More

  ಪಾಕಿಸ್ತಾನದ ಮಸೀದಿಯೊಂದರಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಪ್ರಬಲ ಬಾಂಬ್​ ಸ್ಫೋಟ; 15 ಮಂದಿ ಸಾವು

  ಇಸ್ಲಾಮಾಬಾದ್​: ಪಾಕಿಸ್ತಾನದ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಪ್ರಬಲ ಬಾಂಬ್​ ಸ್ಫೋಟಗೊಂಡಿದ್ದು ಮಸೀದಿಯ ಗುರು, ಓರ್ವ ಪೊಲೀಸ್​ ಅಧಿಕಾರಿ ಸೇರಿ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ.

  ಮೂರುದಿನಗಳ ಹಿಂದೆಯಷ್ಟೇ ಕ್ವೆಟ್ಟಾದ ರಕ್ಷಣಾ ದಳದ ವಾಹನವೊಂದನ್ನು ಗುರಿಯಾಗಿಸಿಕೊಂಡು ನಡೆಸಲಾಗಿದ್ದ ಬಾಂಬ್​ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈಗ ಮತ್ತೊಂದು ಬಾಂಬ್​ ಬ್ಲಾಸ್ಟ್​ ಆಗಿದ್ದು ಆತಂಕ ಮೂಡಿಸಿದೆ.
  ಮಸೀದಿಯಲ್ಲಿ ನಡೆದ ಬಾಂಬ್​ ಸ್ಫೋಟದಿಂದ ಹಲವು ಜನರು ತೀವ್ರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts