More

    ಬಿರುಗಾಳಿಗೆ ತತ್ತರಿಸಿದ 8 ತಿಂಗಳ ಗರ್ಭಿಣಿ ಕುಟುಂಬ! ಸೂರಿಗಾಗಿ ಸರ್ಕಾರಕ್ಕೆ ಮನವಿ

    ಬಾಗಲಕೋಟೆ: ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದ್ದು, ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಗರ್ಭಿಣಿ ನೆಲೆಸಿದ್ದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಬಿರುಗಾಳಿಗೆ ತಗಡಿನ ಶೆಡ್​ಗಳಲ್ಲಿ ಇದ್ದ ಕುಟುಂಬಗಳ ಬದುಕು ಅತಂತ್ರವಾಗಿದೆ.

    ಇದನ್ನೂ ಓದಿ: ಬಿರುಗಾಳಿಗೆ ತತ್ತರಿಸಿದ 8 ತಿಂಗಳ ಗರ್ಭಿಣಿ ಕುಟುಂಬ! ಸೂರಿಗಾಗಿ ಸರ್ಕಾರಕ್ಕೆ ಮನವಿ

    ಕಳೆದೊಂದು ವಾರದಿಂದ ರಾಜ್ಯದೆಲ್ಲೆಡೆ ಮಳೆ ಆರಂಭಗೊಂಡಿದ್ದು, ಭಾರಿ ಮಳೆಗೆ ಒಂದೆಡೆ ಸಂತೋಷ ಉಂಟಾದರೆ, ಇನ್ನೊಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಿನ್ನೆ ಸಂಜೆ ಬೀಸಿದ ರಕ್ಕಸ ಬಿರುಗಾಳಿಗೆ ಮನೆಗಳ ಮೇಲ್ಛಾವಣಿ ಕುಸಿದು ಹೋಗಿದೆ. ಗ್ರಾಮದ ಯಲ್ಲಪ್ಪ ಎಂಬ ವ್ಯಕ್ತಿಯ ಕುಟುಂಬವು ಶೆಡ್​ನಿಂದ ನಿರ್ಮಾಣವಾದ ಮನೆಯಲ್ಲಿ ವಾಸಿಸುತ್ತಿದ್ದು, ತೀರಾ ಬಡತನದಲ್ಲಿರುವ ಕುಟಂಬ ಎಂದು ಹೇಳಲಾಗಿದೆ.

    ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಎಂಟು ತಿಂಗಳ ಗರ್ಭಿಣಿ ಶೋಭಾ ಎಂಬ ಮಹಿಳೆ, ಮೋಟಿ ಕುಟುಂಬದವರ ಜತೆ ತಗಡಿನ ಶೀಟ್​ಗಳು ಬಿದ್ದ ಮನೆಯಲ್ಲಿಯೇ ಇಡೀ ರಾತ್ರಿ ಕಳೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts