More

    ‘ಭಾಗ್ಯವಂತ’ರೊಂದಿಗೆ ‘ಸಾಂಗ್ಲಿಯಾನ’; ಈ ವಾರ 7 ಚಿತ್ರಗಳ ಬಿಡುಗಡೆ

    ಬೆಂಗಳೂರು: ಕನ್ನಡ ಚಿತ್ರಗಳ ಆರ್ಭಟ ಜೋರಾಗಿದೆ. ಈ ವರ್ಷ ಕೆಲವು ತಿಂಗಳಗಳ ಕಾಲ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ಹಾಗೆಯೇ ಕೆಲವು ತಿಂಗಳುಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಈ ತಿಂಗಳು 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಆ ಪೈಕಿ ಈ ಶುಕ್ರವಾರ (ನ. 17) ಏಳು ಚಿತ್ರಗಳು ಬಿಡುಗಡೆಯಾಗಲಿಕ್ಕಿದೆ. ಅದರಲ್ಲಿ ಐದು ಹೊಸ ಚಿತ್ರಗಳಾದರೆ, ಎರಡು ಹಳೆಯ ಸೂಪರ್​ ಹಿಟ್​ ಚಿತ್ರಗಳು ಮರುಬಿಡುಗಡೆಯಾಗುತ್ತಿವೆ.

    'ಭಾಗ್ಯವಂತ'ರೊಂದಿಗೆ 'ಸಾಂಗ್ಲಿಯಾನ'; ಈ ವಾರ 7 ಚಿತ್ರಗಳ ಬಿಡುಗಡೆಈ ವಾರ ಬಿಡುಗಡೆಯಾಗುತ್ತಿರುವ ಹೊಸ ಚಿತ್ರಗಳ ಪೈಕಿ ಪ್ರಮುಖವಾಗಿದ್ದು ಪ್ರಜ್ವಲ್​ ಅಭಿನಯದ ‘ಅಬ್ಬರ’. ರಾಮ್​ನಾರಾಯಣ್​ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್​ಗೆ ನಾಯಕಿಯರಾಗಿ ನಿಮಿಕಾ ರತ್ನಾಕರ್​, ಲೇಖಾ ಚಂದ್ರ ಮತ್ತು ರಾಜಶ್ರೀ ಪೊನ್ನಪ್ಪ ಅಭಿನಯಿಸಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್​ ಚಿತ್ರವಾಗಿದ್ದು, ಮೂರು ಶೇಡ್​ಗಳಿರುವ ಪಾತ್ರದಲ್ಲಿ ಪ್ರಜ್ವಲ್​ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಅನಂತ್​ ನಾಗ್​ ತಾತ, ದಿಗಂತ್​ ಮೊಮ್ಮಗ; 30 ವರ್ಷಗಳ ನಂತರ ಭೇಟಿ

    ಇದಲ್ಲದೆ, ರವೀಂದ್ರ ವಂಶಿ ನಿರ್ದೇಶನದ ‘ಮಠ’ ಈ ವಾರ ಬಿಡುಗಡೆಯಾಗುತ್ತಿರುವ ಇನ್ನೊಂದು ಪ್ರಮುಖ ಚಿತ್ರ. ಗುರುಪ್ರಸಾದ್​, ತಬಲಾ ನಾಣಿ, ಸಾಧು ಕೋಕಿಲ, ಮಂಡ್ಯ ರಮೇಶ್​ ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧರಿಸಿ ಕಥೆ-ಚಿತ್ರಕಥೆ ರಚಿಸಲಾಗಿದೆ. ಈ ಚಿತ್ರವನ್ನು 25 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿರುವುದು ವಿಶೇಷ.

    ಹಿರಿಯ ನಿರ್ದೇಶಕ ವೇಮಗಲ್​ ಜಗನ್ನಾಥ ರಾವ್​ ನಿರ್ದೇಶನದ ‘ಆವರ್ತ’, ‘ಖಾಸಗೀ ಪುಟಗಳು’ ಮತ್ತು ‘ಕುಳ್ಳನ ಹೆಂಡತಿ’ ಎಂಬ ಹೊಸಬರ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿರುವ ಇನ್ನಿತರ ಚಿತ್ರಗಳು.

    ಇದನ್ನೂ ಓದಿ: ಬಾಲ ಕಲಾವಿದರೆಲ್ಲ ಒಂದೇ ವೇದಿಕೆಯಲ್ಲಿ; ಅಪ್ಪು ನೆನಪಲ್ಲಿ ಮಕ್ಕಳ ಚಿತ್ರೋತ್ಸವ

    'ಭಾಗ್ಯವಂತ'ರೊಂದಿಗೆ 'ಸಾಂಗ್ಲಿಯಾನ'; ಈ ವಾರ 7 ಚಿತ್ರಗಳ ಬಿಡುಗಡೆಇವೆಲ್ಲ ಹೊಸ ಚಿತ್ರಗಳಾದರೆ, ಹಿಂದೊಮ್ಮೆ ಬಿಡುಗಡೆಯಾಗಿ ಸೂಪರ್ ಹಿಟ್​ ಆದ ಕನ್ನಡದ ಎರಡು ಎವರ್​ಗ್ರೀನ್​ ಚಿತ್ರಗಳು ಈ ವಾರ ಪುನಃ ಬಿಡುಗಡೆಯಾಗುತ್ತಿದೆ. ಒಂದು ಡಾ. ರಾಜಕುಮಾರ್​ ಅಭಿನಯದ ‘ಭಾಗ್ಯವಂತರು’. ಇನ್ನೊಂದು ಶಂಕರ್​ ನಾಗ್​ ಅಭಿನಯದ ‘ಸಾಂಗ್ಲಿಯಾನ’. ಈ ಎರಡೂ ಚಿತ್ರಗಳು ಹೊಸ ತಂತ್ರಜ್ನಾನದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

    ಈ ಏಳು ಚಿತ್ರಗಳ ಪೈಕಿ ಪ್ರೇಕ್ಷಕರ ಕೃಪಾಕಟಾಕ್ಷ ಹೊಸ ಚಿತ್ರಗಳ ಮೇಲಿರುತ್ತದೋ ಅಥವಾ ಹಳೆಯ ಚಿತ್ರಗಳನ್ನೇ ಇನ್ನೊಮ್ಮೆ ಕಣ್ತುಂಬಿಕೊಳ್ಳುತ್ತಾರೋ ಎಂಬುದು ಶುಕ್ರವಾರ ಗೊತ್ತಾಗಲಿದೆ.

    ಥಾಯ್​ ಭಾಷೆಗೆ ಡಬ್​ ಆದ ‘777 ಚಾರ್ಲಿ; ಡಿ.1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts