More

    VIDEO| ಗ್ಯಾಂಗ್​​ಸ್ಟರ್​​ ಸಮಾಧಿ ಮೇಲೆ ರಾಷ್ಟ್ರಧ್ವಜ: ಕಾಂಗ್ರೆಸ್ ನಾಯಕ ಅರೆಸ್ಟ್

    ಲಕ್ನೋ: ಹತ್ಯೆಯಾದ ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ ಸಮಾಧಿ ಮೇಲೆ ರಾಷ್ಟ್ರ ಧ್ವಜವನ್ನು ಇರಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ ಕಾಂಗ್ರೆಸ್‌ನ ನಾಯಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ಓಲ್ಡ್ ಸಿಟಿ ಪ್ರದೇಶದ ಕಸರಿ ಮಸಾರಿ ಸ್ಮಶಾನದಲ್ಲಿ ಅತಿಕ್ ಸಮಾಧಿಯಿದೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ರಜ್ಜು ಅತಿಕ್ ಸಮಾಧಿ ಮೇಲೆ ರಾಷ್ಟ್ರಧ್ವಜವನ್ನು ಇರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಧೂಮಗಂಜ್ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: VIDEO| ಮದುವೆ ಮಂಟಪದಲ್ಲಿ ಜುಟ್ಟು ಹಿಟ್ಕೊಂಡು ಕಿತ್ತಾಡಿದ ವಧು-ವರ!

    ರಾಜ್‌ಕುಮಾರ್ ಸಿಂಗ್ ಅತಿಕ್‌ನನ್ನು ಹುತಾತ್ಮ ಎಂದು ಕರೆದಿದ್ದಾನೆ. ಅತಿಕ್‌ಗೆ ಭಾರತ ರತ್ನ ನೀಡಬೇಕೆಂದು ಎಂದು ಹೇಳಿ ಸಮಾಧಿಯ ಮೇಲೆ ತ್ರಿವರ್ಣ ಧ್ವಜವನ್ನು ಹರಡಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ವೀಡಿಯೋದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬುಧವಾರ ಆರೋಪಿ ಕಾಂಗ್ರೆಸ್ ನಾಯಕನನ್ನು ಬಂಧಿಸಿದ್ದಾರೆ.

    ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಮಿಶ್ರಾ ಅಂಶುಮಾನ್ ಮಾತನಾಡಿ, ರಾಜ್‌ಕುಮಾರ್‌ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ. ಅತಿಕ್ ಬಗೆಗಿನ ರಜ್ಜು ಹೇಳಿಕೆಗಳು ಹಾಗೂ ಕೃತ್ಯಗಳು ಆತನ ವೈಯಕ್ತಿಕ ದೃಷ್ಟಿಕೋನದ್ದಾಗಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಜೀನ್ಸ್, ಟಿ-ಶರ್ಟ್‌ ಧರಿಸಲು ಅವಕಾಶವಿಲ್ಲ; ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್!
    ಅತಿಕ್ ಮತ್ತು ಆತನ ಕಿರಿಯ ಸಹೋದರ ಅಶ್ರಫ್ ಏಪ್ರಿಲ್ 15 ರಂದು ರಾತ್ರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಅವರಿಬ್ಬರನ್ನೂ ಕೊಂದಿದ್ದ. ಬಳಿಕ ಏಪ್ರಿಲ್ 16ರ ಸಂಜೆ ತಡವಾಗಿ ಅತಿಕ್ ಮತ್ತು ಅಶ್ರಫ್‌ನ ಸಮಾಧಿ ಮಾಡಲಾಯಿತು.

    ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್; ಮಹಿಳೆ ಗಡಿಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts