More

    ಕಾಬುಲ್​ ವಿಮಾನ ನಿಲ್ದಾಣದಲ್ಲಿ ಏಳು ಆಫ್ಘಾನ್​ ನಾಗರಿಕರ ಬರ್ಬರ ಹತ್ಯೆ

    ಕಾಬುಲ್​: ಕಾಬುಲ್​ ವಿಮಾನ ನಿಲ್ದಾಣದಲ್ಲಿ ನಡೆದ ಸಂಘರ್ಷದಲ್ಲಿ ಆಫ್ಘಾನ್​ನ 7 ನಾಗರಿಕರನ್ನು ಹತ್ಯೆ ಮಾಡಲಾಗಿದೆ. ತಾಲಿಬಾನಿಗಳು ಆಫ್ಘಾನ್ ಆಕ್ರಮಿಸಿಕೊಂಡ ಬಳಿಕ ದೇಶ ಬಿಟ್ಟು ಹೋಗಲು ಅಲ್ಲಿನ ನಾಗರಿಕರು ಕಾಬುಲ್​ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದು, ಈ ವೇಳೆ ಉಂಟಾದ ಸಂಘರ್ಷದಲ್ಲಿ ನಾಗರಿಕರ ಹತ್ಯೆಯಾಗಿದೆ.

    ಹತ್ಯೆಯಾಗಿರುವ ಮಾಹಿತಿಯನ್ನು ಬ್ರಿಟಿಷ್​ ಮಿಲಿಟರಿ ಖಚಿತಪಡಿಸಿದೆ. ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಆಫ್ಘಾನ್​ ನೆಲ ತುಂಬಾ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ. ಆದರೆ, ನಾವು ಎಲ್ಲವನ್ನು ನಿರ್ವಹಿಸುವ ಮತ್ತು ಜನಗಳ ಸುರಕ್ಷತೆಗೆ ಸಾಧ್ಯವಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಬ್ರಿಟಿಷ್​ ಮಿಲಿಟರಿ ಹೇಳಿದೆ.

    ಸಾವಿರಾರು ಆಫ್ಘಾನ್​ ಮಂದಿ ದೇಶ ತೊರೆಯಲು ತುದಿಗಾಲಲ್ಲಿ ನಿಂತಿರುವುದರಿಂದ ಅಲ್ಲಿನ ಪರಿಸ್ಥಿತಿ ತುಂಬಾ ವಿಷಮವಾಗಿದೆ. ತಾಲಿಬಾನ್​ ಇಡೀ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ವಾರಗಳು ಕಳೆದಿದ್ದು, ಈಗಾಗಲೇ ಸಾಕಷ್ಟು ನಾಗರಿಕರು ತಾಲಿಬಾನಿಗಳ ಅಟ್ಟಹಾಸನಕ್ಕೆ ನಲುಗಿದ್ದಾರೆ. (ಏಜೆನ್ಸೀಸ್​)

    ಶ್ವಾನದಿಂದ ಶುರುವಾದ ಲವ್​ಸ್ಟೋರಿ: ಇದು ಇಂಗ್ಲಿಷ್​ ಲೇಡಿ-ಕೇರಳ ಯುವಕನ ಅಪರೂಪದ ಪ್ರೇಮ ಕತೆ!

    ಕಲ್ಲಂಗಡಿ ಹಣ್ಣಿನಿಂದ ಟೇಸ್ಟಿ ಟೇಸ್ಟಿ ಪಿಜ್ಜಾ ಮಾಡಿದ್ದನ್ನು ನೋಡಿರುವಿರಾ? ಇಲ್ಲಿದೆ ವೈರಲ್​ ವಿಡಿಯೋ

    ಸಂಸದನಿಂದ ರೇಪ್​ ಆರೋಪಿಸಿ ಸುಪ್ರೀಂ ಕೋರ್ಟ್​ ಮುಂದೆ ಬೆಂಕಿ ಹಚ್ಚಿಕೊಂಡರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts