More

    ಹಳ್ಳಿ ಜನರ ಹೊಸ ಆವಿಷ್ಕಾರ ಶೇರ್​ ಮಾಡಿದ ಆನಂದ್​ ಮಹೀಂದ್ರಾ…

    ನವದೆಹಲಿ: ಆನಂದ್​ ಮಹೀಂದ್ರಾ ಎಂದರೆ ವಾಹನ ಉದ್ಯಮದ ದೊಡ್ಡ ಕೈ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇವರು ಮಾಡುವ ಒಂದೊಂದು ಟ್ವೀಟ್​ ಕೂಡ ಅರ್ಥಪೂರ್ಣ. ಇದೀಗ ಅವರು ಹಳ್ಳಿ ಜನರು ತಯಾರಿಸಿದ ಬೈಕ್​ ಹೋಲುವ ರಿಕ್ಷಾದ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

    ವಾಹನದ ವೀಡಿಯೊವನ್ನು ಹಂಚಿಕೊಳ್ಳುವಾಗ, ಆನಂದ್​ ಮಹೀಂದ್ರಾ ‘ಸರಳ ವಿನ್ಯಾಸದ ಈ ವಾಹನಕ್ಕೆ ಜಾಗತಿಕವಾಗಿ ಉತ್ತಮ ಮಾರುಕಟ್ಟೆ ಸಿಗಬಹುದು. ಇದನ್ನು ಯುರೋಪಿನಲ್ಲಿರುವ ಜನದಟ್ಟಣೆ ಹೆಚ್ಚಾಗಿರುವ ಪ್ರವಾಸಿ ತಾಣಗಳಲ್ಲಿ ಬಳಸಬಹುದೇ? ನಾನು ಯಾವಾಗಲೂ ಗ್ರಾಮೀಣ ಜನರ ನವೀನ ವಾಹನಗಳಿಂದ ಪ್ರಭಾವಿತನಾಗಿದ್ದೇನೆ, ಅಲ್ಲಿ ಅವಶ್ಯಕತೆಯು ಆವಿಷ್ಕಾರದ ತಾಯಿ’ ಎಂದು ಬರೆದಿದ್ದಾರೆ,

    ವಿಡಿಯೋದಲ್ಲಿರುವ ವ್ಯಕ್ತಿ ಈ ವಾಹನ ಒಮ್ಮೆ ಚಾರ್ಜ್ ಮಾಡಿದರೆ 150 ಕಿಮೀ ತನಕ ಹೋಗುತ್ತೆ, ಒಮ್ಮೆ ಚಾರ್ಜ್​ ಮಾಡಲು 8 ರಿಂದ 10 ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

    ಕೆಲವು ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದ್ದ ಈ ವಿಡಿಯೋ ಟ್ವಿಟರ್‌ನಲ್ಲಿ 1,99,000 ಕ್ಕೂ ಹೆಚ್ಚು ವೀವ್ಸ್​ ಪಡೆದುಕೊಂಡಿದೆ. ಕೆಲವರು ಈ ವಾಹನವನ್ನು ಮಾರುಕಟ್ಟೆಗೆ ತರಲು ಸುರಕ್ಷತಾ ಕ್ರಮಗಳನ್ನು ಸೂಚಿಸಿದ್ದಾರೆ. ಕೆಲವರು ‘ಮೃಗಾಲಯ, ಪಾರ್ಕ್, ಕಾರ್ಪ್ ಕಾಂಪ್ಲೆಕ್ಸ್‌ಗಳಂತಹ ಸ್ಥಳಗಳಿಗೆ ಇದು ಉತ್ತಮ ವಾಹನ. ಈ ಐಡಿಯಾ ಸಾಮಾನ್ಯ ಟ್ರಾಫಿಕ್‌ಗೆ ಸರಿಹೊಂದುವುದಿಲ್ಲ. ಆದರೆ ಹೆಚ್ಚು ದೂರ ಕ್ರಮಿಸಲು ಈ ವಾಹನ ಸಹಾಯ ಮಾಡುತ್ತದೆ’ ಎಂದು ಬರೆದಿದ್ದಾರೆ. ಈ ಬಗ್ಗೆ ತಮ್ಮ ಕಂಪೆನಿಯ ಎಲೆಕ್ಟ್ರಿಕ್​ ಕಾರುಗಳ ವಿಭಾಗದ ಪ್ರತಾಪ್​ ಬೋಸ್​ ಎನ್ನುವವರನ್ನೂ ಟ್ಯಾಗ್​ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts