More

    10ಕ್ಕೆ 9; ಈ ಶುಕ್ರವಾರ ಹೊಸಬರದ್ದೇ ಕಾರುಬಾರು!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ 10 ಪ್ಲಸ್​ ಚಿತ್ರಗಳು ಬಿಡುಗಡೆಯಾಗುವುದು ಹೊಸದಲ್ಲವೇ ಅಲ್ಲ. ಕಳೆದ ವರ್ಷವೇ ಮೂರ್ನಾಲ್ಕು ಬಾರಿ ಎಂಟಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ವರ್ಷ ಪ್ರಾರಂಭವಾಗಿ ಈ ಏಳು ವಾರಗಳಲ್ಲಿ ಯಾವೊಂದು ವಾರವೂ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಡೆಯಾಗಿರಲಿಲ್ಲ. ಫೆ.10ರಂದು 9 ಹೊಸ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅದರ ಜತೆಗೆ ಒಂದು ಡಬ್ಬಿಂಗ್​ ಮತ್ತು ಒಂದು ಹಳೆಯ ಚಿತ್ರ ಮರುಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಎರಡರ ಬಳಿಕ ಒಂದು ಬಿಡುಗಡೆ!; ಕಾಂತಾರ ಚಿತ್ರಕ್ಕೂ ಮೊದಲೇ ಜೂಲಿಯೆಟ್ 2 ಪ್ಲ್ಯಾನ್

    ವಿಶೇಷವೆಂದರೆ, ಈ 9 ಸಿನಿಮಾಗಳ ಪೈಕಿ ಹೊಸಬರ ಚಿತ್ರಗಳೇ ಹೆಚ್ಚು. ಹಳಬರ ಚಿತ್ರಗಳು ಒಂದಿಷ್ಟು ಇವೆಯಾದರೂ, ಆ ಚಿತ್ರಗಳನ್ನು ನಿರ್ದೇಶಿಸಿರುವುದು ಸಹ ಹೊಸಬರೇ ಎನ್ನುವುದು ವಿಶೇಷ.

    ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ಪ್ರವೀಣ್​ ತೇಜ್​, ಐಶಾನಿ ಶೆಟ್ಟಿ, ನವೀನ್​ ಶಂಕರ್​, ಶ್ರೀ ಮಹದೇವ್​, ಅರ್ಚನಾ ಜೋಯಿಸ್​, ಭಾವನಾ ರಾವ್​ ಮುಂತಾದವರು ನಟಿಸಿರುವ ‘ಹೊಂದಿಸಿ ಬರೆಯಿರಿ’, ವಿಜಯ್​ ಜಗದಾಲ್​, ಕ್ರಿಷಿ ತಾಪಂಡ, ಚಂದನಾ ಪ್ರಮುಖ ತಾರಾಗಣದಲ್ಲಿರುವ ‘ರೂಪಾಯಿ’, ಅನಿತಾ ಭಟ್​, ಪವನ್​ ಶೆಟ್ಟಿ, ಶಫಿ ನಟಿಸಿರುವ ‘ಬೆಂಗಳೂರು 69’, ಪ್ರತಾಪ್​ ನಾರಾಯಣ್​ ಮತ್ತು ರಂಗಾಯಣ ರಘು ಅಭಿನಯದ ‘ಉತ್ತಮರು’, ರಾಜೀವ್​ ರಾಥೋಡ್​, ‘ದುನಿಯಾ’ ರಶ್ಮಿ ನಟಿಸಿರುವ ‘ರಂಗಿನ ರಾಟೆ’, ಅರ್ಜುನ್​ ಯೋಗೇಶ್​, ಸುಪ್ರಿತಾ ಸತ್ಯನಾರಾಯಣ್​, ತೇಜಸ್ವಿನಿ ಶೇಖರ್​ ತಾರಾಗಣದಲ್ಲಿರುವ ‘ಲಾಂಗ್​ ಡ್ರೈವ್​​’, ನಾಗರಾಜ್​ ನಿರ್ದೇಶನದ ಹಾರರ್​ ಸಿನಿಮಾ ‘ಡಿಸೆಂಬರ್​ 24’, ಹೊಸಬರ ‘ಒಂದಾನೊಂದು ಕಾಲದಲ್ಲಿ’ ಹಾಗೂ ಸ್ಮೈಲ್​ ಶ್ರೀನ್​ ನಿರ್ದೇಶನದ ’18 ಟು 25′ ಚಿತ್ರಗಳು ಇಂದು ತೆರೆಗೆ ಬರುತ್ತಿವೆ.

    ಇದನ್ನೂ ಓದಿ: ಸ್ನೇಹಿತರೋ? ಪ್ರೇಮಿಗಳೋ? ಮಾಲ್ಡೀವ್ಸ್​ನಲ್ಲಿ ಪ್ರಭಾಸ್​-ಕೃತಿ ನಿಶ್ಚಿತಾರ್ಥ?

    ಇದಲ್ಲದೆ ಬಾಬ್ಬಿ ಸಿಂಹ ಅಭಿನಯದ ತಮಿಳು ಚಿತ್ರ ‘ವಸಂತ ಕೋಕಿಲ’ ಕನ್ನಡದಲ್ಲಿ ಡಬ್​ ಆಗಿ ಬಿಡುಗಡೆಯಾಗುತ್ತಿದೆ. ಇದೆಲ್ಲದರ ಜತೆಗೆ ದಿಗಂತ್​ ಅಭಿನಯದ ಹಳೆಯ ಚಿತ್ರ ‘ಲೈಫು ಇಷ್ಟೇನೆ’ ಚಿತ್ರ ಮರುಬಿಡುಗಡೆಯಾಗುತ್ತಿದೆ.

    ಗಂಡ ಅರೆಸ್ಟ್​ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts