More

    ಬಿಡುಗಡೆಗೂ ಮುನ್ನವೇ ‘ವಿರಾಟಪುರ ವಿರಾಗಿ’ ಚಿತ್ರದ 75 ಸಾವಿರ ಟಿಕೆಟ್​ಗಳ ಮಾರಾಟ

    ಬೆಂಗಳೂರು: ‘ನಾನು ಅವನಲ್ಲ, ಅವಳು’ ಚಿತ್ರದ ನಂತರ ನಿರ್ದೇಶಕ ಬಿ.ಎಸ್​. ಲಿಂಗದೇವರು, ‘ಆಧುನಿಕ ಬಸವಣ್ಣ’ ಎಂದೇ ಖ್ಯಾತರಾಗಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನವನ್ನಾಧರಿಸಿ ಅವರು ‘ವಿರಾಟಪುರ ವಿರಾಗಿ’ ಎಂಬ ಚಿತ್ರ ನಿರ್ದೇಶಿಸಿದ್ದು, ಈ ಚಿತ್ರ 13ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಬಿಡುಗಡೆಗೂ ಮುನ್ನವೇ ಈ ಚಿತ್ರದ 75 ಸಾವಿರ ಟಿಕೆಟ್​ಗಳು ಮಾರಾಟವಾಗಿವೆ.

    ಇದನ್ನೂ ಓದಿ: ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ವಿಶೇಷವೆಂದರೆ, ಈ ಚಿತ್ರದ ಪೇಯ್ಡ್​ ಪ್ರೀಮಿಯರ್​ ಒಂದು ದಿನ ಮುಂಚಿತವಾಗಿಯೇ, ಅಂದರೆ 12ರಂದು ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಡೆಯಲಿದೆ. ಈ ಪೇಯ್ಡ್​ ಪ್ರೀಮಿಯರ್​ನ 75 ಸಾವಿರ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿದ್ದು, ಚಿತ್ರ ಬಿಡುಗಡೆಗೂ ಒಂದು ದಿನ ಮುಂಚೆಯೇ 75 ಸಾವಿರ ಜನ ಚಿತ್ರ ವೀಕ್ಷಣೆ ಮಾಡಲಿದ್ದಾರೆ.

    ಇದಕ್ಕೂ ಮುನ್ನ, ಡಿಸೆಂಬರ್​ನಲ್ಲಿ ‘ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ’ ರಥಯಾತ್ರೆ ನಡೆಯಿತು. ಈ ಯಾತ್ರೆಯಲ್ಲಿ 6 ರಥಗಳು, 13 ದಿನ, 7000 ಕಿಮೀ ಪ್ರಯಾಣ ಮಾಡಿ, 360 ಸಭೆಗಳ ಮೂಲಕ ಚಿತ್ರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಬೃಹತ್ ರಥಯಾತ್ರೆಯು ಜನವರಿ 1ರಂದು ಗದಗನಲ್ಲಿ ಮುಕ್ತಾಯವಾಗಿ, ಅಂದೇ ಚಿತ್ರದ ಟ್ರೈಲರ್​ ಸಹ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಆಯಾ ಊರುಗಳಲ್ಲಿ ಜನರಿಗೆ ನೇರವಾಗಿ ಟಿಕೆಟ್​ಗಳನ್ನು ಮಾರಾಟ ಮಾಡಲಾಯಿತು. ಈ ಸಂದರ್ಭದಲ್ಲಿ ಒಟ್ಟು 75 ಸಾವಿರ ಟಿಕೆಟ್​ಗಳು ಮಾರಾಟವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಟಿಕೆಟ್​ಗಳು ಮಾರಾಟವಾಗುವ ನಿರೀಕ್ಷೆ ಇದೆ.

    ಹಾನಗಲ್​ ಕುಮಾರ ಶಿವಯೋಗಿಗಳ ಕುರಿತು ಒಂದು ಚಿತ್ರ ಮಾಡುವುದಕ್ಕೆ ಜಡೆಯ ಮಹಾಸ್ವಾಮಿಗಳು ಲಿಂಗದೇವರು ಅವರಿಗೆ ಹೇಳಿದರಂತೆ. ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಹರಿಕಾರರಾದ ಕುಮಾರ ಶಿವಯೋಗಿಗಳ ಕುರಿತ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅನೇಕ ಮಠಾಧೀಶರನ್ನು ಹಾಗೂ ವಿದ್ವಾಂಸರನ್ನು ಸಂಪರ್ಕಿಸಿ ಸ್ಕ್ರಿಪ್ಟ್ ಸಿದ್ದ ಮಾಡಿದ್ದಾರೆ.

    ಇದನ್ನೂ ಓದಿ: ದೆಹಲಿ ಹಿಟ್​-ಅಂಡ್​-ರನ್​ ಪ್ರಕರಣ: ಮೃತ ಯುವತಿ ಕುಟುಂಬಕ್ಕೆ ಶಾರುಖ್ ಸಹಾಯಹಸ್ತ

    ‘ಕುಮಾರ ಶಿವಯೋಗಿಗಳ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಆಭಿನಯಿಸಿದ್ದಾರೆ. ‘ಸಮಧಾನ’ ತಂಡದಿಂದ ಚಿತ್ರ ನಿರ್ಮಾಣವಾಗಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ, ಅಶೋಕ್ ವಿ ರಾಮನ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

    75

    ಕೆವಿಎನ್​ ಪ್ರೊಡಕ್ಷನ್ಸ್​ಗೆ ಯಶ್​ ಮುಂದಿನ ಚಿತ್ರ ಕನ್ಫರ್ಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts