More

    ‘ಮಹಾರಾಷ್ಟ್ರದಲ್ಲಿ ಶೇ.80ರಷ್ಟು ಕರೊನಾ ಸೋಂಕಿತರಿಗೆ……’- ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೇಳಿದ್ದಾರೆ ಒಂದು ಅಚ್ಚರಿಯ ವಿಷಯ…

    ಮುಂಬೈ: ಇಡೀ ದೇಶದಲ್ಲಿ 26,000 ಮಂದಿ ಕರೊನಾ ಸೋಂಕಿತರು ಇದ್ದಾರೆ. ಈ ಸಂಖ್ಯೆಯಲ್ಲಿ ಕಾಲು ಭಾಗ ಮಹಾರಾಷ್ಟ್ರದ್ದು. ಭಾರತದಲ್ಲಿ ಅತಿ ಹೆಚ್ಚು ಕರೊನಾ ಪೀಡಿತರು ಇರುವ ರಾಜ್ಯ ಮಹಾರಾಷ್ಟ್ರ. ಅಲ್ಲಿ 7,628 ಮಂದಿ ಸೋಂಕಿತರು ಇದ್ದಾರೆ. ಅದರಲ್ಲೂ ಮುಂಬೈನಲ್ಲೇ ಅತಿ ಹೆಚ್ಚು ಜನರು ಇದ್ದಾರೆ.

    ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಒಂದು ಆತಂಕಕಾರಿ ವಿಚಾರ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು ಶೇ.80ರಷ್ಟು ಕರೊನಾ ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳೇ ಇಲ್ಲ. ಇದೊಂದು ಅಚ್ಚರಿಯ ವಿಷಯ ಎಂದಿದ್ದಾರೆ.

    ಏಪ್ರಿಲ್​ 30ಕ್ಕೆ ಒಂದು ಸಭೆ ನಡೆಸಬೇಕು. ಅದರಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು. ನಿಧಾನವಾಗಿ ಸಹಜಸ್ಥಿತಿಗೆ ಮರಳಲು ಯೋಜನೆ ರೂಪಿಸಲಾಗುವುದು ಎಂದಿದ್ದಾರೆ.

    ಸದ್ಯ ಕರೊನಾ ಹೊರತು ಪಡಿಸಿದ ರೋಗಿಗಳಿ ಚಿಕಿತ್ಸೆ ನೀಡುವುದು ಅಗತ್ಯ. ಹಾಗಾಗಿ ವೈದ್ಯರೆಲ್ಲ ತಮ್ಮ ಆಸ್ಪತ್ರೆಗಳನ್ನು ತೆರೆಯಬೇಕು. ಡಯಾಲಿಸಿಸ್​ ಕೇಂದ್ರಗಳು ಮರು ಆರಂಭವಾಗಬೇಕು ಎಂದು ಉದ್ಧವ್​ ಠಾಕ್ರೆ ತಿಳಿಸಿದ್ದಾರೆ.

    ದೇಶದಲ್ಲಿ ಮೇ 3ರವರೆಗೆ ಎರಡನೇ ಹಂತದ ಲಾಕ್​ಡೌನ್​ ಇರಲಿದೆ. ಅದಾದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಮೋದಿಯವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ.

    ಈ ಮಧ್ಯೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಪಂಜಾಬ್​ ಮತ್ತು ಒಡಿಶಾಗಳು ಲಾಕ್​ಡೌನ್​ ಅವಧಿಯನ್ನು ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.(ಏಜೆನ್ಸೀಸ್​)

    ಪಾದರಾಯನಪುರ ಗಲಭೆ ಪ್ರಕರಣದ ಪ್ರಮುಖ ಆರೋಪಿ ಇನ್ನೂ ಪತ್ತೆಯಿಲ್ಲ..ಕರೊನಾ ಭಯದ ನಡುವೆಯೂ ಪೊಲೀಸರಿಂದ ತೀವ್ರ ಶೋಧ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts