More

    ಆಕ್ಸಿಜನ್ ಹೊತ್ತು ತರಲಿವೆ 7 ನೌಕಾ ಪಡೆ ಹಡಗುಗಳು

    ನವದೆಹಲಿ : ದೇಶದ ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತೀಯ ನೌಕಾ ಪಡೆಯು ಆಪರೇಷನ್ ಸಮುದ್ರ ಸೇತು-2 ಆರಂಭಿಸಿದೆ. ಅನ್ಯಾನ್ಯ ರಾಷ್ಟ್ರಗಳಿಂದ ನೌಕಾ ಪಡೆಯ ಏಳು ಹಡಗುಗಳು ತುಂಬಿದ ಆಕ್ಸಿಜನ್ ಟ್ಯಾಂಕ್​ಗಳೊಂದಿಗೆ ಇತರ ವೈದ್ಯಕೀಯ ಅಗತ್ಯಗಳನ್ನೂ ಹೊತ್ತು ತರಲಿವೆ.

    ಸಮುದ್ರ ಸೇತು 2 ಆಪರೇಷನ್​ನ ಅಂಗವಾಗಿ, ಏಳು ನೌಕಾ ಪಡೆಯ ಹಡಗುಗಳು – ಐಎನ್​ಎಸ್​ ಕೊಲ್ಕತ, ಐಎನ್​ಎಸ್​ ಕೊಚಿ, ಐಎನ್​ಎಸ್​ ತಲ್ವಾರ್, ಐಎನ್​ಎಸ್​ ತಬರ್, ಐಎನ್​ಎಸ್​ ತ್ರಿಕಾಂಡ್, ಐಎನ್​ಎಸ್​ ಜಲಶ್ವ ಮತ್ತು ಐಎನ್​ಎಸ್​ ಐರಾವತ್​ಗಳನ್ನು ಮೆಡಿಕಲ್ ಆಕ್ಸಿಜನ್ ತುಂಬಿದ ಕ್ರಯೋಜೆನಿಕ್ ಕಂಟೇನರ್​​ಗಳನ್ನು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ತರಲು ನಿಯೋಜಿಸಲಾಗಿದೆ ಎಂದು ನೇವಿ ಟ್ವಿಟರ್ ಮೂಲಕ ತಿಳಿಸಿದೆ.

    ಇದನ್ನೂ ಓದಿ: ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

    ಈಗಾಗಲೇ ಐಎನ್​ಎಸ್ ತಲ್ವಾರ್ 40 ಎಂಟಿ ಲಿಖ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್​ಎಂಒ) ವನ್ನು ಬಹ್ರೇನ್​ನಲ್ಲಿ ಲೋಡ್​ ಮಾಡಿಕೊಂಡಿದ್ದು, ಭಾರತಕ್ಕೆ ಹಿಂತಿರುಗುತ್ತಿದೆ. ಐಎನ್ಎಸ್​​ ಕೊಲ್ಕತ ದೋಹ, ಕತಾರ್​ಗೆ ವೈದ್ಯಕೀಯ ಅಗತ್ಯಗಳನ್ನು ಪಡೆದು ಮತ್ತೆ ಕುವೈತ್​ನಲ್ಲಿ ಎಲ್​ಎಂಒ ಟ್ಯಾಂಕ್​ಗಳನ್ನು ಪಡೆಯಲು ಪ್ರಯಾಣ ಬೆಳೆಸಲಿದೆ. ಐಎನ್​ಎಸ್​ ಐರಾವತ್​ ಆಕ್ಸಿಜನ್ ಟ್ಯಾಂಕ್​​ಗಳನ್ನು ಪಡೆಯಲು ಸಿಂಗಪೂರ್​ ಪ್ರವೇಶಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO | ನೋಡಿ, ಭಾರತ ಪ್ರವೇಶಿಸಿತು, ಮತ್ತೊಂದು ಕರೊನಾ ಲಸಿಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts