದಾಳೆ. ಇನ್ನೂ 60 ಪೀಸ್​ಗಳನ್ನು ಹೊಲಿಯುವ ತಯಾರಿಯಲ್ಲಿದ್ದಾಳೆ. ಆದರೆ ಸದ್ಯ ರಮಜಾನ್​ ಇರುವುದರಿಂದ ಸ್ವಲ್ಪ ಕುಟುಂಬವೆಲ್ಲ ಹಬ್ಬದ ಆಚರಣೆಯಲ್ಲಿ ತೊಡಗಿದೆ. ಉಪವಾಸ ಮಾಡುತ್ತಿದ್ದಾರೆ. ನೂರ್​ ಕೂಡ ಉಪವಾಸ ಮಾಡುತ್ತಾಳೆ. ಆದರೆ ಕೆಲಸವನ್ನು ಮಾತ್ರ ನಿಲ್ಲಿಸಿಲ್ಲ. ಮುಂಜಾನೆ ಉಪಹಾರಾದ ನಂತರ ಮತ್ತೆ ಗೌನ್​ಗಳ ಹೊಲಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾಳೆ.

    ನೂರ್​ ಅಫಿಯಾ ಅಮ್ಮ ಸ್ವತಃ ಟೇಲರ್​. ಹಾಗಾಗಿ ಮಗಳ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಗೌನ್​ಗಳ ಹೊಲಿಯುತ್ತ ನೂರ್​ ಕೌಶಲ ಕೂಡ ಹೆಚ್ಚಾಗುತ್ತಿದೆ. ಒಂದೊಳ್ಳೆ ಕೆಲಸವೂ ಆಕೆಯಿಂದ ನಡೆಯುತ್ತಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಪಾದರಾಯನಪುರದಲ್ಲಿ ಕ್ವಾರಂಟೈನ್​ನಲ್ಲಿದ್ದ ಮಹಿಳೆಯರ ಮಿತಿಮೀರಿದ ವರ್ತನೆ: ಆರೋಗ್ಯ ಸಚಿವರಿಂದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts