More

    ಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?

    ನವದೆಹಲಿ: ಜಗತ್ತಿನಾದ್ಯಂತ 100ಕ್ಕೂ ಅಧಿಕ ಕಂಪನಿಗಳೀಗ ಕರೊನಾ ವೈರಸ್​ ನಿಗ್ರಹಿಸಲು ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಕೆಲವು ಲಸಿಕೆಗಳನ್ನು ಈಗಾಗಲೇ ಮಾನವರ ಮೇಲೆ ಪ್ರಯೋಗಿಸಲಾಗಿದೆ. ಅಂದರೆ ಅವುಗಳು ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿವೆ. ಆದರೆ, ಇವುಗಳ ಪೈಕಿ ಏಳರಿಂದ ಎಂಟು ಲಸಿಕೆಗಳು ಮಾತ್ರ ಪೈಪೋಟಿಯಲ್ಲಿ ಮುಂಚೂಣಿಯಲ್ಲಿವೆ. ಅವುಗಳ ತಯಾರಿಕೆ ಪ್ರಕ್ರಿಯೆಗೆ ವೇಗ ದೊರೆತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಡಾ. ಟೆಡ್ರೊಸ್​ ಅಡ್ನಾಮ್​ ವಿಡಿಯೋ ಸಂವಾದದಲ್ಲಿ ಈ ಮಾಹಿತಿ ನೀಡಿದ್ದಾರೆ. ಲಸಿಕೆ ತಯಾರಾಗಲು 12-18 ತಿಂಗಳು ಬೇಕಾಗಲಿದೆ ಎಂದು ಎರಡು ತಿಂಗಳ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಲಸಿಕೆ ತಯಾರಿಸುವ ಪ್ರಕ್ರಿಯೆಗೆ ಭಾರಿ ವೇಗ ದೊರೆತಿದೆ. ಏಕೆಂದರೆ, 40ಕ್ಕೂ ಅಧಿಕ ದೇಶಗಳ ನಾಯಕರು, ಸಂಸ್ಥೆಗಳು ಹಾಗೂ ಬ್ಯಾಂಕುಗಳು ಲಸಿಕೆ ಸಂಶೋಧನೆ, ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ 8 ಬಿಲಿಯನ್​ ಡಾಲರ್​ಗಳ ( ಅಂದಾಜು 60 ಸಾವಿರ ಕೋಟಿ ರೂ.) ನೆರವು ನೀಡಲು ಮುಂದೆ ಬಂದಿವೆ ಎಂದು ಮಾಹಿತಿ ನೀಡಿದ್ದಾರೆ. ಅಂದರೆ ಜಗತ್ತಿನಲ್ಲಿ ಅತ್ಯಂತ ದುಬಾರಿ ಲಸಿಕೆ ಎಂಬ ಹೆಗ್ಗಳಿಕೆ ಇದು ಪಾತ್ರವಾಗಬಹುದೇನೋ?

    ಇದನ್ನೂ ಓದಿ; ವಿಶಾಖಪಟ್ಟಣದ 13,000 ಟನ್ ವಿಷಾನಿಲ ಎಲ್ಲಿಗೆ ರವಾನೆಯಾಗುತ್ತಿದೆ ಗೊತ್ತಾ? 

    ಆದರೆ, ಈ ಮೊತ್ತ ಸಂಶೋಧನೆಗೆ ಸಾಕಾಗದು. ಅದರಲ್ಲೂ ಮುಖ್ಯವಾಗಿ ಜಗತ್ತಿನ ಯಾರೂ ಈ ಲಸಿಕೆಯಿಂದ ವಂಚಿತರಾಗಕೂಡದು. ಪ್ರತಿಯೊಬ್ಬರಿಗೂ ಈ ಔಷಧವನ್ನು ತಲುಪುವಂತೆ ಮಾಡಲು ಹೆಚ್ಚುವರಿ ಆರ್ಥಿಕ ನೆರವು ಬೇಕಾಗಲಿದೆ ಎಂದು ಹೇಳಿದ್ದಾರೆ.

    ನೂರಕ್ಕೂ ಹೆಚ್ಚು ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಅದರಲ್ಲಿ ಏಳರಿಂದ ಎಂಟು ಕಂಪನಿಗಳು ಎಲ್ಲರಿಗಿಂತ ಮುಂದಿವೆ. ಅದರಲ್ಲೂ ಹೆಚ್ಚು ಪರಿಣಾಮಕಾರಿಯಾಗಿ ಲಸಿಕೆ ತಯಾರಿಸಬಲ್ಲ ಕೆಲ ಸಂಸ್ಥೆಗಳಿಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು. ಆದರೆ, ಆ ಕಂಪನಿಗಳು ಯಾವವು ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

    ಇದನ್ನೂ ಓದಿ; ಕರೊನಾ ಯೋಧರಿಗೆ 10 ಕೋಟಿ ಮಾಸ್ಕ್​ ನೀಡಿದ ನೀಡಿದ ಸ್ತ್ರೀಶಕ್ತಿ

    ಕಳೆದ ಜನವರಿಯಿಂದ ಲಸಿಕೆ ಸಂಶೋಧನೆ ಚಟುವಟಿಕೆಗಳ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ವಹಿಸಿದೆ. ಇದಕ್ಕಾಗಿ ವಿಶ್ವದ ಎಲ್ಲೆಡೆಯ ಸಾವಿರಾರು ಸಂಶೋಧಕರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಪ್ರಾಣಿಗಳ ಮೇಲೆ ಪ್ರಯೋಗ, ಮಾನವರ ಮೇಲೆ ಪ್ರಯೋಗ ಹಾಗೂ ಇದರ ನಡುವಿನ ಪ್ರಕ್ರಿಯೆಗಳನ್ನು ಗಮನಿಸುತ್ತಿದೆ. ಇದಲ್ಲದೇ, ಲಸಿಕೆ ಸಂಶೋಧನೆ ಹಾಗೂ ಪತ್ತೆ ಕಾರ್ಯದಲ್ಲಿ ತೊಡಗಿರುವ 400ಕ್ಕೂ ಅಧಿಕ ಸಂಶೋಧಕರ ಒಕ್ಕೂಟವನ್ನೂ ಸ್ಥಾಪಿಸಲಾಗಿದೆ ಎಂದು ಹೇಳಿದರು.

    ರಾಷ್ಟ್ರೀಯ ಹಾಗೂ ಸ್ಥಳಿಯ ಮಟ್ಟದಲ್ಲಿ ಅತ್ಯಂತ ಸುದೃಢ ಆರೋಗ್ಯ ವ್ಯವಸ್ತೆಯನ್ನು ಹೊಂದಿರಬೇಕೆಂಬ ಪಾಠವನ್ನು ಕರೊನಾ ನಮಗೆ ಕಲಿಸಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆಯಾಗದಿದ್ದರೆ, 2030ರ ವೇಳೆಗೆ 500 ಕೋಟಿ ಅಧಿಕ ಜನರು ಆರೋಗ್ಯ ಸೇವೆಯಿಂದ ವಂಚಿತರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts