More

    ಚಂದನವನಕ್ಕೆ ಗ್ರೇಸಿಲಾ ಪಿಶ್ನರ್ ಎಂಟ್ರಿ; ‘ಬೆಂಗಳೂರು 69’ರಲ್ಲಿ ಯೂರೋಪ್​ನ ಮಾಡೆಲ್​

    ಬೆಂಗಳೂರು: ಕನ್ನಡ ಚಿತ್ರಗಳಲ್ಲಿ ಇದುವರೆಗೂ ಹಲವು ವಿದೇಶಿ ನಟಿಯರು ಅಭಿನಯಿಸಿದ್ದಾರೆ. ಈಗ ಗ್ರೇಸಿಲಾ ಪಿಶ್ನರ್ ಎಂಬ ಯೂರೋಪ್​ನ ಮಾಡಲ್​ ‘ಬೆಂಗಳೂರು 69’ ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ತೆರೆಯ ಮೇಲೆ ಚಿತ್ರಕಲಾವಿದನ ‘ಪರಿಸ್ಥಿತಿ’ ಬಿಚ್ಚಿಟ್ಟ ಗಣೇಶ್​ ನಾರಾಯಣ್​ …

    ‘ಬೆಂಗಳೂರು 69’ ಚಿತ್ರವನ್ನು ಟ್ರಿಪಲ್ ಎ ಸಿನಿಮಾಸ್ ಬ್ಯಾನರ್​ನಡಿ ದುಬೈ ಮೂಲದ ಕನ್ನಡಿಗ ಝಾಕಿರ್‌ ಹುಸೇನ್​ ಕರೀಂ ಖಾನ್ ಮತ್ತು ಅವರ ಪತ್ನಿ ಗುಲ್ಜಾರ್ ನಿರ್ಮಿಸುತ್ತಿದ್ದಾರೆ. ಅನಿತಾ ಭಟ್, ಪವನ್ ಶೆಟ್ಟಿ ಮತ್ತು ತೆಲುಗು ನಟ ಶಫಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 10ರಂದು ಈ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕ್ರೈಮ್​ ಥ್ರಿಲ್ಲರ್​ ಚಿತ್ರವಾಗಿದ್ದು, ಕ್ರಾಂತಿ ಚೈತನ್ಯ ನಿರ್ದೇಶನ ಮಾಡಿದ್ದಾರೆ.

    ಈ ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ರೂಪಿಸಲಾಗಿದ್ದು, ಈ ಹಾಡಿನಲ್ಲಿ ಯೂರೋಪ್​ನಲ್ಲಿ ಹೆಸರು ಮಾಡಿರುವ ಮಾಡಲ್​ ಗ್ರೇಸಿಲಾ ಪಿಶ್ನರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಬರೀ ಯೂರೋಪಿಯನ್​ ಮಾಡಲ್​ ಅಷ್ಟೇ ಅಲ್ಲ, ಲ್ಯಾಟಿನ್ ಅಮೆರಿಕನ್ ನೃತ್ಯ ಸಂಯೋಜಕಿ ಅನುಬಿಸ್ ಮತ್ತು ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ತಂತ್ರಜ್ಞರನ್ನು ಈ ಚಿತ್ರಕ್ಕಾಗಿ ಕರೆತರಲಾಗಿದೆ. ಅಮೆರಿಕನ್ ವಸ್ತ್ರ ವಿನ್ಯಾಸಕರು ಚಿತ್ರದಲ್ಲಿ ಗ್ರೇಸಿಲಾಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರದ ವಿಶೇಷ ಹಾಡನ್ನು ದುಬೈನ ಬುರ್ಜ್ ಖಲೀಫಾ ಮತ್ತು ಶಾರ್ಜಾ ಮರುಭೂಮಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

    ಇದನ್ನೂ ಓದಿ: ಕೋಮಲ್​ಗೆ ಪ್ರಕಾಶ್​ ರೈ ಸಾಥ್​ … ‘ಕಾಲಾಯ ನಮಃ’ ಚಿತ್ರಕ್ಕೆ ಎಂಟ್ರಿ

    ‘ಬೆಂಗಳೂರು 69’ ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ. ವಿಕ್ರಮ್ ಮತ್ತು ಚಂದನಾ ಅವರ ಸಂಗೀತ ಈ ಚಿತ್ರಕ್ಕಿದೆ.

    ಬಾಲಿವುಡ್​ಗೆ ರಾಗಿಣಿ; ಲಂಡನ್​ನಲ್ಲಿ ಶೂಟಿಂಗ್​ ಮುಗಿಸಿ ಬಂದ ತುಪ್ಪದ ಬೆಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts