More

    8 ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಕ್ರಮ

    ಬೈಲಹೊಂಗಲ: ಪಟ್ಟಣದ ಗಂಗಾಗೌರಿ, ಇಂದಿರಾನಗರ ಮಡ್ಡಿ ಪ್ರದೇಶದ ಸರ್ಕಾರಿ ಜಾಗದಲ್ಲಿ ವಾಸಿಸುವ 363 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ಅನೇಕ ವರ್ಷಗಳ ಬೇಡಿಕೆ ಈಡೇರಿಸಲಾಗುತ್ತಿದೆ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.

    ಪಟ್ಟಣದ ಪುರಸಭೆ ಆವರಣದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಕುಟುಂಬಗಳಿಗೆ ಶನಿವಾರ ಹಕ್ಕುಪತ್ರ ವಿತರಿಸಿ ಮಾತನಾಡಿ, ರಾಜ್ಯದಲ್ಲಿ 8,626 ಎಕರೆ ಸರ್ಕಾರಿ ಜಾಗವನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗಿದೆ. ಅಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಿ ಆಶ್ರಯ ನೀಡಲಾಗಿದೆ. ಪಟ್ಟಣದ ಜನತೆಗೂ ಅನುಕೂಲ ಮಾಡಲಾಗುತ್ತಿದ್ದು, ಪಟ್ಟಣದ ಇಂಚಲ ರಸ್ತೆಯಲ್ಲಿ 16 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಪಟ್ಟಣದ 8 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಅರಣ್ಯ ಇಲಾಖೆಗೆ ನೀಡಿದ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪುರಸಭೆಯ ಆಶ್ರಯ ಕಮಿಟಿ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಿ ಜಾಗವನ್ನು ಕೊಳೆಗೇರಿ ಮಂಡಳಿಗೆ ಹಸ್ತಾಂತರಿಸಿ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಇದರ ಸದುಪಯೋಗ ಪಡೆದು ಯಾವುದೇ ಕಾರಣಕ್ಕೂ ಪರಭಾರೆ ಮಾಡದೇ ವಾಸ ಮಾಡಬೇಕು ಎಂದರು.

    ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಮಾತನಾಡಿ, ಹಕ್ಕು ಪತ್ರ ವಿತರಿಸಿದ ಪ್ರದೇಶದಲ್ಲಿ ಈಗಾಗಲೇ ನೀರು, ವಿದ್ಯುತ್ ಸೇರಿ ಅನೇಕ ಮೂಲ ಸೌಕರ್ಯ ಒದಗಿಸಲಾಗಿದ್ದು, ಮುಂದಿನ ದಿಗಳಲ್ಲಿ ರಸ್ತೆ, ಒಳಚರಂಡಿ ಹಾಗೂ ಅನೇಕ ಸೌಕರ್ಯ ನೀಡಲಾಗುವುದು ಎಂದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಉಪಾಧ್ಯಕ್ಷೆ ಲಕ್ಷ್ಮೀ ಬಡ್ಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜನಾ ಬೊಂಗಾಳೆ, ಸದಸ್ಯರಾದ ಗುರು ಮೆಟಗುಡ್ಡ, ಮಹೇಶ ಹರಕುಣಿ, ವಿಜಯ ಬೋಳಣ್ಣವರ, ಅರ್ಜುನ ಕಲಕುಟಕರ, ಬುಡ್ಡೆಸಾಬ ಶಿರಸಂಗಿ, ಸದರುದ್ದಿನ ಅತ್ತಾರ, ಸುಧೀರ ವಾಲಿ, ಶಶಿಕಲಾ ಹೊಸಮನಿ, ಹೇಮಲತಾ ಹಿರೇಮಠ, ಜಗದೀಶ ಜಂಬಗಿ, ಬಸವರಾಜ ಶಿಂತ್ರಿ, ಸಾಗರ ಬಾಂವಿಮನಿ, ಅಂಬಿಕಾ ಕೊಟಬಾಗಿ, ವಾಣಿಶ್ರೀ ಪತ್ತಾರ, ಪ್ರೇಮಾ ಇಂಚಲ, ಶ್ರೀದೇವಿ ದೇವಲಾಪುರ, ಶಶಿಕಲಾ ಕಲ್ಲೋಳ್ಳಿ, ಅಮೀರಬಿ ಬಾಗವಾನ, ಸುಷ್ಮಾ ಗುಂಡ್ಲೂರ, ದಿಲ್ಶಾದ್ ನದಾಫ್, ಆಶ್ರಯ ಕಮಿಟಿ ಸದಸ್ಯರಾದ ಬಸವರಾಜ ಕಲಾದಗಿ, ಶಿವಯೋಗಿ ಹುಲ್ಲೆನ್ನವರ, ಶೋಭಾ ಕುರಬೇಟ, ಪುರಸಭೆ ಎಂ.ಐ. ಕುಟ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts