More

    ಬಾಯಲ್ಲಿ ಮೊಬೈಲ್ ಚಾರ್ಜರ್ ವೈರ್​ ಇಟ್ಕೊಂಡ 8 ತಿಂಗಳ ಮಗು ವಿದ್ಯುತ್​ ಶಾಕ್​ನಿಂದ ದುರಂತ ಸಾವು

    ಉತ್ತರಕನ್ನಡ: ಮಗುವಿಗೆ ಜನ್ಮ ಕೊಡುವುದಷ್ಟೇ ಅಲ್ಲ, ಅದು ಬೆಳೆದು ಒಂದು ಹಂತಕ್ಕೆ ಬರುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಪಾಲಕರು ಮಾಡುವ ಒಂದು ಸಣ್ಣ ಎಡವಟ್ಟು ಅಥವಾ ನಿರ್ಲಕ್ಷ್ಯ ಏನು ಅರಿಯದ ಮಗುವಿನ ಪ್ರಾಣವನ್ನೇ ಕಸಿಯುತ್ತದೆ ಎನ್ನುವುದಕ್ಕೆ ಈ ಒಂದು ತಾಜಾ ಘಟನೆ ದುರಂತ ಉದಾಹರಣೆಯಾಗಿದೆ.

    ಹೌದು, ಮೊಬೈಲ್ ಚಾರ್ಜರ್ ಬಾಯಿಯಲ್ಲಿ ಹಾಕಿಕೊಂಡ ಪರಿಣಾಮ ವಿದ್ಯುತ್​ ಶಾಕ್​ನಿಂದ 8 ತಿಂಗಳ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡದ ಕಾರವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ. ಮೊಬೈಲ್​ ಅನ್ನು ಚಾರ್ಜ್​ ಪಿನ್​ನಿಂದ ತೆಗೆದ ಬಳಿಕ ಸ್ವಿಚ್​ ಆಫ್​ ಮಾಡುವ ಅಭ್ಯಾಸ ಕೆಲವರಿಗೆ ಇರುವುದಿಲ್ಲ. ಈ ಒಂದು ದುರಾಭ್ಯಾಸ ಒಂದು ಮಗುವಿನ ಪ್ರಾಣವನ್ನೇ ತೆಗೆದಿದೆ.

    ಇದನ್ನೂ ಓದಿ: 50ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ; 80 ಎಕರೆಯಲ್ಲಿ 1.2 ಮಿಲಿಯನ್ ಸೂರ್ಯಕಾಂತಿ ಹೂ ಬೆಳೆದು ಪತ್ನಿಗೆ ಸರ್‌ಫ್ರೈಸ್ ಕೊಟ್ಟ ರೈತ

    ಸಿದ್ದರ ಗ್ರಾಮದ ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಇದೀಗ ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದೆ. ಮೊಬೈಲ್ ಚಾರ್ಜ್ ಹಾಕಿ ತೆಗೆದ ನಂತರ ಪಾಲಕರು ಸ್ವಿಚ್ ಆಫ್​ ಮಾಡಿರಲಿಲ್ಲ. ಮಕ್ಕಳು ಏನೇ ಕಂಡರು ಮೊದಲು ಬಾಯಿಗೆ ಹಾಕಿಕೊಳ್ಳುತ್ತವೆ. ಅದೇ ರೀತಿ ಮಗು ಸಾನಿಧ್ಯ ಕೂಡ ಚಾರ್ಜರ್ ಪಿನ್ ಅನ್ನು ಬಾಯಲ್ಲಿ ಹಾಕಿಕೊಂಡಾಗ ವಿದ್ಯುತ್​ ಶಾಕ್​ನಿಂದ ದುರಂತ ಸಂಭವಿಸಿದೆ.

    ತಕ್ಷಣ ಬೈಕ್​ನಲ್ಲಿ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. (ದಿಗ್ವಿಜಯ ನ್ಯೂಸ್​)

    ಸೀಮಾ ಹೈದರ್​ಳನ್ನು ಪಾಕಿಸ್ತಾನಕ್ಕೆ ವಾಪಸ್​ ಕಳಿಸ್ತೀರಾ? ಸಿಎಂ ಯೋಗಿ ಆದಿತ್ಯನಾಥ್​ ಕೊಟ್ಟ ಉತ್ತರ ಹೀಗಿತ್ತು….

    ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಛಾವಣಿ ಕುಸಿತ; ಅನುಮತಿ ಪಡೆಯದೇ ಕೆಲಸ ಮಾಡುತ್ತಿದ್ದ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts