More

    ಪಾಕ್​ನ ಬಲೂಚಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ 8 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

    ಕರಾಚಿ: ಪಾಕಿಸ್ತಾನ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಧಾರ್ಮಿಕ ಜಾಥಾದ ಮೇಲೆ ಸೋಮವಾರ ಶಕ್ತಿಶಾಲಿ ಆತ್ಮಹತ್ಯಾ ಬಾಂಬ್ ದಾಳಿ ಆಗಿದ್ದು, ಕನಿಷ್ಠ 8 ಜನ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ಬಲೂಚಿಸ್ತಾನದ ಕ್ವೆಟ್ಟಾ ಪ್ರೆಸ್​ ಕ್ಲಬ್ ಸಮೀಪದ ಶಹ್ರಾಹ್​ ಏ ಅದಾಲತ್ ರಸ್ತೆಯಲ್ಲಿ ಧಾರ್ಮಿಕ ಸಮಾವೇಶ ಜಾಥಾ ನಡೆಯತ್ತಿದ್ದ ವೇಳೆ ಆತ್ಮಹತ್ಯಾ ದಾಳಿ ನಡೆದಿದೆ. ಈ ದಾಳಿಯಲ್ಲಿ ಮೂವರು ಪೊಲೀಸರು ಸೇರಿ ಎಂಟು ಜನ ಸಾವನ್ನಪ್ಪಿದ್ದಾರೆ. 23 ಜನ ಗಾಯಗೊಂಡಿದ್ದಾರೆ.ಅನೇಕ ವಾಹನಗಳು ಜಖಂಗೊಂಡಿವೆ. ಹಾನಿ ಪ್ರಮಾಣ ಇನ್ನೂ ನಿಖರವಾಗಿ ಅಂದಾಜಿಸಲಾಗಿಲ್ಲ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

    ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೊನಿಯೋ ಗುಟೆರ್ರೆಸ್ ಪಾಕಿಸ್ತಾನ ಪ್ರವಾಸದಲ್ಲಿ ಇರುವ ಅದೇ ದಿನ ಈ ದಾಳಿ ನಡೆದಿದೆ. ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ಸುಧಾರಿಸಿರುವುದು ಗಮನಾರ್ಹ ಎಂದು ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದ ಕಾರಣ ಜಗತ್ತಿನ ಗಮನಸೆಳದಿದೆ.

    ಇದುವರೆಗೂ ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಈ ಹಿಂದಿನ ದಾಳಿಗಳನ್ನು ಗಮನಿಸಿದರೆ ಬಲೂಚಿಸ್ತಾನದ ರಾಷ್ಟ್ರೀಯ ವಾದಿಗಳು ಮತ್ತು ತಾಲಿಬಾನ್ ಉಗ್ರರಷ್ಟೇ ಇಂತಹ ದಾಳಿಗಳನ್ನು ನಡೆಸಿದ್ದು ಗಮನಾರ್ಹ.

    ಪ್ರಾಂತೀಯ ಗೃಹ ಸಚಿವ ಜಿಯಾ ಉಲ್ ಲಂಗು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಾಂಬ್ ಸ್ಫೋಟದ ಬಗ್ಗೆ ತನಿಖೆ ಆರಂಭವಾಗಿದೆ. ಶೀಘ್ರದಲ್ಲೇ ಉಳಿದ ವಿವರಗಳು ಬಹಿರಂಗವಾಗಲಿವೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts