More

    70,421 ಹೊಸ ಕರೊನಾ ಪ್ರಕರಣ; 24 ಗಂಟೆಗಳಲ್ಲಿ 3,921 ಸಾವು

    ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 70,421 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಮಾರ್ಚ್ 31 ರಿಂದೀಚೆಗಿನ ಅತಿ ಕಡಿಮೆ ಸೋಂಕು ಪ್ರಮಾಣವಾಗಿದೆ. ನಿನ್ನೆಯ ದಿನ ಸಾಪ್ತಾಹಿಕ ಸರಾಸರಿ 19 ಲಕ್ಷಕ್ಕಿಂತ ಕಡಿಮೆ, ಅಂದರೆ 14.92 ಲಕ್ಷ ಸ್ಯಾಂಪಲ್​ಗಳನ್ನು ಕರೊನಾ ಪರೀಕ್ಷೆಗಾಗಿ ಸಂಗ್ರಹಿಸಲಾಯಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಕರೊನಾ ಸಾವುಗಳ ಸಂಖ್ಯೆ ಚಿಂತಾಜನಕವಾಗಿಯೇ ಇದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,921 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲೇ 2,800 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಐದು ರಾಜ್ಯಗಳೆಂದರೆ ತಮಿಳುನಾಡು – 14,016 ಪ್ರಕರಣಗಳು, ಕೇರಳ – 11,584 ಪ್ರಕರಣಗಳು, ಮಹಾರಾಷ್ಟ್ರ – 10,442 ಪ್ರಕರಣಗಳು, ಕರ್ನಾಟಕ – 7,810 ಪ್ರಕರಣಗಳು ಮತ್ತು ಆಂಧ್ರಪ್ರದೇಶ – 6,770 ಪ್ರಕರಣಗಳು. ಶೇ. 71.88 ರಷ್ಟು ಹೊಸ ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾಗಿದ್ದು, ತಮಿಳುನಾಡು ಒಂದೇ ಶೇ. 19.9 ರಷ್ಟು ಪ್ರಕರಣಗಳಿಗೆ ಕಾರಣವಾಗಿದೆ. (ಏಜೆನ್ಸೀಸ್)

    ಸೋಷಿಯಲಿಸಂ ಕೈಹಿಡಿದ ಮಮತಾ ಬ್ಯಾನರ್ಜಿ! ಬಂಗಾಳದಲ್ಲಲ್ಲ, ತಮಿಳುನಾಡಲ್ಲಿ!

    ಇಂಧನ ಬೆಲೆ ಏರಿಕೆ : ಜನಹಿತ ಯೋಜನೆಗಳಿಗಾಗಿ ಹಣ ಉಳಿಸುತ್ತಿದ್ದೇವೆ ಎಂದ ತೈಲ ಸಚಿವ

    VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts