More

    ನಕಲಿ ದಾಖಲೆ ಸಲ್ಲಿಸಿ 81.76 ಕೋಟಿ ಮೌಲ್ಯದ ಟೆಂಡರ್ ಪಡೆದ ಖಾಸಗಿ ಕಂಪನಿ

    ಬೆಂಗಳೂರು: ಕೆಪಿಟಿಸಿಎಲ್ ಕರೆದಿದ್ದ 81.76 ಕೋಟಿ ರೂ. ಮೌಲ್ಯದ ಟೆಂಡರ್ ಪಡೆಯಲು ನಕಲಿ ದಾಖಲೆ ಪತ್ರ ಸಲ್ಲಿಸಿದ್ದ ಖಾಸಗಿ ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಾವೇರಿ ಭವನ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಕಚೇರಿ ನಿಯಂತ್ರಣಾಧಿಕಾರಿ ಪ್ರುಲ್ಲಾ ಜಿ. ಹೆಗಡೆ, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಹೊಸೂರು ರಸ್ತೆ ಮಡಿವಾಳದ ಎಂಜೆನ್ ಗ್ಲೋಬಲ್ ಸೆಲ್ಯೂಷನ್ ಪ್ರೈ. ಲಿ. ಕಂಪನಿಯ ಚೇರ್‌ಮನ್ ಕೆ.ಆರ್. ಸತೀಶ್‌ಕುಮಾರ್, ಉಪಾಧ್ಯಕ್ಷ ಹನುಮೇಗೌಡ ಮತ್ತು ಜಾನ್ ಜಾಕೋಬ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಕೆಪಿಟಿಸಿಎಲ್ 2022ರ ಮೇ 31ರಲ್ಲಿ 81.76 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿತ್ತು. ಬಿಡ್‌ನಲ್ಲಿ ಭಾಗವಹಿಸುವರು ಟೆಂಡರ್ ಮೊತ್ತದ ಶೇ.10 ಮೊತ್ತದ ಬ್ಯಾಂಕ್‌ನಿಂದ ಕಾರ್ಯಾಧಾರಿತ ಪ್ರಮಾಣ ಪತ್ರ ನೀಡುವುದು ಕಡ್ಡಾಯ. ಅದರಂತೆ ಆರೋಪಿತ ಕಂಪನಿ, ಶೇ. 8.49 ಕೋಟಿ ರೂ. ಮೊತ್ತದ ಬ್ಯಾಂಕ್ ಕಾರ್ಯಾಧಾರಿತ ಖಾತರಿಯನ್ನು ಸಲ್ಲಿಸಿತ್ತು.

    ಟೆಂಡರ್‌ನಲ್ಲಿ ಒಂದೇ ಕಂಪನಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಎಂಜೆನ್ ಗ್ಲೋಬಲ್ ಸೆಲ್ಯೂಷನ್ ಪ್ರೈ.ಲಿ. ಕಂಪನಿಗೆ ಟೆಂಡರ್ ಲಭಿಸಿತ್ತು. ಇದಾದ ಮೇಲೆ ಈ ಕಂಪನಿ ಸಲ್ಲಿಸಿದ್ದ 8.49 ಕೋಟಿ ರೂ. ಮೊತ್ತದ ಕಾರ್ಯಾಧಾರಿತ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಶಾಖೆಯಾದ ಉತ್ತರ ಪ್ರದೇಶಕ್ಕೆ ಕಳುಹಿಸಿ ದೃಢೀಕರಣ ಮಾಡುವಂತೆ ಮನವಿ ಮಾಡಲಾಗಿತ್ತು.

    ಆದರೆ, ಬ್ಯಾಂಕ್ ಈ ಕಾರ್ಯಾಧಾರಿತ ಖಾತರಿ ಪ್ರಮಾಣ ಪತ್ರ ನಕಲಿ ಎಂದು ದೃಢೀಕರಿಸಿತ್ತು. ಕೆಪಿಟಿಸಿಎಲ್ ಕರೆದಿದ್ದ 81.76 ಕೋಟಿ ರೂ. ಮೌಲ್ಯದ ಟೆಂಡರ್ ಪಡೆಯಲು ನಕಲಿ ದಾಖಲೆ ಸಲ್ಲಿಸಿ ವಂಚನೆ ಮಾಡಲು ಖಾಸಗಿ ಕಂಪನಿ ವಂಚನೆ ಮಾಡಲು ಪ್ರಯತ್ನಿಸಿದೆ ಎಂದು ದೂರಿನಲ್ಲಿ ಪ್ರಪುಲ್ಲಾ ಜಿ. ಹೆಗಡೆ, ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts