More

    ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಗುಡ್​ ನ್ಯೂಸ್​: ಯೂರೋಪಿನ 9 ದೇಶಗಳಲ್ಲಿ ಗ್ರೀನ್​ ಪಾಸ್​

    ನವದೆಹಲಿ : ಭಾರತದ ಕೋವಿಶೀಲ್ಡ್​​ ಲಸಿಕೆ ಪಡೆದವರಿಗೆ, ಯೂರೋಪಿನ 9 ದೇಶಗಳು – ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್​​ಲ್ಯಾಂಡ್, ಐರ್ಲೆಂಡ್, ಸ್ಪೇನ್, ಎಸ್ಟೋನಿಯಾ ಮತ್ತು ಸ್ವಿಟ್ಜರ್ಲೆಂಡ್ – ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಗ್ರೀನ್ ಪಾಸ್​ ನೀಡಿವೆ. ಈ ದೇಶಗಳಿಗೆ ಭೇಟಿ ನೀಡುವ ಭಾರತೀಯರು ಕೋವಿಶೀಲ್ಡ್​ ಲಸಿಕೆ ಪಡೆದಿದ್ದಲ್ಲಿ ಕ್ವಾರಂಟೈನ್​ಗೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ.

    ಆದಾಗ್ಯೂ ಭಾರತೀಯ ಲಸಿಕೆಗಳಾದ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ಗೆ ಯೂರೋಪಿಯನ್​ ಒಕ್ಕೂಟದ ಉನ್ನತ ವೈದ್ಯಕೀಯ ಸಂಸ್ಥೆ ಯುರೋಪಿಯನ್ ಮೆಡಿಸಿನ್ಸ್​ ಏಜೆನ್ಸಿ(ಇಎಂಎ)ಯ ಅನುಮೋದನೆ ಇನ್ನೂ ಸಿಕ್ಕಿಲ್ಲ. ಇಎಂಎ ಈವರೆಗೆ ನಾಲ್ಕೇ ಲಸಿಕೆಗಳನ್ನು ಅನುಮೋದಿಸಿರುವುದು. ಅವುಗಳೆಂದರೆ ಫೈಜರ್​ ಬಯೋಎನ್​ಟೆಕ್​ನ ಕೋಮಿರ್ನಾಟಿ, ಅಮೆರಿಕದ ಮಾಡರ್ನದ ಕೋವಿಡ್ ಲಸಿಕೆ, ಯೂರೋಪಿನಲ್ಲಿ ಉತ್ಪಾದನೆಯಾಗುವ ಆಸ್ಟ್ರಾಜೆನೆಕಾದ ವಾಕ್ಸ್​ಜೆರ್ವ್​ರಿಯ ಮತ್ತು ಜಾನ್ಸನ್ ಅಂಡ್ ಜಾನ್ಸನ್​ನ ಜ್ಯಾನ್​ಸೆನ್ ಲಸಿಕೆಗಳು. ಈ ನಾಲ್ಕು ಲಸಿಕೆಗಳಲ್ಲಿ ಯಾವುದಾದರೂ ಒಂದನ್ನು ಪಡೆದವರಿಗೆ ಮಾತ್ರ ಯೂರೋಪಿನಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಒದಗಿಸುವ ವ್ಯಾಕ್ಸಿನೇಷನ್ ಪಾಸ್​ಪೋರ್ಟ್​ಗಳನ್ನು ನೀಡಲಾಗಿದೆ.

    ಇದನ್ನೂ ಓದಿ: ಫೋನ್​ ಟ್ಯಾಪ್ ಕೇಸ್: ಶಾಸಕ ಬೆಲ್ಲದ್​ರ ಪರಿಚಯಸ್ಥರೇ ಕರೆ ಮಾಡಿದ್ದು ದೃಢ

    ಆಸ್ಟ್ರಜೆನೆಕಾದ ಲಸಿಕೆಯನ್ನೇ ಆಕ್ಸ್​​ಫರ್ಡ್​ ಯೂನಿವರ್ಸಿಟಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸುತ್ತಿರುವ ಸೀರಮ್​ ಇನ್ಸ್​ಟಿಟ್ಯೂಟಿನ ಕೋವಿಶೀಲ್ಡ್​​ಗೆ ಇಎಂಎ ಅನುಮೋದನೆ ನೀಡಿಲ್ಲ. ಆದರೆ ಸದಸ್ಯ ರಾಷ್ಟ್ರಗಳು ಬೇರೆ ಲಸಿಕೆಗಳನ್ನು ಪಡೆದವರಿಗೆ ಈ ಸೌಲಭ್ಯವನ್ನು ವಿಸ್ತರಿಸಬಹುದಾಗಿದ್ದು, ಇದೀಗ 9 ರಾಷ್ಟ್ರಗಳು ಕೋವಿಶೀಲ್ಡ್​​ಗೆ ತಮ್ಮ ಮಾನ್ಯತೆಯನ್ನು ನೀಡಿವೆ. (ಏಜೆನ್ಸೀಸ್)

    ಜೈಕೋವಿ-ಡಿ : ಮತ್ತೊಂದು ಕರೊನಾ ಲಸಿಕೆಯ ತುರ್ತು ಬಳಕೆಗೆ ಅರ್ಜಿ

    ಗುಲ್ಶನ್​ ಕುಮಾರ್​ ಹತ್ಯೆ: 16 ಗುಂಡಿಟ್ಟು ಕೊಂದಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ, ಓರ್ವ ಆರೋಪಿಗೆ ಖುಲಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts