More

    Food Poisoning | ಜಾತ್ರೆಯಲ್ಲಿ ಊಟ ಮಾಡಿ 80 ಮಂದಿ ಅಸ್ವಸ್ಥ!

    ಜಾರ್ಖಂಡ್‌: ಧನ್‌ಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಜಾತ್ರೆಯಲ್ಲಿ ನಕಲಿ ‘ಚಾಟ್ ಮಸಾಲಾ’ ಸೇವಿಸಿ 80 ಜನರು ಅಸ್ವಸ್ಥರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ನಡೆದಿದ್ದೇನು?: ಹುಚ್ಚುಕ್ತಂದಡ್ ಗ್ರಾಮದ ಜನರು ಭೋಕ್ತಾ ಜಾತ್ರೆ ಮುಗಿಸಿ ವಾಪಸಾದ ನಂತರ ಹೊಟ್ಟೆ ನೋವು ಮತ್ತು ವಾಂತಿ ಮಾಡಿಕೊಳ್ಳುಲು ಶುರುವಾಗಿದೆ. ಅವರಲ್ಲಿ ಎಂಭತ್ತು ಮಂದಿಯ ಸ್ಥಿತಿ ಹದಗೆಟ್ಟಿದ್ದರಿಂದ ರಾತ್ರಿ 10:30 ರ ಸುಮಾರಿಗೆ ಶಾಹಿದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: ಜೀನ್ಸ್, ಟಿ-ಶರ್ಟ್‌ ಧರಿಸಲು ಅವಕಾಶವಿಲ್ಲ; ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್!

    ಒಂಬತ್ತು ವರ್ಷದ ಪಿಂಕಿ ಕುಮಾರಿ, ಹಿರಿಯ ವ್ಯಕ್ತಿ 44 ವರ್ಷ ವಯಸ್ಸಿನ ವಿಜಯ್ ಮಹತೋ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಅಸ್ವಸ್ಥರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬುಧವಾರ ಸಂಜೆ ಕರ್ಮತಾಂಡ್ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: VIDEO| ಮದುವೆ ಮಂಟಪದಲ್ಲಿ ಜುಟ್ಟು ಹಿಟ್ಕೊಂಡು ಕಿತ್ತಾಡಿದ ವಧು-ವರ!
    ಎಮರ್ಜೆನ್ಸಿ ವಾರ್ಡ್‌ನಲ್ಲಿನ ಬೆಡ್‌ಗಳ ಕೊರತೆಯಿಂದಾಗಿ ಇಷ್ಟು ದೊಡ್ಡ ಸಂಖ್ಯೆಯ ರೋಗಿಗಳು ಒಟ್ಟಿಗೆ ಆಗಮಿಸಿದ್ದರಿಂದ ಕೆಲವರಿಗೆ ಆಸ್ಪತ್ರೆಯ ಇತರ ವಾರ್ಡ್‌ಗಳಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    VIDEO| ಗ್ಯಾಂಗ್​​ಸ್ಟರ್​​ ಸಮಾಧಿ ಮೇಲೆ ರಾಷ್ಟ್ರಧ್ವಜ: ಕಾಂಗ್ರೆಸ್ ನಾಯಕ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts