More

    VIDEO: ರಾತ್ರೋರಾತ್ರಿ ಈ 76ರ ಅಜ್ಜಿ ರಾಕಿಂಗ್​ ಸ್ಟಾರ್​ ಆದದ್ದೇಕೆ?

    ಅನಂತಪುರ (ಆಂಧ್ರಪ್ರದೇಶ): ದೇಹಕ್ಕೆ ಎಷ್ಟೇ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗದಿದ್ದರೆ, ಎಷ್ಟೊಂದು ಚಟುವಟಿಕೆಯಿಂದ ಇರಬಹುದು ಎನ್ನುವುದಕ್ಕೆ ಈ ಅಜ್ಜಿಯೇ ಸಾಕ್ಷಿ.

    ವಯಸ್ಸು 40 ದಾಟುತ್ತಿದ್ದಂತೆಯೇ ಎಷ್ಟೋ ಮಂದಿ ಅಯ್ಯೋ ವಯಸ್ಸಾಗಿ ಹೋಯ್ತು ಎಂದು ಗೊಣಗುವವರೇ ಹೆಚ್ಚು. ಅಂಥದ್ದರಲ್ಲಿ ವಯಸ್ಸು 70 ದಾಟಿದರೆ? ಜೀವನವೇ ಮುಗಿದು ಹೋಯ್ತು ಎಂದುಕೊಳ್ಳುತ್ತಾರೆ. ಅಂಥವರೆಲ್ಲರೂ ಈ ಅಜ್ಜಿಯನ್ನು ನೋಡಿ ಕಲಿಯಬೇಕು!

    ವಯಸ್ಸು 76. ಆದರೆ ಜೋಕಾಲಿ ಮೇಲೆ ನಿಂತು ಅಜ್ಜಿ ಶರವೇಗದಲ್ಲಿ ಅತ್ತಿತ್ತ ಓಲಾಡುವುದನ್ನು ನೋಡಿದರೆ ನಿಬ್ಬೆರಗಾಗಬೇಕು, ಅಂಥ ತಾಕತ್ತು. ಯುವಕ-ಯುವತಿಯರನ್ನೂ ನಾಚಿಸುವಂತೆ ಈ ಅಜ್ಜಿ ಜೋಕಾಲಿ ಆಡುತ್ತಾರೆ. ಅದೂ ನಿಂತುಕೊಂಡೇ! ಕುಳಿತು ಜೋಕಾಲಿ ಆಡುವುದಕ್ಕೇ ಎಷ್ಟೋ ಮಂದಿ ಭಯ ಪಡುವ ನಡುವೆ, ಈ ಅಜ್ಜಿ, ಧೈರ್ಯದಿಂದ ವೇಗದಲ್ಲಿ ಜೀಕುವುದನ್ನು ನೋಡುವುದೇ ಹಬ್ಬ.

    ಇದನ್ನೂ ಓದಿ:  VIDEO: ಯುವಕನ ಜತೆ ಓಡಿಹೋದ ಬಾಲಕಿ: ತಂದೆಯೆದುರೇ ಗ್ರಾಮಸ್ಥರಿಂದ ಅಮಾನುಷ ಹಲ್ಲೆ

    ಅಂದಹಾಗೆ ಈ ಅಜ್ಜಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬ್ರಾಹ್ಮಣಪಲ್ಲೆಯಳು. ಜಯಾ ಎನ್ನುವ ಈ ಮಹಿಳೆ ಲಾಕ್​ಡೌನ್​ ವೇಳೆಯಲ್ಲಿ ಸಮಯ ಕಳೆಯಲು ಜೋಕಾಲಿ ಕಟ್ಟಿಕೊಂಡು ಆಡುತ್ತಿದ್ದರೆ ನೋಡಿದವರೆಲ್ಲರೂ ನಿಬ್ಬೆರಗಾಗುತ್ತಿದ್ದಾರೆ. ಚಿಕ್ಕ ಮಕ್ಕಳಂತೆಯೇ ಜೋಕಾಲಿಯಲ್ಲಿ ಸಂತೋಷ ಪಡುವ ಈಕೆಯನ್ನು ನೋಡಿದವರೆಲ್ಲರೂ ಶಹಭಾಸ್​ಗಿರಿ ಕೊಡುತ್ತಿದ್ದಾರೆ.

    ಅಕ್ಕಪಕ್ಕದ ಮನೆಯವರಿಗಷ್ಟೇ ಸ್ಫೂರ್ತಿಯಾಗಿದ್ದ ಈ ಅಜ್ಜಿ ಇದೀಗ ಸೋಷಿಯಾ ಮೀಡಿಯಾದ ಹೈಲೈಟ್​. ಪಕ್ಕದ ಮನೆಯಾತ ಅಜ್ಜಿ ಜೋಕಾಲಿ ಆಡುವ ವಿಡಿಯೋ ಮಾಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ರಾತ್ರೋ ರಾತ್ರಿ ಈ ವಿಡಿಯೋ ಸಹಸ್ರಾರು ಶೇರ್​ಗಳನ್ನು ಕಂಡು ಕಮೆಂಟ್​ಗಳು ಮಹಾಪೂರವೇ ಹರಿದು ಬಂದಿದೆ.

    ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts